ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೪೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವರ್ಗ: ೫೮.] ಯುದ್ದ ಕಾಂಡವು. ೨೪೨೩ ಸುತ್ತಲೂ ತಂಡತಂಡವಾಗಿ ಸತ್ತು ಚೂರ್ಣೇಭೂತರಾಗಿ ಬಿಳುತಿದ್ದರು. ಅಲ್ಲಲ್ಲಿ ವಾನರರು ಕೈಗೆ ಸಿಕ್ಕಿದ ರಾಕ್ಷಸರನ್ನು ವಜ್ರಾಯುಧದಂತೆ ಕಠಿನಗ ಳಾದ ಆಂಗೈಗಳಿಂದಲೂ, ಮುಷ್ಟಿಗಳಿಂದಲೂ ಅಪ್ಪಳಿಸುತ್ತಿರಲು, ಆ ರಾ ಕ್ಷಸರೆಲ್ಲರೂ, ವಾನರವೀರರ ಪ್ರಹಾರಕ್ಕೆ ತಡೆಯಲಾರದೆ, ಹಲ್ಲು ಮುರಿ ದು, ಕಣ್ಣಾಲೆಗಳು ಕಳಚಿ, ಬಾಯಿಂದ ರಕ್ತವನ್ನು ಕಾರುತ್ತ ಸತ್ತು ಕೆಳಗೆ ಬಿಳುತಿದ್ದರು ಆ ರಣರಂಗದಲ್ಲಿ ಅಲ್ಲಲ್ಲಿ ಕೊಲ್ಲಲ್ಪಟ್ಟವರ ಆರ್ತಧ್ವನಿಯೂ, ಕೊಂದವರ ಸಿಂಹನಾದಧ್ವನಿಯೂ ಒಂದಾಗಿ ಸೇರಿ, ದೊಡ್ಡ ಕೋಲಾಹ ಲವು ಹೊರಟಿತು ವಾನರರಾಕ್ಷಸರಿಬ್ಬರೂ ಪರಸ್ಪರಕೋಪಾವೇಶವನ್ನು ತೋರಿಸುತ್ತ, ತಮ್ಮ ತಮ್ಮ ಚಾತುರಕ್ಕೆ ತಕ್ಕಂತೆ ಯುದ್ಧವನ್ನು ನಡೆಸು ತಿದ್ದರು ಒಬ್ಬೊಬ್ಬರೂ ನಿರ್ಭಯರಾಗಿ ಶತ್ರುಗಳನ್ನಿ ದಿರಿಸಿ, ಕೋಪ ದಿಂದ ಕಣಲೆಗಳನ್ನು ತಿರುಗಿಸುತ್ತ ವಿಚಿತ್ರ ರೀತಿಯಿಂದ ಯುದ್ಧಕಾರ ಗಳನ್ನು ನಡೆಸುತ್ತಿದ್ದರು. ಈ ನಡುವೆ ಪ್ರಹಸನ ಮಂತ್ರಿಗಳಾದ, 'ನರಾಂ ತಕ, ಕುಂಭಹನು, ಮಹಾನಾದ, ಸಮುನ್ನ ತರೆಂಬ ನಾಲ್ವರು ರಾಕ್ಷಸರೂ, ಅತ್ಯಾಕ್ರೋಶಗೊಂಡು, ಅಲ್ಲಲ್ಲಿ ಸಿಕ್ಕಿದ ವಾನರರನ್ನು ಸಂಹರಿಸುತ್ತ ಬಂ ದರು. ಹೀಗೆ ಮಹಾವೇಗದಿಂದ ವಾನರರಮೇಲೆ ಬಿದ್ದು ಅವರನ್ನು ಕೊಲ್ಲು ತಿದ್ದ ಈ ಪ್ರಹಸ್ತಮಂತ್ರಿಗಳನ್ನು ನೋಡಿ ದ್ವಿವಿದನು, ಕೋಪದಿಂದ ಒಂದು ಪರ್ವತಶಿಖರವನ್ನು ಕಿತ್ತು ತಂದು, ಅದರಿಂದ ನರಾಂತಕನನ್ನು ಕೊಂದು ಕೆಡಹಿದನು ಹಾಗೆಯೇ ಬಹಳವಾದ ಹಸ್ತಲಾಘುವವುಳ್ಳದು ರ್ಮುಖನೆಂಬ ಕಪಿಯು ಒಂದು ದೊಡ್ಡ ಮರವನ್ನು ಕಿತ್ತು ತಂದು, ಅದ ರಿಂದ ಸಮುನ್ನ ತನೆಂಬವನನ್ನು ಬಡಿದು ಕೆಡಹಿದನು. ತೇಜಸ್ವಿಯಾದ ಜಾಂಬವಂತನು ಒಂದು ದೊಡ್ಡ ಶಿಲೆಯನ್ನು ತಂದು ಮಹಾನಾದನೆಂಬ ವನ ಎದೆಗೆ ಗುರಿಯಿಟ್ಟು ಬೀಸಿ ಅವನನ್ನು ಪೂರ್ಣಮಾಡಿದನು. ತಾರನೆಂಬ ಕಪಿವೀರನು ಬಂದು ದೊಡ್ಡ ಮರವನ್ನು ಬೀಸಿ ಅದರಿಂದ ಕುಂಭಹನುವಿನ ತಲೆಯನ್ನು ಕತ್ತರಿಸಿ ಕೆಡಹಿದನು. ಇವೆಲ್ಲವನ್ನೂ ನೋಡಿ ರಥದಮೇ ಲಿದ್ದ ಪ್ರಹಸನು, ಈ ವಾನರರ ಕಾರಕ್ಕಾಗಿ ಬಹಳಕೋಪಗೊಂಡು, ತನ್ನ ಮಹಾಧನುಸ್ಸನ್ನು ಕೈಗೆತ್ತಿಕೊಂಡು, ಭಯಂಕರವಾದ ಯುದ್ಧವನ್ನಾರಂ ಭಿಸಿದನು. ಆ ಮಹಾಯುದ್ಧದಲ್ಲಿ ಎರಡು ಸೇನೆಗಳಿಂದಲೂ ಹೊರಟ ದೊ