ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೩೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೪೧೦ ಶ್ರೀಮದ್ರಾಮಾಯಣವು [ಸರ್ಗ, ೫೬. ತಿದ್ದರು. ಇಷ್ಟರಲ್ಲಿ ಕುಮುದನಳಮೈಂದದ್ವಿವಿದರೆಂಬ ನಾಲ್ಕು ಮಂದಿ ವಾನರವೀರರು, ಆ ರಾಕ್ಷಸರ ಹಾವಳಿಯನ್ನು ನೋಡಿ ಕೋಪಗೊಂಡವ ರಾಗಿ, ಮಹಾವೇಗವನ್ನು ಹಿಡಿದು ಮುಂದೆ ನುಗ್ಗಿದರು. ಮಹಾವೀರವುಳ್ಳ ಈ ನಾಲ್ಕು ಮಂದಿ ವಾನರೆಯೂಥಪತಿಗಳೂ, ರಾಕ್ಷಸರ ಸೇನಾಮುಖ ವನ್ನು ಸೇರಿ, ದೊಡ್ಡ ದೊಡ್ಡ ಮರಗಳನ್ನು ಹಿಡಿದು ಲೀಲಾಮಾತ್ರದಿಂ ದಲೇ ದೊಡ್ಡ ಯುದ್ಧವನ್ನು ನಡೆಸಿದರು. ಈ ನಾಲ್ವರೂ ರಾಕ್ಷಸಸೇನೆ ಯಲ್ಲಿ ನುಗ್ಗಿ, ಗುಂಪುಗುಂಪಾಗಿ ರಾಕ್ಷಸರನ್ನು ಹಿಡಿದು ಕೊಲ್ಲುತಿದ್ದರು ಇಲ್ಲಿಗೆ ಐವತ್ತೈದನೆಯ ಸರ್ಗವು. -w+ ಆಕಂಪನನು ಹನುಮಂತನಿಂದ ಹತನಾದುದು. - ಈ ವಾನರೋತ್ತಮರು ಹೀಗೆ ರಾಕ್ಷಸಸೈನ್ಯದಲ್ಲಿ ದೊಡ್ಡ ಸಾ ಹಸವನ್ನು ನಡೆಸುತ್ತಿರುವುದನ್ನು ನೋಡಿ, ಅಕಂಪನನು ಅತ್ಯಾಕ್ರೋಶವ ನ್ನು ಹೊಂದಿದನು ಶತ್ರುಗಳ ಬಾಧೆಯನ್ನು ನೋಡಿ ಕೋಪಪರವಶನಾದ ಆ ಅಕಂಸನನು, ತನ್ನ ಮಹಾಧನುಸ್ಸನ್ನು ಮಿಡಿಯುತ್ತ, ತನ್ನ ಸಾರಥಿ ಯನ್ನು ಕುರಿತು, (ಎಲೆ ಸೂತನೆ ! ಅದೋ ' ಅತ್ತಲಾಗಿ ಅನೇಕವಾನರರು ಸೇರಿ ನಮ್ಮ ಕಡೆಯ ರಾಕ್ಷಸರನ್ನು ತಂಡತಂಡವಾಗಿ ಕೊಲ್ಲುತ್ತಿರುವರು. ಶೀಘ್ರದಲ್ಲಿ ಅಲ್ಲಿಗೆ ರಥವನ್ನು ನಡೆಸು ! ಆ ವಾನರರೆಲ್ಲರೂ ಬಹಳ ಭಯಂ ಕರ ಸ್ವರೂಪವುಳ್ಳವರು ! ಬಹಳ ಬಲಾಡ್ಯರು ಗಿಡಗಳನ್ನೂ, ಬೆಟ್ಟಗಳ ನ್ಯೂ ಆಯುಧಗಳನ್ನಾಗಿ ಹಿಡಿದು, ನಮಗಿದಿರಾಗಿ ನಿಂತಿರುವರು ಯುದ್ಧ ವಿಶಾರದರೆಂದು ಪ್ರಸಿದ್ಧಿ ಹೊಂದಿದ ಆ ಸಮಸ್ತವಾನರರನ್ನೂ ನಾನು ಈಗಲೇ ಕೊಲ್ಲಬೇಕೆಂದಿರುವೆನು. ಇವರಿಂದ ನಮ್ಮ ಸಮಸ್ತರಾಕ್ಷಸಸ್ಯೆ ನ್ಯವೂ ಹತವಾದಂತೆ ಕಾಣುತ್ತಿದೆ. ರಥವನ್ನು ಬೇಗನೆ ನಡೆಸು” ಎಂದನು. ರಥಿಕೊತ್ತಮನಾದ ಆಕಂಪನನು ಹೀಗೆಂದು ಹೇಳಿ, ಮಹಾವೇಗವುಳ್ಳ ಕುದುರೆಗಳಿಂದ ಕೂಡಿದ ತನ್ನ ರಥವನ್ನು ನಡೆಸಿಕೊಂಡು ಬಂದು, ಕೋಪ ದಿಂದ ಬಾಣಪರಂಪರೆಗಳನ್ನು ಕರೆಯುತ್ತ, ಅನೇಕ ವಾನರರನ್ನು ಕೊಲ್ಲುತ್ತ ಬಂದನು. ಆಗ ವಾನರರಿಗೆ ಅವನಮುಂದೆ ನಿಲ್ಲುವುದೇ ಸಾಧ್ಯವಿಲ್ಲದೆಹೋ