ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ, ೭.) ಯುದ್ಧಕಾಂಡವು. ೨೧೦೩ ಮುತ್ತಿಗೆ ಹಾಕುವುದಕ್ಕಾಗಿ ಬರುವನು ಈ ಸಮುದ್ರವನ್ನು ದಾಟುವುದೂ ಅವನಿಗೊಂದು ಕಷ್ಟವಲ್ಲ. ಆತನು ತಮ್ಮ ನಾದ ಲಕ್ಷ್ಮಣನೊಡನೆಯೂ, ವಾನರಸೈನ್ಯಗಳೊಡನೆಯೂ, ಸುಗ್ರೀವನೇ ಮೊದಲಾದ ಅನುಚರರೊಡ ನೆಯೂ ಸೇರಿ ಬಂದು, ಇಲ್ಲಿ ತನ್ನ ಪೂರಶಕ್ತಿಯನ್ನು ತೋರಿಸದೆ ಬಿಡನು. ಆತನು ತನ್ನ ವೀರದಿಂದ ಈ ಸಮುದ್ರವನ್ನೇ ಶೋಷಿಸಿಯೋ, ಅಥವಾ ಸೇ ತುಬಂಧನವೇ ಮೊದಲಾದ ಬೇರೆ ಉಪಾಯದಿಂದಲೋ ಸುಖವಾಗಿ ಇಲ್ಲಿಗೆ ಬರಬಲ್ಲನೆಂದೂ ನನಗೆ ತೋರಿರುವುದು ಹೀಗೆ ನಮಗೂ, ವಾನರರಿಗೂ ವಿರೋಧವು ಹೆಚ್ಚಿ ಬಂದಿರುವುದರಿಂದ, ಆ ಕಾಲಕ್ಕೆ ನಮ್ಮ ಪಟ್ಟಣಕ್ಕೂ ನಮ್ಮ ಸೈನ್ಯಕ್ಕೂ ಅಪಾಯವಿಲ್ಲದಂತೆ ಕಾಪಾಡಿಕೊಳ್ಳುವ ದಾರಿಯೇ ನೆಂದು ಈಗಲೇ ನೀವು ಚೆನ್ನಾಗಿ ನಿಶ್ಚಯಿಸಿ ಹೇಳಿರಿ” ಎಂದನು ಇಲ್ಲಿಗೆ ಆರನೆಯ ಸರ್ಗವು. ಬ ಮಂತ್ರಿಗಳು ಶತ್ತುಒಲವನ್ನು ತಿಳಿಯದೆ, ಆ ರಾವ ) ++ ನನ ಪರಾಕ್ರಮಗಳನ್ನೇ ಹೊಗಳುತ್ತ, ಮುಖಸುತ್ತಿ (++ ಮಾಡಿ ಅವನನ್ನು ಪ್ರೋತ್ಸಾಹಿಸಿದುದು) - ಅಲ್ಲಿದ್ದ ರಾಕ್ಷಸರೆಲ್ಲರೂ ಬಹಳ ಬಲಾಡ್ಯರಾಗಿದ್ದರೂ, ರಾಜನೀತಿಯ ನರಿಯದವರಾಗಿಯೂ, ಬುದ್ದಿಹೀನರಾಗಿಯೂ ಇದ್ದುರಿಂದ, ಶತ್ರುಬಲ ವನ್ನು ತಿಳಿಯದೆ, ಅವರೆಲ್ಲರೂ ಒಟ್ಟಾಗಿ ಆ ರಾವಣನ ಮುಂದೆ ಕೈಮುಗಿ ದು ನಿಂತು, ಅವನ ಮಾತಿಗೆ ಪ್ರತ್ಯುತ್ತರವಾಗಿ 'ಎಲೆ ಮಹಾರಾಜನೆ! ಇದೀ ಗ ಚೆನ್ನಾ ಯಿತು' ನೀನೂ ಹೀಗೆ ಶತ್ರುಗಳಿಗೆ ಹೆದರುವುದೆಂದರೇನು? ನಮ್ಮ ಕ್ಲಿರುವ ಈ ಮಹಾಗದೆಗಳೇನು ? ಈ ನಮ್ಮ ಈಟಿಗಳೇನು ? ಈ ನಮ್ಮ ಖ ಡಗಳೇನು ? ಈ ನಮ್ಮ ಶೂಲಗಳೇನು ? ನಮ್ಮ ಪಟ್ಟಸಗಳೇನು ? ಹೀಗೆ ಅನೇಕ ಶಸ್ತ್ರಸಮೃದ್ಧಿಯುಳ್ಳ ಇಷ್ಟು ದೊಡ್ಡ ಸೈನ್ಯವು ನಿನ್ನ ವಶದಲ್ಲಿರು ವಾಗಲೂ, ನೀನು ಹೀಗೆ ಭಯಪಡುವುದುಂಟೆ? ಈ ಸೈನ್ಯಗಳೂ ಹಾಗಿರಲಿ ! ನೀನೊಬ್ಬನೇ ಸಾಲದೆ? ನೀನು ಹಿಂದೆ ಮಾಡಿರುವ ಕೆಲಸಗಳನ್ನಾದರೂ ನೆನೆ ಸಿಕೊಂಡು ನೋಡು' ಪಾತಾಳದಲ್ಲಿರುವ ಭೋಗವತಿಗೆ ಹೋಗಿ ಅಲ್ಲಿನ ಯು ದ್ಯದಲ್ಲಿ ಎಷ್ಟೋ ಮಂದಿ ಪನ್ನಗರನ್ನು ಜಯಿಸಿಬಂದಿರುವೆ ? ಅನೇಕಯಕ್ಷ