ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೪೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೪೪. ಶ್ರೀಮದ್ರಾಮಾಯಣವು [ಸರ್ಗ ೫೯. ನ್ನು ನೋಡಿ, ನಾನರೇಶ್ವರನಾದ ಸುಗ್ರೀವನು, ದೊಡ್ಡ ಪಕ್ವತಶಿಖರ ವೊಂದನ್ನು ಕಿತ್ತುಕೊಂಡು, ರಾವಣನನ್ನಿ ದಿರಿಸಿ, ಅನೇಕವೃಕ್ಷಗಳಿಂದ ತುಂ ಬಿದ ಆ ಪರತಶಿಖರವನ್ನು ಅವನಿಗೆ ಗುರಿಯಿಟ್ಟು ಬೀಸಿ ಬಡಿದನು. ಆ ಪರತಶಿಖರವು ಮೇಲೆ ಬೀಳುವಷ್ಟರಲ್ಲಿಯೇ ರಾವಣನು, ಸುವ ರ್ಣಪುಂಖಗಳುಳ್ಳ ಬಾಣಗಳನ್ನು ಪ್ರಯೋಗಿಸಿ, ಅದನ್ನು ತುಂಡುಮಾಡಿ ಕಡಹಿದನು, ದೊಡ್ಡ ದೊಡ್ಡ ಮರಗಳಿಂದ ತುಂಬಿದ ಆ ಪರತಶಿಖರವು ತನ್ನ ಬಾಣಗಳಿಂದ ತುಂಡಾಗಿ ಕೆಳಗೆ ಬಿದ್ದ ಮೇಲೆಯೂ ತಿರುಗಿ ರಾಕ್ಷಸೇಂ ದ್ರನಾದ ರಾವಣನು, ಮೃತ್ಯು ಸಮಾನವಾಗಿಯೂ, ಸರ್ಪದಂತೆ ವೇಗವು ಇುದಾಗಿಯೂ ಇದ್ದ ಮತ್ತೊಂದು ಬಾಣವನ್ನು ಬಿಲ್ಲಿನಲ್ಲಿ ಸಂಧಾನಮಾ ಡಿದನು, ವಾಯುವಿನಂತೆ ವೇಗವುಳ್ಳುದಾಗಿಯೂ, ಕಿಡಿಗಳನ್ನು ಕಾರುವ ಬೆಂಕಿಯಂತೆ ದೇದೀಪ್ಯಮಾನವಾಗಿಯೂ, ಸಿಡಿಲಿಗೆ ಸಮಾನವಾದ ಮಹಾ ರ್ಭಟವುಳ್ಳುದಾಗಿಯೂ ಇದ್ದ ಆ ಬಾಣವನ್ನು ಆಕರ್ಣಾಂತವಾಗಿ ಸೆಳೆ ದು, ಸುಗ್ರೀವನನ್ನು ಕೊಲ್ಲಬೇಕೆಂಬ ಅತ್ಯಾಕೊ?ಶದಿಂದ ಅದನ್ನು ಪ್ರಯೋಗಿಸಿದನು. ಮಹೇಂದ್ರನ ವಜ್ರಾಯುಧದಂತೆ ಆಕಾರವುಳ್ಳುದಾ ಗಿಯೂ, ತೀಕವಾದ ಮೊನೆಯುಳ್ಳುದಾಗಿಯೂ ಇದ್ದ ಆ ಬಾಣವು.ರಾವ ಣನಿಂದ ಪ್ರಯೋಗಿಸಲ್ಪಟೆಡನೆ, 'ಅತಿವೇಗದಿಂದ ಬಂದು, ಷಣ್ಮುಖ ನು ಪ್ರಯೋಗಿಸಿದ ಮಹೋಗ್ರಶಕ್ತಿಯು ಕೌಂಚವನ್ನು ಭೇದಿಸುವಂತೆ, ಸು ಗ್ರೀವನ ದೇಹವನ್ನು ಭೇದಿಸಿಕೊಂಡು ಹೋಯಿತು. ಆ ಕ್ಷಣವೇ ಸುಗ್ರೀ ವನು ಬಾಣದಿಂದ ಪೀಡಿತನಾಗಿ ಪ್ರಜ್ಞೆ ತಪ್ಪಿ ಕೂಗಿಡುತ್ತ ನೆಲಕ್ಕೆ ಬಿದ್ದನು ಸುಗ್ರೀವನು ಮೂರ್ಛಿತನಾಗಿ ನೆಲಕ್ಕೆ ಬಿದ್ದುದನ್ನು ನೋಡಿ ರಣರಂಗದಲ್ಲಿ " ಠಾಕ್ಷಸರೆಲ್ಲರೂ, ಸಂತೋಷದಿಂದ ಸಿಂಹನಾದಗಳನ್ನು ಮಾಡಿದರು. ಆಮೇಲೆ ತೀಕವಾದ ಕೋರೆಗಳುಳ್ಳ ಗವಯನೂ, ಗವಾಕ್ಷನೂ, ಋಷ ಭನೂ, ಜ್ಯೋತಿರುಖನೂ, ನಭನೂ, ಬಹಳ ಕೋಪಗೊಂಡವರಾಗಿ, ತಮ್ಮ ಮೈಯನ್ನು ಬೆಳೆಸಿಕೊಂಡು, ದೊಡ್ಡ ದೊಡ್ಡ ಬೆಟ್ಟಗಳನ್ನು ಕೈಗೆತ್ತಿಕೊಂ ಡು, ರಾಕ್ಷಸರಾಜನಮೇಲೆ ನುಗ್ಗಿ, ಅವುಗಳನ್ನು ಅವನ ಮೇಲೆ ಬೀಸಿದರು. ಇಷ್ಟರಲ್ಲಿಯೇ ರಾವಣನು ತೀಕ್ಷಬಾಣಗಳಿಂದ ಅವರ ಪ್ರಹಾರಗಳನ್ನು ತಪ್ಪಿಸಿಕೊಂಡು,ಚಿನ್ನದ ಹಿಡಿಗಳುಳ್ಳ ಬಾಣಗಳನ್ನು ತೆಗೆದು ಅವಾನರರನ್ನು