ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೧೩೩ ಶ್ರೀಮದ್ರಾಮಾಯಣವು [ಸರ್ಗ, ೧೫ ರಾವಣನಿಗೂ ಕ್ಷೇಮವುಂಟು ! ಅವನ ಮಿತ್ರರಾದ ನಿಮಗೂ ಮೇಲೆ ಯುಂಟು ನಮ್ಮ ರಾಜನು ತಾನಾಗಿ ಸೀತೆಯನ್ನು ರಾಮನಿಗೆ ಕೊಡದಿದ್ದ ರೂ, ನಾವೇ ಸ್ವತಂತ್ರಿಸಿಯಾದರೂ ಸೀತೆಯನ್ನು ರಾಮನಿಗೆ ಕೊಟ್ಟುಬಿಡು ವೆವು ಒಂದುವೇಳೆ ರಾಜನು ಹರವಾದಿಯಾಗಿದ್ದರ ಮಂತ್ರಿಯಾದವನು ತಮ್ಮ ಮತ್ತು ತಮ್ಮ ಶತ್ರುಗಳ ಬಲಾ ಬಲವನ್ನು ತಿಳಿದು, ಉಭಯಪಕ್ಷಗಲ್ಲಿ ರುವ# ಕ್ಷಯಸ್ಥಾನವೃದ್ಧಿಗಳೆಂಬ ತ್ರಿವರ್ಗಗಳನ್ನೂ ಸೂಕ್ಷ್ಮದೃಷ್ಟಿಯಿಂದ ಪರಾಲೋಚಿಸಿ, ಕಾಲೋಚಿತವಾಗಿ ಯೂ, ಸ್ವಾಮಿಗೆ ಹಿತವಾಗಿಯೂ ಇರುವ ಕಾರವನ್ನು ಪದೇತಿಸಬೇಕು ? ” ಎಂದನು ಇಲ್ಲಿಗೆ ಹದಿನಾಲ್ಕನೆಯಸರ್ಗವು ( ಇಂದ್ರಜಿತು ವಿಭೀಷಣನ ಮತವನ್ನು ಖಂಡಿಸಿ : ದುದು ವಿಭೀಷಣನು ಇಂದ್ರಜಿತ ದುರ್ಬುದಿ | ( ಗಾಗಿ ಅವನನ್ನು ದೂಷಿಸಿದುದು * ಬೃಹಸ್ಪತಿಯಂತೆ ಮಹಾಬುದ್ಧಿಮಂತನಾದ ವಿಭೀಷಣನು ಹೇಳಿದ ಈ ಮಾತುಗಳೆಲ್ಲವನ್ನೂ, ಇಂದ್ರಜಿತ್ತು ಬಹಳ ಕಷ್ಟದಿಂದಲೇ ಕೇಳು ತಿದ್ದು, ಕೊನೆಗೆ ಕೋಪವನ್ನು ತಡೆಯಲಾರದೆ ವಿಭೀಷಣನನ್ನು ಕುರಿತು «ತಾತಾ' ಸೀನು ಕೊನೆಗೆ ಹೇಳಿದ ಈ ಮಾತು ಕೇವಲವಿರತ್ಯಕವಾದುದು | ನಿನ್ನ ಭಯಸ್ವಭಾವವನ್ನೂ ಚೆನ್ನಾಗಿ ತೋರಿಸುವುದು ಛೇ ' ಯಾವ ಮಾ ತನ್ನಾಡಿದೆ ' ನಮ್ಮ ರಾಕ್ಷಸಕುಲವಲ್ಲದೆ ಬೇರೆ ಕುಲದಲ್ಲಿ ಹುಟ್ಟಿದವನಾದ ರೂ ಹೀಗೆ ನುಡಿಯಲಾರನು' ಹೀಗೆ ನಡೆಯಲೂ ಆರನು ' ಇನ್ನು ಪುಲಸ್ಯ

  • ಶತ್ರುಕ್ಷಯವನ್ನೂ, ಸ್ಪವೃದ್ಧಿಯನ್ನೂ ನೋಡಿಬಾಗ ಯಾನವನೂ , ಶತ್ರ ವೃದ್ಧಿಯನ್ನೂ ಸೂಕ್ಷಯವನ್ನೂ ನೋಡಿದಾಗ ಸಂಧಿಯನ್ನೂ, ಇಬ್ಬ- ಸಮಬಲವು ಇವರಾಗಿದ್ದಾಗ ಆಸನವನ್ನೂ ನಡೆಸುವಂತೆ ಮಂತ್ರಿಗಳು ರಾಜನಿಗೆ ಪ್ರೇರಿಸಬೇಕೆಂ ಬುದು ರಾಜನೀತಿಯು ಪ್ರಕೃತದಲ್ಲಿ ಹಿಂದೆ ರಾವಣನಿಗೆ ಲಂಕಾದಹನಾದ್ಯನೇಕಪರಾಭ ವಗಳೂ, ರಾಮನಿಗೆ ವಾನರಸೇನಾಸಂಪತ್ನಿಯೇ ಮೊದಲಾದ ವೃದ್ಧಿಯ ತೋರುತ್ತಿರು ವುದರಿಂದ, ಈಗ ರಾಮನಿಗೆ ಸೀತೆಯನ್ನೊಪ್ಪಿಸಿ ಸಂಧಿಮಾಡಿಕೊಳ್ಳುವುದೇ ಸಾಧುವೆಂ ದು ನೀವು ನಿಮ್ಮ ಪ್ರಭುವಾದರಾವಣನಿಗೆ ತಿಳಿಸಬೇಕೆಂದು ಹೇಳಿದುದಾಗಿ ಭಾವವು