ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೪೦೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೪೨೮ ಶ್ರೀಮದ್ರಾಮಾಯಣವು (ಸರ್ಗ, ೫೯ ಮುಂದೆ ನಿಂತು, ಸೇನಾಪತಿಯಾದ ಪ್ರಹಸನು ನೀಲನಿಂದ ಹತನಾದ ಸಂಗತಿಯನ್ನು ತಿಳಿಸಿದುವು. ಇದನ್ನು ಕೇಳಿದೊಡನೆ ರಾವಣನಿಗೆ ತನ್ನ ಜ ಯದಲ್ಲಿ ನಂಬಿಕೆಯು ತಪ್ಪಿತು. ತನಗಿಂತಲೂ ಶತ್ರುಗಳೇ ಹೆಚ್ಚು ಬಲವು ಇವರೆಂದು ತೋರಿತು. ಹೀಗಿದ್ದರೂ ಅವನು ತನ್ನ ಹೆಮ್ಮೆಯನ್ನು ಬಿಡದೆ ಇಂತಹ ಸಂದರ್ಭಗಳಲ್ಲಿ ತಾನು ಆ ಶತ್ರುಗಳನ್ನಾಶ್ರಯಿಸಬೇಕಾಗಿದ್ದರೂ, ಆ ದಾರಿಯನ್ನು ಬಿಟ್ಟು,ಮೇಲೆಮೇಲೆ ಕೋಪವನ್ನೆ ಹೊಂದಿದವನಾದನು ಯುದ್ಧದಲ್ಲಿ ಪ್ರಹಸನು ಹತನಾದುದನ್ನು ಕೇಳಿದೊಡನೆ ರಾವಣನು, ದುಃಖದಿಂದಲೂ, ಕೋಪದಿಂದಲೂ ಮೈಮರೆತವನಾಗಿ, ತನ್ನ ಮುಂದಿ " ರಾಕ್ಷಸಯೋಧರನ್ನು ಕುರಿತು, ದೇವೇಂದ್ರನು ದೇವತೆಗಳಿಗೆ ಆಜ್ಞೆಮಾ ಡುವಂತೆ ದರ್ಪದಿಂದ ಹೇಳುವನು, (ಎಲೈ ವೀರಭಟರೆ' ಶತ್ರುಗಳ ವಿಷಯ ದಲ್ಲಿ ಇನ್ನು ನಾವು ಔದಾಸೀನ್ಯದಿಂದಿರಬಾರದು, ಆ ನಮ್ಮ ಶತ್ರುಗಳು, ಇಂದ್ರಾಡಿಗಳ ಒಲವನ್ನೂ ಅಡಗಿಸಿದ ಮಹಾವೀರವಳ್ಳ ನಮ್ಮ ಸೇ ನಾಪತಿಯಾದ ಪ್ರಹಸನನ್ನು, ಅವನ ಕಡೆಯ ಸೈನಿಕರೊಡನೆಯ,ಗಜಾ ದಿಚತುರಂಗಬಲಗಳೊಡನೆಯೂ ಕೊಂದಿರುವರು.ಆದುದರಿಂದ ಇನ್ನು ಮೇಲೆ ರಾಮನನ್ನಾಗಲಿ, ಅವನ ಕಡೆಯ ವಾನರರನ್ನಾಗಲಿ ಉಪೇಕ್ಷಿಸಿರುವುದು ಯುಕ್ತವಲ್ಲ ನಾನೂ ಇನ್ನು ಮೇಲೆ ಹಿಂದುಮುಂದು ನೋಡತಕ್ಕವನಲ್ಲ ಆ ಶತ್ರುಗಳನ್ನು ನಾಶಮಾಡಿ ಜಯವನ್ನು ಕೈಕೊಳ್ಳುವುದಕ್ಕಾಗಿ ನಾನೇ ರಣ ರಂಗಕ್ಕೆ ಹೊರಡುವೆನು, ಆಹಾ! ಏನಾಶ ರ್ಯವು? ನಮ್ಮಂತಹ ಪ್ರಬಲಬಲ ವುಳ್ಳವರನ್ನು ಅತ್ಯಲ್ಪ ಬಲವುಳ್ಳ ಆ ನರವಾನರರು ಕೊಲ್ಲುವುದೆಂದರೇನು ? ಆದರೇನು ? ಇರಲಿ' ಈಗಲೇ ನಾನು ಹೊರಟು, ಕಾಡುಗಿಚ್ಚು ಬೆಂಗಾಡ ನ್ನು ದಹಿಸುವಂತೆ, ಆ ಸಮಸ್ತವಾನರಸೈನ್ಯವನ್ನೂ, ಲಕ್ಷಣಸಹಿತನಾ ದ ರಾಮನನ್ನೂ , ನನ್ನ ಬಾಣಸಮೂಹಗಳಿಂದ ಸುಟ್ಟುರಿಸುವೆನು. (ಈಗ ಲೇ ನಾನು ಕಪಿಗಳ ರಕ್ತದಿಂದ ಈಭೂಮಿಯನ್ನೂ ತೃಪ್ತಿ ಹೊಂದಿಸುವೆನು) ಎಂದು ಹೇಳಿದನು. ಉತ್ತರಕ್ಷಣದಲ್ಲಿಯೇ ಇಂದ್ರಶತ್ರುವಾದ ಆ ರಾವಣ ನು, ಅಗ್ನಿ ಯಂತೆ ಜಾಜ್ವಲ್ಯಮಾನವಾಗಿಯೂ, ' ಉತ್ತಮಾಶ್ವಗಳಲ್ಲಿ ಹೂಡಿ ದುದಾಗಿಯೂ, ಸಾಲಂಕಾರಗಳಿಂದ 'ಶೋಭಿತವಾಗಿಯೂ ಇದ್ದ ತನ್ನ ಥವನ್ನೇರಿದನು ಅವನು ರಥವನ್ನೇರಿ ಕುಳಿತೊಡನೆಯೇ, ಮುಂದುಗಡೆಯ