ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೪೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ: af ] ಯುದ್ಧಕಾಂಡವು. ೨೪af ಸಿಕ್ಕಿದ ಅಶ್ವ ಕರ್ಣಿ, ಆಲ, ಸಾಲೆ, ಪ್ರಷ್ಟಿತವಾದ ಮಾವು, ಮೊದಲಾದ ನಾನಾಜಾತಿಯ ವೃಕ್ಷಗಳನ್ನು ಸಾಲುಸಾಲಾಗಿ ಕಿತ್ತು ತಂದು, ಆ ವ್ಯಕ ಗಳನ್ನೆಲ್ಲಾ ರಾವಣನಮೇಲೆ ಎಡೆಬಿಡದೆ ಪ್ರಯೋಗಿಸುತಿದ್ದನು. ರಾವಣ ನಾದರೋ ಈ ವೃಕ್ಷಗಳೆಲ್ಲವನ್ನೂ ನಡುದಾರಿಯಲ್ಲಿಯೇ ತನ್ನ ಬಾಣಗಳಿಂದ ತುಂಡುತುಂಡಾಗಿ ಕತ್ತರಿಸಿದುದಲ್ಲದೆ, ಅಗ್ನಿ ಪುತ್ರನಾದ ಆ ನೀಲನಮೇ ಲೆಯೂ ಭಯಂಕರವಾದ ಬಾಣವರ್ಷವನ್ನು ಕರೆಯುತಿದ್ದನು ಮೇಘುವು ಪತದಮೇಲೆ ಮಳೆಯನ್ನು ಕರೆಯುವಂತೆ ರಾವಣನು ತನ್ನ ಮೇಲೆ ಎರ ಬಿಡದೆ ಬಾಣಗಳನ್ನು ಕರೆಯುತ್ತಿರಲು, ನೀಲನು ಕ್ಷಣಮಾತ್ರದಲ್ಲಿ ತನ್ನ ದೇ ಹವನ್ನು ಬಹಳ ಸೂಕ್ಷ್ಮವಾಗಿ ಮಾಡಿಕೊಂಡು, ತಟ್ಟನೆ ಮೇಲೆ ಹಾರಿ ರಾ ವಣನ ಧ್ವಜಾಗ್ರದಲ್ಲಿ ಬಂದು ಕುಳಿತನು. ನೀಲನು ತನ್ನ ಧ್ವಜಾಗ್ರದಲ್ಲಿ ಬಂದು ಕುಳಿತಿರುವುದನ್ನು ನೋಡಿ, ರಾವಣನಿಗೆ ಮೇಲೆಮೇಲೆ ಆಕ್ರೋಶವು ಹೆಚ್ಚಿ, ಕೋಪಾಗ್ನಿ ಯಿಂದುರಿಯುವಂತಿದ್ದನು. ರಾವಣನು ಕೋಪದಿಂದ ಹಾರಿ ನೆಗೆಯುತಿದ್ದಷ್ಟೂ ನೀಲನು ಸಿಂಹನಾದಮಾಡಿ ನಗುತ್ತಿರುವನು. ಮತ್ತು ಆಗೆ ನೀಲನು ರಾವಣನ ಬಾಣಪ್ರಹಾರಕ್ಕೆ ಸಿಕ್ಕದಂತೆ ಧ್ವಜಾಗ್ರದಿಂ ದ ರಾವಣನ ತಲೆಯಮೇಲೆ ಹಾರಿಬಿಳುವನು ತಲೆಯಿಂದ ಅವನ ಕೈಯಲ್ಲಿದ್ದ ಧನುಸ್ಸಿನ ತುದಿಗೆ ಹಾರುವನು ಅಲ್ಲಿಂದ ಪುನಃ ಕಿರೀಟವನ್ನು ಮೆಟ್ಟಿಕೊಂಡು ಧ್ವಜಾಗ್ರಕ್ಕೆ ಹಾರುವನು. ಹೀಗೆ ನಿಂತಲ್ಲಿ ನಿಲ್ಲದೆ, ಅಲ್ಲಿಂದಲ್ಲಿಗೆ ಹಾರಾಡುತ್ತಿ ರುವ ಸೀಲನ ಸಂಚಾರಚಾತುರವನ್ನು ನೋಡಿ, ಲಕ್ಷ್ಮಣನೂ, ಹನುಮಂ ತನೂ, ರಾಮನೂ ಅತ್ಯಾಶ್ಚರಗೊಂಡರು ಮಹಾತೇಜಸ್ವಿಯಾದ ರಾವಣ ನೂಕೂಡ ಸೀಲನ ಲಾಫುವಕ್ಕಾಗಿ ವಿಸ್ಮಯಗೊಂಡಿದ್ದು, ಕೊನೆಗೆ ಅವ ನನ್ನು ನಿಗ್ರಹಿಸಿಬಿಡಬೇಕೆಂದು, ಅದ್ಭುತಕಾಂತಿಯುಳ್ಳ ಆಗ್ರೇಯಾಸ್ತ್ರವನ್ನು ಹೂಡಿದನು. ಇತ್ತಲಾಗಿ ವಾನರರೆಲ್ಲರೂ ನೀಲನ ದೇಹಲಾಭವದಿಂದ ಸಂಭ್ರಾಂತನಾದ ರಾವಣನನ್ನು ನೋಡಿ ಸಂತೋಷದಿಂದುಬ್ಬುತ ಸಿಂಹ ನಾದಮಾಡುತಿದ್ದರು. ಈ ವಾನರರ ಸಿಂಹನಾದಧ್ವನಿಯು, ರಾವಣನಿಗೆ ಮತ್ತಷ್ಟು ' ಕೋಪವನ್ನು ಹೆಚ್ಚಿಸಿತು. ಇವರ ಅಟ್ಟಹಾಸಗಳನ್ನು ನೋಡಿ ರಾ ವಣನು ಮುಹೂರ್ತಕಾಲದವರೆಗೆ ಏನೊಂದೂ ತೋರದೆ ಭಮೆಹಿಡಿದಂ ತಿದ್ದು, ಕೊನೆಗೆ ರಾವಣನು ಆಸ್ಟ್ರೇಯಾಸ್ತ್ರದಿಂದ ಮಂತ್ರಿತವಾದ ಬಾಣ