ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ ೮ | ಯುದ್ದ ಕಾಂಡವು. ೨೧೦೭ ೭ನೇ ನಿಂತು, ಈ ಲಂಕೆಗೂ ಯಾವ ಅಪಾಯವೂ ಇಲ್ಲದಂತೆ ನೋಡಿಕೊ ಛವೆನು' ನೀನು ಸೀತೆಯನ್ನು ಕದ್ದು ತಂದ ತಪ್ಪಿಗಾಗಿ ಮನಸ್ಸಿನಲ್ಲಿ ಹೆದರಬೇ ಕಾದುದೂ ಇಲ್ಲ' ನಿನ್ನ ಶತ್ರುಗಳಿಂದ ನಿನಗೆ ಯಾವ ಭಯವೂ ಇಲ್ಲ” ಎಂದ ನು ಆಮೇಲೆ ದುಮ್ಮುಖನೆಂಬ ರಾಕ್ಷಸನು ಕೋಪದಿಂದೆದ್ದು, (ಎಲೆ ರಾಜೇಂ ದ್ರನೆ' ಯಾವುದೋ ಒಂದು ಕಾಡುಕಪಿಯು ಬಂದು, ನಮ್ಮೆಲ್ಲರಿಗೂ ಇ. ಇು ತಿರಸ್ಕರವನ್ನು ಮಾಡಿತಲ್ಲವೆ ? ಇದನ್ನು ಮಾತ್ರ ಎಂದಿಗೂ ನಾವು ಕ್ಷ ಮಿಸಬಾರದು ನಮ್ಮ ಪಟ್ಟಣಕ್ಕೂ ನಮ್ಮ ಅಂತಃಪುರಕ್ಕೂ ಮಹತ್ತಾದ ಅವಮಾನವುಂಟಾಗಿರುವುದು ರಾಕ್ಷಸಚಕ್ರವರ್ತಿಯೆನಿಸಿಕೊಂಡ ಶ್ರೀಮಂ ತನದ ನಿನಗೂ ಆ ಕಾಡುಕಪಿಯಿಂದ ದೊಡ್ಕತಿರಸ್ಕರವುಂಟಾದಮೇಲೆ, ಎಷ್ಟು ಮಾತ್ರವೂ ಕ್ಷಮಿಸತಕ್ಕುದಲ್ಲ ! ಆದರೇನು ? ಈ ಮುಹೂರ್ತ ದಲ್ಲಿಯೂ ನಾನೊಬ್ಬನೇ ಹೋಗಿ ಆ ಕಪಿಗಳಲ್ಲರನ್ನೂ ಕೊಂದು ಹಿಂತಿರು ಗಿ ಬರುವೆನು ಆ ಕಪಿಗಳು ಭಯಂಕರವಾದ ಈ ಸಮುದ್ರದಲ್ಲಿ ಮುಳುಗಿ ಕೊಂಡರೂ, ಆಕಾಶಕ್ಕೆ ಹಾರಿದರೂ, ಪಾತಾಳಕ್ಕೆ ಪ್ರವೇಶಿಸಿದರೂ ನಾನು ಬಡುವನಲ್ಲ'” ಎಂದನು ಆಮೇಲೆ ಮಹಾಬಲಾಢನಾದ ವಜ್ರ ದಂಷ್ಯನೆಂಬ ಸೇನಾಪತಿಯು, ರಕ್ತಮಾಂಸಗಳಿಂದ ಭಯಂಕರವಾದ ತನ್ನ ಪುಫಯಥವತಿ ಹಿಡಿದು, ರಾವಣನನ್ನು ನೋಡಿ, 'ಸ್ವಾಮಿ' ನ ಮ್ಮ ಭಯಕ್ಕಾಗಿ ರಾತ್ರಿಯಲ್ಲಿ ರಹಸ್ಯವಾಗಿ ಈ ಲಂಕಗೆ ಬಂದು ಹೋದ ಅತ್ಯಲ್ಪನಾದ ಆ ಹನುಮಂತನ ವಿಷಯದಲ್ಲಿ ನೀವು ನಡೆಸಬೇಕಾದ ಕಾಲ್ಯ ವೇಸಿರುವುದು ' ಅಯ್ಯೋ ಪಾಪ ! ಗುಬ್ಬಿ ಯಮೇಲೆ ಬ್ರಹ್ಮಾಸದಂತೆ, ಆ ಕಪಿಯಮೇಲೆ ನಿಮ್ಮ ಕೋಪವೆ' ಸುಗ್ರೀವನೊಡನೆಯ, ಲಕ್ಷ ಇನೊ ಡನೆಯ ಸೇರಿದ ಆ ರಾಮನು ನಮಗೆ ದುರ್ಜಯನಾಗಿರುವಾಗ, ಅವನನ್ನು ಬಿಟ್ಟು ಆ ಕಪಿಯಮೇಲೆ ಕೋಪವನ್ನು ತೋರಿಸಿದುದರಿಂದೇನು ? ಎಲೆ ಮ ಹಾ ರಾಜನೆ' ಇಗೋ? ನಾನೊಬ್ಬನೇ ಈ ನನ್ನ ಪರಿಪುದಿಂದ, ರಾಮನನ್ನೂ ಅವನಿಗೆ ಬೆಂಬಲವಾಗಿರುವ ಲಕ್ಷಣಸುಗ್ರಿವರನ್ನೂ ಕೊಂದು, ಅಲ್ಲಿನ ಕ ಪಿಸೈನ್ಯವೆಲ್ಲವನ್ನೂ ಕ್ಷಣಮಾತ್ರದಲ್ಲಿ ಕದಲಿಸಿ ಬರುವೆನು ಆದರೆ ನನ್ನ ಇ ದೊಂದು ಮಾತನ್ನು ಲಾಲಿಸಿ ಕೇಳಬೇಕು. ಉಪಾಯಕುಶಲನಾಗಿ ಎಚ್ಚರಿಕೆ