ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೧೨೪ ಶ್ರೀಮದ್ರಾಮಾಯಣವು (ಸರ್ಗ ೧೨. ಅಂದವಾಗಿಯೂ ವಿಶಾಲವಾಗಿಯೂ ಇರುವ ಆ ಸುಂದರಿಯ ಮುಖ ವನ್ನು ನೋಡಿನೋಡಿ ನಾನು ಕಾಮವಶನಾಗಿ ಮರುಗುತ್ತಿರುವೆನು, ಮ «ಥತಾಪವೆಂಬುದು ಸಾಮಾನ್ಯವಲ್ಲ ! ಕೋಪದಲ್ಲಿಯೇ ಆಗಲಿ, ಹರ್ಷದ ಲ್ಲಿಯೇ ಆಗಲಿ, ತನ್ನ ಪ್ರಾಬಲ್ಯವನ್ನು ಬಿಡದೆ ಒಂದೇ ವಿಧವಾಗಿ ಬಾಧಿಸು ತಿರುವುದು ಮನುಷ್ಯನನ್ನು ಬಹಳವಾದ ಚಿಂತೆಗೆ ಈಡು ಮಾಡಿ ಬಣ್ಣ ಗೆಡಿಸುವುದು ಎಡೆಬಿಡದೆ ದುಃಖವನ್ನೂ ಸಂಕಟವನ್ನೂ ಹೆಚ್ಚಿ ಸುತ್ತಿರುವು ದು ಈ ವಿಧವಾದ ಮನ್ಮಥಬಾಧೆಯಿಂದ ನನ್ನ ಮನಸ್ಸೇ ಕೆಟ್ಟುಹೋ ಗಿರುವುದು, ಆ ಸೀತೆಯಾದರೋ ರಾಮನು ಒಂದುವೇಳೆ ತನ್ನನ್ನು ಹಿಂ ತಿರುಗಿಸುವುದಕ್ಕಾಗಿ ಇಲ್ಲಿಗೆ ಬರುವನೋ ಎಂಬ ಶಂಕೆಯಿಂದ, ಈಗಲೂ ಅವನ ಆಗಮನವನ್ನೇ ನಿರೀಕ್ಷಿಸುತ್ತಿರುವಳು. ಒಂದು ಸಂವತ್ಸರಕಾಲದ ವರೆಗೆ ತನು ರಾಮನನ್ನು ನಿರೀಕ್ಷಿಸುತಿದ್ದು, ಆಗ ಅವನು ಬಾರದಿದ್ದರೆ ನನಗೆ ವಶಳಾಗುವುದಾಗಿ ಹೇಳಿ, ' ಆ ಒಂದು ವರ್ಷದ ಗಡುವನ್ನು ಕೇಳಿ ಕೊಂಡಿರುವಳು ನಾನೂ ಅವಳ ಸೀತ್ರಸೌಂದರೈಕ್ಕ ವಶನಾಗಿ, ಅವಳ ಮಾ ತನ್ನು ಮೀರಲಾರದೆ ಹಾಗೆಯೇ ಪ್ರತಿಜ್ಞೆ ಮಾಡಿಕೊಟ್ಟಿರುವೆನು ಎಲೆ ನ ತೃನೆ! ಏನಾದರೇನು ' + ಬಹುದೂರಕ್ಕೆ ನಡೆದು ಬಳಲಿದ ಕುದುರೆಯಂತೆ “ನಾನು ಬಹುಕಾಲದಿಂದ ಕಾಮಪೀಡಿತನಾಗಿ ಬಳಲಿರುವೆನು ನನ್ನ ಗುರವ ಸೈಯಂತೂ ಹೀಗಿರುವುದು, ಈ ಸಂಗತಿಯ ಹಾಗಿರಲಿ ! ಮುಂದೆ ನಮ್ಮ

  • ಇಲ್ಲಿ ದುರಾತ್ಮನಾದ ರಾವಣನು, ತಾನೇ ಸೀತೆಗೆ ಕೊಟ್ಟು ಬಂದ ಎರಡು ತಿಂಗಳ ಗಡುವನ್ನು, ಸೀತೆಯು ಕೇಳಿಕೊಂಡುದಾಗಿ ಆರೋಪಿಸಿ ಹೇಳಿರುವನೆಂದು ಗ್ರಾಹ್ಮವು (ಗೋವಿಂದರಾಜರು ) ಇದರಿಂದ ರಾವಣನು ತನಗೆ ಪರದೇವತೆಯಾದ ಸೀತೆಯು ತನ್ನ ಮನೆಯನ್ನು ಬಿಟ್ಟು ಹೋಗುವ ಕಾಲವು ಸಮೀಪಿಸಿತೆಂದು ಹೇಳಿ ದುಃಖಿಸಿದುದಾಗಿ ವಾಸ್ತವಾರವು, (ಮಹೇಶ್ವರತೀರರು.)

+ ಇಲ್ಲಿ ರಾವಣನು ಇದುವರೆಗೆ ತಾನು ತನ್ನ ಸ್ತ್ರೀಯರಲ್ಲಿ ಬೇಕುಬೇಕಾದ ಮನ್ಮಥ ಭೋಗಗಳನ್ನೆಲ್ಲಾ ಅನುಭವಿಸಿ ಬಳಲಿರುವುದರಿಂದ, ಇನ್ನು ಮುಂದೆ ತನಗೆ ಸೀತಾದೇವಿಯ ಪಾದಾಶ್ರಯಣವೊಂದುಹೊರತು ಬೇರೊಂದೂ ಅಪೇಕ್ಷಿತವಲ್ಲವೆಂ ದು ಹೇಳಿದುದಾಗಿ ವಾಸ್ತವಾರವು