ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೪೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೪೪೮ ಶ್ರೀಮದ್ರಾಮಾಯಣವು (ಸರ್ಗ: ೫೯. ಯವಾಕ್ಯವನ್ನು ಕೇಳಿ, ಅವನ ಪ್ರಾರ್ಥನೆಯಂತೆಯೇ ರಾಮನು, ಮಹಾ ವಿಷ್ಣುವು ಗರುಡನ ಬೆನ್ನ ಸ್ನೇರುವಂತೆ ಆ ಮಹಾಕಸಿಯ ಭುಜವನ್ನೇರಿ ಕುಳಿ ತನು, ಹೀಗೆ ಮಹಾತೇಜಸ್ವಿಯಾದ ರಾಮನು ಹನುಮಂತನ ಭುಜವನ್ನೇರಿ ಕುಳಿತು, ರಥಸನಾದ ಆ ರಾಕ್ಷಸನನ್ನು ಕಂಡೊಡನೆ ಕುಪಿತನಾಗಿ, ತನ್ನ ಧನುಸ್ಸನ್ನೆತ್ತಿ ಹಿಡಿದು, ಮಹಾವಿಷ್ಣುವು ಬಲಿಯ ದಿರಿಸುವಂತೆ, ರಾವಣನ ೩ ದಿರಿಸಿಹೋದನು. ಆಗ ರಾಮನು ವಜಧ್ವನಿಯಂತೆ,ಮಹಾಧ್ವನಿಯು ಗುವಹಾಗೆ ಧನುಷ್ಯ೦ಕಾರವನ್ನು ಮಾಡಿ, ಗಂಭೀರಸ್ವರದಿಂದ ರಾಕ್ಷಸೇಶ್ವ ರನಾದ ರಾವಣನನ್ನು ಕುರಿತು ಎಲೆಲಾ' ನಿಲ್ಲು ನಿಲ್ಲು'ಎಲೆ ರಾಕ್ಷಸಾ 'ನೀ ನು ನನ್ನ ವಿಷಯದಲ್ಲಿ ಅಷ್ಟೊಂದು ಮಹಾಪರಾಧಗಳನ್ನು ನಡೆಸಿದಮೇಲೆ ಇನ್ನೆಲ್ಲಿಗೆ ಹೋದರೆ ತಾನೇ ನನ್ನಿಂದ ತಪ್ಪಿಸಿಕೊಂಡು ಬದುಕಬಲ್ಲೆ? ಎಲೆ ದುರಾತ್ಮಾ' ಇನ್ನು ಮೇಲೆ ನೀನು ದೇವೇಂದ್ರನಬಳಿಗೆ ಹೋದರೂ, ಯಮನ ಸಮೀಪವನ್ನು ಸೇರಿದರೂ, ಸೂರ್ಯನನ್ನು ಮರೆಹೊಕ್ಕರೂ, ಬ್ರ ಹ್ಮದೇವನನ್ನಾಶ್ರಯಿಸಿದರೂ, ಅಗ್ನಿಹೋತ್ರನನ್ನು ಸೇರಿದರೂ, ರುದ್ರನಲ್ಲಿ ಶರಣಾಗತನಾದರೂ, ದಶದಿಕ್ಕುಗಳನ್ನೂ ಸುತ್ತಿ ಸುತ್ತಿ ಬಂದರೂ ಪ್ರಾಣದಿಂದ ತಪ್ಪಿಸಿಕೊಳ್ಳಲಾರೆ | ಎಲೆ ರಾಕ್ಷಸಾ ! ಈಗ ನೀನು ಯಾರನ್ನು ನಿನ್ನ ಶಕ್ತಿಯಿಂದ ಪ್ರಹರಿಸಿದೆಯೋ, ಅ ಲಕ್ಷಣನೇ ಈಗ ನಿನ್ನ ಮೇಲೆ ಹಗೆ ತೀರಿಸಿಕೊಳ್ಳುವುದಕ್ಕಾಗಿ, ನಿನಗೂ ನಿನ್ನ ಪತ್ರಮಿತ್ರ ಕಳತ್ರಾದಿಗಳಿಗೂ ಮೃತ್ಯುಭೂತನಾಗಿ, ಇದೋ ಇಲ್ಲಿ ಬಂದು ನಿಂತಿರುವ ನೆಂದು ತಿಳಿ ' ಎಲೆ ರಾಕ್ಷಸಾಧಾಮಾ ! (ಅವನೇ ನಾನಾಗಿ ಬಂದಿರುವೆನೆಂ ದು ತಿಳಿ') ಲಕ್ಷಣವನ್ನು ಪ್ರಹರಿಸಿದಮಾತ್ರಕ್ಕೆ ನೀನು ಗರ್ವಪಡಬೇಡ ! ಅವನ ಪ್ರಹಾರದಿಂದ ತಲೆತಪ್ಪಿಸಿಕೊಂಡು ಬಂದಮಾತ್ರಕ್ಕೆ ನಿನ್ನನ್ನು ಕೊಲ್ಲುವವರು ಬೇರೊಬ್ಬರೂ ಇಲ್ಲವೆಂದೆಣಿಸುವೆಯಾ ? ಈಗ ನಿನ್ನ ಮುಂದೆ ಬಂದು ನಿಂತಿರುವವನು ಯಾರೆಂದು ಬಲ್ಲೆ? ಹಿಂದೆ ಜನಸ್ಪ್ಯಾನದಲ್ಲಿ ಅದ್ಭು ತಾಕಾರವುಳ್ಳವರಾಗಿಯೂ, ಉತ್ತಮಾಯುಧಗಳನ್ನು ಧರಿಸಿದವರಾಗಿಯೂ ಇದ್ದ ಹದಿನಾಲ್ಕುಸಾವಿರಮಂದಿ ರಾಕ್ಷಸರನ್ನೂ ತಾನೊಬ್ಬನೇ ನಿಂತು ಬಾಣಸಮೂಹಗಳಿಂದ ಯಾವನು ಧ್ವಂಸಮಾಡಿದನೋ, ಅವನೇ ಈಗ ನಿನಗೂ ಮೃತ್ಯುವಾಗಿ ಬಂದಿರುವನು” ಎಂದನು, ರಾಮನು ಹೇಳಿದ ಈ