ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೩೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ, ೫೫.] ಯುದ್ದ ಕಂಡವು. ೨೪of ನಾದಧ್ವನಿಯೊಂದುಮಾತ್ರವೇ ಬಹಳಪ್ರಬಲವಾಗಿ ಕೇಳಿಸುತ್ತಿತ್ತೇ ಹೊರ ತು, ಇತರವಸ್ತುಗಳೊಂದೂ ಕಣ್ಣಿಗೆ ಗೋಚರಿಸುತ್ತಿರಲಿಲ್ಲ. ಹೀಗೆ ಆ ರಣರಂಗದ ಸಮಸ್ತ ಭಾಗಗಳೂ ಕೆಂಧೂಳಿಯಿಂದ ಕತ್ತಲೆಕವಿದಂತಾ ಗಲು, ಅಲ್ಲಲ್ಲಿ ಕೆಲವು ವಾನರರು ಕೋಪಾವೇಶಪರವಶರಾಗಿ, ತಮ್ಮವರೆಂಬು ದನ್ನೂ ತಿಳಿಯದೆ, ತಮ್ಮ ಕಡೆಯ ವಾನರರನ್ನೇ ಬಡಿದು ಕೊಲ್ಲುತಿದ್ದರು. ಹಾಗೆಯೇ ರಾಕ್ಷಸರೂ ತಮ್ಮ ಕಡೆಯ ರಾಕ್ಷಸರನ್ನೇ ಪ್ರಹರಿಸಿ ಸಂಹರಿ ಸುತಿದ್ದರು ಹೀಗೆ ವಾನರರಾಕ್ಷಸರಿಬ್ಬರೂ ಕೆಂದೂಳಿಯ ಕತ್ತಲೆಯಿಂದ ಕಣ್ಣು ಕಾಣದೆ, ಕೈಗೆ ಸಿಕ್ಕಿದ ಹಾಗೆಲ್ಲಾ ತಮ್ಮವರನ್ನೂ, ಶತ್ರುಗಳನ್ನೂ ಕೊಲ್ಲುತ್ತ, ಆ ಯುದ್ಧಭೂಮಿಯೆಲ್ಲವನ್ನೂ ಕ್ಷಣಮಾತ್ರದಲ್ಲಿ ಕೇವಲರ ಕ್ಯಮಯವನ್ನಾಗಿ ಮಾಡಿದರು ಇದರಮೇಲೆ ಈ ಸೈನಿಕರ ಕಾಲಿನ ತುಳಿ ತದಿಂದ ಆ ರಕ್ತಪ್ರವಾಹವೆಲ್ಲವೂ ಅಲ್ಲಲ್ಲಿ ಕೆಸರುಗಟ್ಟಿತು ವಿಶೇಷವಾದ ಈ ರಕ್ತಪ್ರವಾಹದಿಂದ, ನೆಲದಿಂದೆದ್ದ ಧೂಳಿಯು ಕ್ರಮಕ್ರಮವಾಗಿ ತಗ್ಗು , ಬಂದಿತು ಅಜ್ಜಿನ ಸಮಸ್ಯಭೂಪ್ರದೇಶವೂ ಕೇವಲ ಶವಶರೀರ ಗಳಿಂದಲೇ ತುಂಬಿಹೋಯಿತು ವಾನರರಾಕ್ಷಸರಿಬ್ಬರೂ, ವೃಕ್ಷಗಳಿಂದ ಲೂ, ಶಕ್ತಿಗಳಿಂದಲೂ, ಶಿಲೆಗಳಿಂದಲೂ, ಪ್ರಾಸಗಳಿಂದಲೂ, ಗದೆಗಳಿಂದ ಲೂ, ಪರಿಪುಗಳಿಂದಲ, ತೋಮರಗಳಿಂದಲJu ಒಬ್ಬರಿಗೊಬ್ಬರು ಬಹಳ ಸಾಹಸದಿಂದ ಕೊಡಾಡುತಿದ್ದರು ಪಕ್ವತಾಕಾರವುಳ್ಳ ಮತ್ತು ಭಯಂ ಕರಕರಿಗಳಾದ ಕೆಲವು ವಾನರರು, ದೊಡ್ಡ ಬಾಗಿಲಗುಳಿಗಳಂತಿ ತಮ್ಮ ಭುಜಗಳಿಂದ ಅಲ್ಲಲ್ಲಿ ಸಿಕ್ಕಿದ ತಕ್ಷಸರನ್ನು ಬಡಿದು ಕೊಂದರು ಹಾಗೆಯೇ ರಾಕ್ಷಸರೂ ಮಹಾಕೋಪವುಳ್ಳವರಾಗಿ, ಪ್ರಾಸತೋಮರಾತ್ಯಾಯುಧಗ ಛನ್ನೆ ತಿ ಹಿಡಿದು, ೩೦ತಿ ಕ್ಷಗಳಾದ ಆ ಮಹಾಯುಧಗಳಿಂದ ವಾನರರನ್ನು ವಥಿಸುತಿದ್ದರು ಹೀಗೆ ಆರಾಕ್ಷಸರು ತೋರಿಸುತಿದ್ದ ಭಯಂಕರಸಾಹಸವನ್ನು ಸೇನಾಪತಿಯಾದ ಅಕಂಪನನು ನೋಡಿ, ಅವರ ವೀರಕ್ಕೆ ಮೆಚ್ಚಿ, ಅವರನ್ನು ಮನ್ನಿಸಿ, ಮೇಲೆಮೇಲೆ ಪೊತ್ಸಾಹಿಸುತ್ತ, ತಾನೂ ಮೇಲೆಮೇಲೆ ಕೋಪ ದಿಂಡುಕ್ಕುತಿದ್ದನು. ಇತ್ತಲಾಗಿ ವಾನರವೀರರೂ ಕೂಡ ಅಲ್ಲಲ್ಲಿ ರಾಕ್ಷಸರ ೩ ದಿರಿಸಿ, ಅವರ ಕೈಗಳಲ್ಲಿದ್ದ ಆಯುಧಗಳನ್ನು ಕಿತ್ತುಕೊಂಡು, ದೊಡ್ಡ ದೊಡ್ಡ ಮರಗಳಿಂದಲೂ, ಕಲ್ಲುಗಳಿಂದಲೂ ಅವರನ್ನು ಬಡಿದು ಕೆಡಹು 152