ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೩೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ, ೫e j ಯುದ್ಧಕಾಂಡವು ೨೪೧೫ ಲದಲ್ಲಿ ಹಾಸಿಗೆಯಿಂದೆಮ್ಮೊಡನೆ, ತನ್ನ ಸೇನಾವ್ಯೂಹಗಳೆಲ್ಲವನ್ನೂ ನೋಡಿ ಬರುವುದಕ್ಕಾಗಿ ಪಟ್ಟಣವನ್ನು ಸುತ್ತುವುದಕ್ಕೆ ಹೋದನು. ಹೀಗೆ ರಾವ ಇನು ಅರಮನೆಯಿಂದ ಹೊರಟು ಅನೇಕರಾಕಸಸಮೂಹಗಳಿಂದ ಸುರಕ್ತಿ ತವಾಗಿಯೂ, ಅನೇಕಸೇನಾವ್ಯೂಹಗಳಿಂದ ನಿಬಿಡವಾಗಿಯೂ, ಧ್ವಜಪತಾ ಕೆಗಳ ಸಾಲಿನಿಂದ ಶೋಭಿತವಾಗಿಯೂ ಇದ್ದ ತನ್ನ ಪಟ್ಟಣವೆಲ್ಲವನ್ನೂ ನೋಡಿದನು ರಾಕ್ಷಸೇಶ್ವರನಾದ ಆ ರಾವಣನು,ತನ್ನ ಪುರದಸುತ್ತಲೂ ವಾ ನರಸೇನೆಯು ಮುತ್ತಿನಿಂತಿರುವುದನ್ನು ನೋಡಿ ಸಹಿಸಲಾರದೆ, ಉಚಿತಕಾಲ ದಲ್ಲಿ ತನಗೆ ಪರಮಾಪ್ತನಾಗಿಯೂ, ಯುದ್ಧವಿಶಾರದನಾಗಿಯೂ ಇರುವ ಪ್ರಹಸನನ್ನು ಕರೆದು ಹೇಳುವನು ಪ್ರಹಸ್ತಾ' ನೀನಾದರೋ ಯುದ್ಧ ದಲ್ಲಿ ಮಹಾನಿಪುಣನು ನಿನಗೆ ತಿಳಿಯದ ವಿಷಯವಿಲ್ಲ. ಈಗ ಶತ್ರುಸೈನ್ಯವು ಬಂದು ಅಕಸ್ಮಾತ್ತಾಗಿ ನಮ್ಮ ಪಟ್ಟಣವನ್ನು ಮುತ್ತಿ ಪೀಡಿಸುತ್ತಿರುವುದು. ಇದನ್ನು ತಪ್ಪಿಸುವುದಕ್ಕೆ, ಯುದ್ಧವಲ್ಲದೆ ಬೇರೆಯಾವ ಉಪಾಯವೂ ನನಗೆ ತೋರಲಿಲ್ಲ: ಈ ಕಾರಭಾರವನ್ನು ಸರಿಯಾಗಿ ನಡೆಸಬೇಕಾದರೆ, ನಾನಾಗಲಿ ನೀನಾಗಲಿ, ನಿನ್ನ ಕುಮಾರನಾದ ಇಂದ್ರಜಿತ್ತಾಗಲಿ, ನಿಕುಂಭನಾಗಲಿ, ಇ ಷ್ಟು ಮಂದಿಯಲ್ಲಿ ಯಾರಾದರೂ ಒಬ್ಬರು ಮುಂದೆ ನಿಲ್ಲಬೇಕೇಹೊರತು, ಇದನ್ನು ತಪ್ಪಿಸುವುದಕ್ಕೆ ಬೇರೊಬ್ಬರಿಂದ ಸಾಧ್ಯವಿಲ್ಲ.ಆದುದರಿಂದ ಅಂ ತಹ ಮಹಾಬಲಸಂಪನ್ನ ನಾದ ನೀನೇ ಈಗತಕ್ಕಷ್ಟು ಸೈನ್ಯವನ್ನು ಸೇರಿಸಿಕೊಂ ಡು ತೀಘ್ರದಲ್ಲಿಯೇ ಆ ವಾನರರಿರುವ ಸ್ಥಳಕ್ಕೆ ಹೋಗಿ ಜಯವನ್ನು ಹೊಂ ಡಿಬರಬೇಕು, ಪ್ರಹಸ್ಕಾ' ನೀನು ಅಲ್ಲಿಗೆ ಹೋಗಿ ಯುದ್ಧ ಮಾಡಬೇಕಾದ ಆವಶ್ಯಕವೇ ಇಲ್ಲ.ಇಪ್ಲಿಂದ ನೀನು ಯುದ್ಧಸನ್ನದ್ಧನಾಗಿ ಹೊರಟಾಗ, ನಿನ್ನ ರಾಕ್ಷಸಸೈನಿಕರ ಸಿಂಹನಾದಧ್ವನಿಗಳನ್ನು ಕೇಳಿದಮಾತ್ರದಲ್ಲಿಯೇ ಸ್ವಭಾವ ಚಪಲವಾದಆವಾನರಸೈನ್ಯವೆಲ್ಲವೂ ಭಯದಿಂದ ಪಲಾಯನಮಾಡಬಹುದು.

  • ಇಲ್ಲಿ 'ನಾನ್ಯಯುದ್ಧಾಪಶ್ಯಾಮಿ ಮೋಕ್ಷಂ ಯುದ್ಧ ವಿಶಾರದ"ಎಂದು ಮೂಲವು ಇದಕ್ಕೆ “ ನಾನ್ಯಂ ಯುದ್ಧಾಪಶ್ಯಾಮಿ ” ಎಂಬ ಪಾಠಾಂತರವೂ ಉಂಟು. ಈ ಪಾಠದಲ್ಲಿ 'ಯುದ್ಧವಲ್ಲದೆ ಬೇರೆ ಯಾವ ಮಾರ್ಗದಿಂದಲೂ ನಮಗೆ ಬಿಡುಗಡೆಯಿಲ್ಲವೆಂದು ನನಗೆ ತೋರುವುದು ” ಎಂದು ಅಗ್ಗಾಂತರವನ್ನು ಗ್ರಹಿಕ ಬೇಕು.

++ - - = - -