ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೧೧೪ ಶ್ರೀಮದ್ರಾಮಾಯಣವು [ಸರ್ಗ, ೧೦. ವೀರನಾಗಿಯೂ,ತೇಜಸ್ವಿಯಾಗಿಯೂ ಇರುವ ವಿಭೀಷಣನು, ಕಾಂತಿವಿಶಿಷ್ಟ ನಾದ ಸೂರನು ಮಹಾಮೇಸುವನ್ನು ಪ್ರವೇಶಿಸುವಂತೆ, ತನ್ನ ನಾದ ರಾವಣನ ಮನೆಯನ್ನು ಪ್ರವೇಶಿಸಿದನು. ಹೀಗೆ ವಿಭೀಷಣನು ಪ್ರವೇಶಿಸುವ ಸ್ಮರಲ್ಲಿ, ಅಲ್ಲಲ್ಲಿ ವೇದವಿತ್ತುಗಳಾದ ಬಹ್ಮರಾಕ್ಷಸರು, ರಾವಣನ ಜಯಕ್ಕಾಗಿ ಪರಿಶುದ್ಧವಾದ ಪುಣ್ಯಾಹಘೋಷವನ್ನು ಉಚ್ಚರಿಸತಿದ್ದರು ಅಲ್ಲಲ್ಲಿ ಮಂತ್ರಗಳನ್ನೂ , ವೇದಗಳನ್ನೂ ತಿಳಿದ ಬ್ರಾಹ್ಮಣರು, ಮೊಸರು, ತುಪ್ಪ, ಅಕ್ಷತೆ, ಹೂ, ಮುಂತಾದ ಪೂಜಾದ್ರವ್ಯಗಳಿಂದ ಪೂಜಿಸಲ್ಪಡುತ್ತಿದ್ದರು ತೇಜಸ್ಸಿನಿಂದ ದೇದೀಪ್ಯಮಾನನಾದ ವಿಭೀಷಣನು, ಅಲ್ಲಿನ ರಾಕ್ಷಸ ರಿಂದ ಮನ್ನಿ ಸಲ್ಪಡುತ್ತ ಅರಮನೆಯೊಳಗೆ ಪ್ರವೇತಿಸಿ, ಸಿಹ್ಯಾ ಸನದ ಮೇ ಲಿದ್ದ ಕುಬೇರನ ತಮ್ಮ ನಾಗ ರಾವಣನಿಗೆ ವಿನಯದಿಂದ ನಮಸ್ಕರಿಸಿದನು ಸಂಪ್ರದಾಯಸಿದ್ಧವಾದ ಸದಾಚಾರವನ್ನು ಚೆನ್ನಾಗಿ ಬಲ್ಲ ವಿಭೀಷಣನು, ಪ್ರಭವಾದ ರಾವಣನ ಮುಂದೆ ನಿಂತು, ಮೊದಲು ತಾನು ರಾಜಮರಾದೆಯ ನನುಸರಿಸಿ ನಡಿಯಬೇಕಾದ ಜಯಶಬ್ದವನ್ನು ಮುಡಿದು, ತನಗೆ ರಾವಣನು ಕಣ್ಣು ಸನ್ನೆಯಿಂದ ತೋರಿಸಿದ ಒಂದು ಸುವರ್ಣಪೀರದ ಮೇಲೆ ಕೆಳಿ ತನು ಆಮೇಲೆ ವಿಭೀಷಣನು ಆ ರಾಜಾಸ್ಥಾನದಲ್ಲಿ ಬೇರೊಬ್ಬರೂ ಇಲ್ಲದೆ ಪ್ರಧಾ ನಮಂತ್ರಿಗಳುಮಾತ್ರ ರಾವಣನ ಸಮೀಪದಸ್ಥಿರುವುದನ್ನು ನೋಡಿ, ರಾ ವಣನನ್ನು ಕುರಿತು, ಯುಕ್ತಾಯುಕ್ತ ವಿವೇಚನೆಯಿಂದ ಸಿಕ್ಕಿತವಾಗಿಯೂ ಹಿತವಾಗಿಯೂ ಇರುವ ಮಾತುಗಳನ್ನು ಹೇಳತೊಡಗಿದನು, ಈ ವಿಭೀಷಣ ನಾದರೋ ಮಾತಿನ ಕ್ರಮವನ್ನು ಚೆನ್ನಾಗಿ ಬಲ್ಲವನು ದೇಶವನ್ನೂ , ಕಾಲ ವನ್ನೂ ಪ್ರಯೋಜನವನ್ನೂ ಅನುಸರಿಸಿ ನುಡಿಯತಕ್ಕವನು ಲೋಕದಲ್ಲಿ ಉತ್ಕೃಷ್ಟವಾವುದು, ನಿಕೃಷ್ಟವಾವುದೆಂಬ ವಿವೇಕಜ್ಞಾನವನ್ನು ಬಲ್ಲವನು ಇಂತಹ ಮಹಾಥೀಮಂತನಾದ ಪಿಭೀಷಣನು, ಮೊದಲು ಬಹಳ ಮೃದು ವಾದ ಮಾತಿನಿಂದ ತನ್ನಣ್ಣವನ್ನು ಸ್ತುತಿಸಿ, ಅವನ ಮನಸ್ಸು ತನ್ನಲ್ಲಿ ಪ್ರಸ ವ್ಯ ವಾಗುವಂತೆ ಮಾಡಿಕೊಂಡು, ಆಮೇಲೆ ಅವನನ್ನು ಕುರಿತು ' ಸೀತೆಯು ಈ ನಿನ್ನ ಪಟ್ಟಣಕ್ಕೆ ಬಂದುದು ಮೊದಲು, ನಮಗೆ ಬಹಳ ವಾದ ದುಶಕುನಗಳೇ ಕಾಣುವುವು ಮಂತ್ರಯುಕ್ತವಾದ ಹವಿಸ್ಸುಗಳಿಂದ