ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ, ೪ ] ಯುದ್ದ ಕಾಂಡವು. ೨೦೯೫ ವ್ಯವು, ಜೇಸಿನಂತೆ ಹೊಂಬಣ್ಣದ ಸೀರುಳ್ಳ ಬೇರೊಂದು ಮಹಾಸಮು ದ್ರವೋ ಎಂಬಂತೆ ತೋರಿತು. ಹೀಗೆ ಆ ಸಮಸ್ತ ವಾನರಸೈನ್ಯವೂ ಸಮು ದ್ರವನ್ನು ದಾಟಬೇಕೆಂಬ ನಿರೀಕ್ಷೆಯಿಂದ ಅಲ್ಲಿನ ತೀರಾರಣ್ಯವನ್ನೆ ಲ್ಲಾ ವ್ಯಾ ಪಿಸಿ ನಿಂತಿತು ಅಲ್ಲಿ ಸೈನ್ಯವನ್ನಿಳಿಸಿದಾಗ ಆ ಸೇನಾಸನ್ನಾ ಹದಿಂದುಂಟಾದ ಮಹಾಧ್ವನಿಯು ಸಮುದ್ರಘೋಷವನ್ನೇ ಮರೆಸುವಂತೆ ಕೇಳಿಸುತಿತ್ತು. ಸುಗ್ರೀವರಕ್ಷಿತವಾದ ಆ ಮಹಾಸೈನ್ಯವು ಮೂರುಸುತ್ಯಾಗಿ (ಅಥವಾ ಕಪಿ ಗಳು, ಕರಡಿಗಳು,ಸಿಂಗಳೀಕಗಳೆಂಬ ಮೂರುಭಾಗಗಳಾಗಿ ಬೇರ್ಪ್ಪಡಿಸಲ್ಪ ಟ್ಯು) ರಾಮಕಾರವನ್ನು ಸಿರಹಿಸಬೇಕೆಂಬ ಮಹೋತ್ಸಾಹದಿಂದಿದ್ದಿತು. ಹೀಗೆ ಆ ದೊಡ್ಡ ವಾನರಸೈನ್ಯವು ಸಮುದ್ರ ತೀರದಲ್ಲಿ ನಿಂತು, ವಾಯುವೇಗ ದಿಂದ ಬಹಳವಾಗಿ ತೂಗಾಡುತ್ತಿದ್ದ ಆ ಸಮುದ್ರವನ್ನು ನೋಡಿ ಸಂತೋಷ ಹಿಂದುಟ್ಟುತಿತ್ತು ಆ ಸಮುದ್ರವಾದರೂ ಕೊನೆಮೊದಲಿಲ್ಲದಷ್ಟು ವಿಸ್ತಾ ರವಾಗಿಯೂ, ಆಕ್ಷೇಭ್ಯವಾಗಿಯೂ, ಅನೇಕರಾಕ್ಷಸರಿಗೆಡೆಯಾಗಿಯೂ ಜ ಲಾಧಿಪತಿಯಾದ ವರುಣನಿಗೆ ಮುಖ್ಯವಾಸಸ್ಥಾನವಾಗಿಯೂ ಇರುವುದು ಅಲ್ಲಲ್ಲಿ ಸುತ್ತುತ್ತಿರುವ ಕೂರನಕ್ರಗಳಿಂದಲೂ, ಸಾಯಂಕಾಲದಲ್ಲಿ ಉಬ್ಬಿ ಬರುವ ಅಲೆಗಳಿಂದಲೂ ಮಹಾಭಯಂಕರವಾಗಿರುವುದು ನೊರೆಗಳಿಂದ ನ ಗುವಂತೆಯೂ, ಅಲೆಗಳಿಂದ ವರ್ತಿಸುವಂತೆಯೂ ಕಾಣುವುದು ಚಂದ್ರೋ ದಯಸಂಬಂಧದಿಂದ ಮಲೆಮೇಲೆ ಉಕ್ಕಿ ಬರುತ್ತಿರುವುದಲ್ಲದೆ,ತರಂಗತರಂಗ ಗಳಿಗೂ ಪ್ರತಿಫಲಿಸಿದ ಸಾವಿರಾರು ಚಂದ್ರಬಿಂಬಗಳಂದ ಶೋಭಿಸುವುದು (ಸಮುದ್ರರಾಜನು ಅಲೆಗಳೆಂಬ ತನ್ನ ಕೈಗಳಿಂದ ಚಂದನವನ್ನು ತೇದಿಡು ವಂತೆ ಸುತ್ತಲೂ ನೊರೆಯೊಳುತ್ತಿರಲು, ಅದನ್ನು ಚಂದ್ರನು ಕಿರಣಗಳೆಂಬ ತನ್ನ ಕೈಗಳಿಂದ ದಿಗಂಗನೆಯರಿಗೆ ತೊಡೆಯುವಂತೆ ಚಂದ್ರಿಕೆಯು ಪ್ರ ಸರಿಸಿರುವುದು ) ಮತ್ತು ಆ ಸಮುದ್ರದಮೇಲೆ ಅಲ್ಲಲ್ಲಿ ಪ್ರಚಂಡವಾಯು ವಿನಂತೆ ಮಹಾವೇಗವುಳ್ಳ ಮೊಸಳೆಗಳೂ, ಅಲ್ಲಲ್ಲಿ ತಿಮಿತಿಮಿಂಗಿಲಾದಿಕೂರ ಜಂತುಗಳೂ, ಅಲ್ಲಲ್ಲಿ ದೇದೀಪ್ಯಮಾನವಾದ ಫಣಾರತ್ನಗಳುಳ್ಳ ವಿಷಸರಗ ಭೂ ತಲೆಯನ್ನು ತಿರುವುವು. ಕೆಳಗೆ ಸೀರಾನೆಗಳೇ ಮೊದಲಾದ ದೊಡ್ಡದೊ ಡಜಲಜಂತುಗಳೂ, ಮಹೋನ್ನ ತಗಳಾದ ಪರತಗಳೂ ಮುಳುಗಿರುವುವು. ಹಡಗುಗಳ ಸಂಚಾರಕ್ಕೆ ದಾರಿಯಿಲ್ಲದಂತೆ ದುರ್ಗಮವಾಗಿರುವುದು.