ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೩೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ, ೫೮. || ಯುದ್ಧಕಾಂಡವು. ೨೪೨೧ ವ ಶಲಭದಂತೆ ಆ ದೊಡ್ಡ ವಾನರಸೇನೆಯನ್ನು ಪ್ರವೇಶಿಸಿದನು. ಇಲ್ಲಿಗೆ ಐವತ್ತೇಳನೆಯ ಸರ್ಗವು. w+ ಪ್ರಹಸ್ತನು ನೀಲನಿಂದ ಹತನಾದುದು, ww ಹೀಗೆ ಭಯಂಕರಪರಾಕ್ರಮವುಳ್ಳ ಪ್ರಹಸ್ತನು ದಂಡೆತ್ತಿ ಬರುವು ದನ್ನು *ನೋಡಿ ಪರಂತಪನಾದ ರಾಮನು, ಅಂತಹ ಬಲಾಡ್ಯನಾದ ಶತ್ರು ವನ್ನು ನೋಡುವುದರಿಂದುಂಟಾದ ರಣೋತ್ಸಾಹದಿಂದ ಮುಗುಳ್ಳ ಗೆಗೂ ಡಿ, ಸಮೀಪದಲ್ಲಿದ್ದ ವಿಭೀಷಣನನ್ನು ಕುರಿತು, (ಎಲೆ ಮಹಾಬಾಹೂ ಬ ಹಳ ದೊಡ್ಡ ದೇಹವುಳ್ಳ ಆ ರಾಕ್ಷಸನಾವನು ? ಅಪರಿಮಿತವಾದ ದೊಡ್ಡ ಸೇನೆಯನ್ನು ಕಟ್ಟಿಕೊಂಡು ಬರುವನಲ್ಲಾ ' ಅವನು ಬಹಳ ವೀರವುಳ್ಳವ ನೆಂದು ತೋರುವುದು ' ಅವನ ಹೆಸರೇನು ಹೇಳು !” ಎಂದನು, ಅದಕ್ಕಾ ವಿಭೀಷಣನು ರಾಮನನ್ನು ಕುರಿತು « ರಾಮಾ ! ಆ ರಾಕ್ಷಸನೇ ರಾವಣನಿ ಗೆ ಪ್ರಧಾನಸೇನಾಧಿಪತಿಯು ಅವನಿಗೆ ಪ್ರಹಸನೆಂದು ಹೆಸರು : ಲಂಕೆ ಯಲ್ಲಿ ರಾಕ್ಷಸರಾಜನಾದ ರಾವಣನ ಸೈನ್ಯದಲ್ಲಿ ಮೂರರಲ್ಲೊಂದು ಪಾ ಲನ್ನು ಈಗ ಅವನು ತನ್ನೊಡನೆ ಕರೆತಂದಿರುವನು ಇಷ್ಟು ಸೈನ್ಯವೂ ಈಗ ಆವನ ಆಜ್ಞಾಧೀನವಾಗಿ ಬಂದಿರುವುದು ಅವನು ಬಹಳ ಬಲಾಢನು ಸರಾ ಸ್ಯಗಳನ್ನೂ ತಿಳಿದವನು ಮಹಾಶೂರನು ಪರಾಕ್ರಮದಲ್ಲಿ ಪ್ರಸಿದ್ಧಿ ಹೊಂದಿ ದವನು”ಎಂದನು. ಇಷ್ಟರಲ್ಲಿ ಇತ್ತಲಾಗಿ ವಾನರಸೈನ್ಯವೆಲ್ಲವೂ, ಆ ಪ್ರಹಸ್ಯ ನನ್ನು ನೋಡಿದೊಡನೆ ರೋಷದಿಂದುಕ್ಕುತ್ಯ,ಮಹಾಧ್ವನಿಯಿಂದ ಗರ್ಜಿಸುತಿ ದ್ದುವು.ಭಯಂಕರಪರಾಕ್ರಮವುಳ್ಳವನಾಗಿಯೂ, ಭಯಂಕರವಾದ ದೊಡ್ಡ ದೇಹವುಳ್ಳವನಾಗಿಯೂ ಇದ್ದ ಆ ಪ್ರಹಸನು, ದೊಡ್ಡ ರಾಕ್ಷ' ಸೇನೆಯಿಂ

  • ಲಂಕೆಯ ಪೂರೋತ್ತರದ್ಘಾರಗಳಿಗೆ ಎಷ್ಟೊಯೋಜನಗಳ ದೂರವಿ ರುವಾಗ, ಉತ್ತರದ್ವಾರದಲ್ಲಿ ನಿಂತಿದ್ದ ರಾಮನು ಶರದ್ಯಾರಕ್ಕೆ ಹೋದ ಪ್ರಹ ನನ್ನು ನೋಡಿದುದು ಹೇಗೆ ?” ಎಂದರೆ, ರಾಮನು ಈ ವಿಷಯವನ್ನು ಆಪ್ತವಾಕ್ಯ ದಿಂದ ಕೇಳಿದುದೇಹೊರತು ತಾನಾಗಿ ನೋಡಲಿಲ್ಲವು. ಆಪ್ತವಾಕ್ಯವನ್ನೇ ಪ್ರತ್ಯಕ್ಷ ಸಮಾನವಾಗಿ ತಿಳಿದು ಹೀಗೆ ಕೇಳಿದುದಾಗಿ