ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೩೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨ಳಿಕೆ ಶ್ರೀಮದ್ರಾಮಾಯಣದ [ಸರ್ಗ, ೫೫. ಪನನು, ಈ ಉತ್ಪಾತಗಳನ್ನು ತನ್ನ ಕಣ್ಣಾರೆ ನೋಡಿಯೂ ಲಕ್ಷ್ಯಮಾಡದೆ, ರಣರಂಗಕ್ಕೆ ಹೋದನು, ಹೀಗೆ ಅವನು ಅನೇಕರಾಕ್ಷಸರೊಡನೆ ಯುದ್ಧಕ್ಕೆ ಹೊರಟುಬಂದಾಗ, ಇವನಕಡೆಯ ರಾಕ್ಷಸರು ಮಾಡಿದ ದೊಡ್ಡ ಸಿಂಹನಾದ ಧ್ವನಿಯು ಸಮುದ್ರವನ್ನೇ ಕದಲಿಸುವಂತೆ ಕೇಳಿಸುತಿತ್ತು, ಈ ರಾಕ್ಷಸರ ಕೋಲಾಹಲವನ್ನು ಕೇಳಿದಮಾತ್ರದಲ್ಲಿಯೇ ವಾನರ ಮನಸ್ಸಿನಲ್ಲಿ ಭಯವು ಹುಟ್ಟಿತು. ಈ ರಾಕ್ಷಸಸೈನ್ಯವನ್ನು ನೋಡುವುದಕ್ಕೆ ಮೊದಲೇ ಸಮಸ್ಯ ವಾನರರೂ, ಗಿಡಗಳ , ಬೆಟ್ಟಗಳನ್ನೂ ಕೈಗೆತ್ತಿಕೊಂಡು ಯುದ್ಧಕ್ಕೆ ಸಿದ್ಧರಾಗಿ ನಿಂತಿದ್ದರು. ಇತ್ತಲಾಗಿ ರಾಮನ ನಿಮಿತ್ತವಾಗಿಯೂ,ಅತ್ತಲಾಗಿ ರಾವಣನನಿಮಿತ್ತವಾಗಿಯೂ, ತಮ್ಮ ಪ್ರಾಣವನ್ನಾ ದರೂ ಒಪ್ಪಿಸುವುದ ಕ್ಕೆ ಸಿದ್ಧರಾಗಿದ್ದ ವಾನರಿಗೂ ರಾಕ್ಷಸರಿಗೂ ಬಹಳ ಭಯಂಕರವಾದ ಯುದ್ಧವು ಮೊದಲಾಯಿತು ಆ ವಾನರರಾಕ್ಷಸರಿಬ್ಬರೂ ಸಮಬಲವುಳ್ಳವ ರು, ಇಬ್ಬರೂ ಸಮಾನಶಲ್ಯವುಳ್ಳವರು ಇಬ್ಬರೂ ಪಕ್ವತದಂತೆ ಮಹಾ ಕಾಯವುಳ್ಳವರು. ಹೀಗೆ ಬಲವೀಲ್ಯಾದಿಗಳಲ್ಲಿ ಸಮಾನರಾದ ಈ ವಾನರ ರಾಕ್ಷಸರಿಬ್ಬರೂ ಒಬ್ಬರನ್ನೊಬ್ಬರು ಕೊಲ್ಲಬೇಕೆಂಬ ಹಟದಿಂದ ಘೋರ ಯುದ್ಧವನ್ನು ನಡೆಸಿದರು ಅತಿಬಲಾಡ್ಯರಾದ ಈ ಎರಡು ಪಕ್ಷದವರೂ ಆ ಯುದ್ಧಕಾಲದಲ್ಲಿ ಆಗಾಗ ನಡೆಸುತ್ತಿದ್ದ ಸಿಂಹನಾದಧ್ವನಿಗಳೂ, ಒ ಬ್ಬರನ್ನೊಬ್ಬರು ನೋಡಿದಾಗ ಕೋಪದಿಂದ ಬೊಬ್ಬಿಡುವ ಧ್ವನಿಗಳೂ, ಬಹಳ ಪ್ರಬಲವಾಗಿ ಕೇಳಿಸಿತು, ಈ ಎರಡು ಸೈನ್ಯಗಳ ಸಂಚಾರದಿಂದ ಮೇಲಿದ್ದ ಕೆಂಧೂಳಿಯು, ಅತ್ಯಂತಭಯಂಕರವಾಗಿ ಹತ್ತು ದಿಕ್ಕುಗಳನ್ನೂ ಮರೆಸುವಂತೆ ವ್ಯಾಪಿಸಿತು, ಬಿಳೀಪಟ್ಟಿಯ ದುಕೂಲದಂತೆ ಅಲ್ಲಲ್ಲಿ ಬಿಳು ಪಾಗಿ ಹಬ್ಬಿದ ಧೂಳಿಯಿಂದ, ಅಲ್ಲಿನ ಸಮಸ್ತಪ್ರಾಣಿಗಳೂ ಮರೆಸಿದಂ ತಾಯಿತು. ಯುದ್ಧಭೂಮಿಯೆಲ್ಲವೂ ಹೀಗೆ ಧೂಳಿಯಿಂದ ಮುಚ್ಚಿ ಹೋ ದಾಗ,ಅಲ್ಲಿನ ಧ್ವಜಗಳಾಗಲಿ, ಪತಾಕೆಗಳಾಗಲಿ, ಯುದ್ಧಕವಚಗಳಾಗಲಿ, ರಥಾಶ್ವಗಳಾಗಲಿ, ರಥಗಳಾಗಲಿ, ಆಯುಧಗಳಾಗಲಿ ಸ್ವಲ್ಪ ಮಾತ್ರವೂ ಕಾಣುತ್ತಿರಲಿಲ್ಲ ಆ ತುಮುಲಯುದ್ಧದಲ್ಲಿ ವಾನರರಾಕ್ಷಸರಿಬ್ಬರೂ, ಒಬ್ಬರ ಮೇಲೊಬ್ಬರು ಬಿಳುವ ಸಂರ್ಭಮದಲ್ಲಿ, ಆಗಾಗ ಬೊಬ್ಬೆಯಿಡುತಿದ್ದ ಸಿಂಹ