ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೧೪೨ ಶ್ರೀಮದ್ರಾಮಾಯಣವು (ಸರ್ಗ, ೧೬, ಮೇಲೆ ಬಿದ್ದ ಜಲಬಿಂದುಗಳೊಡನೆ ಅಂದುವುವೆ?ಅದರಂತೆಯೇ ದುಷ್ಯರೊ ಡನೆ ಎಷ್ಟು ದಿನಗಳವರೆಗೆ ಸಹವಾಸಮಾಡಿದರೂ ಸ್ನೇಹವು ಹುಟ್ಟದು, ದುಂಬಿಯು ಹೂಗಳಲ್ಲಿರುವ ಮಕರಂದರಸವನ್ನು ಕುಡಿದಮೇಲೆ, ಕ್ಷಣ ಮಾತ್ರವೂ ಅಲ್ಲಿ ನಿಲ್ಲದೆ, ಆ ಹೂಗಳನ್ನು ಬಿಟ್ಟೋದರಿಹೋಗುವಂತೆ, ನೀನೂ ಇದುವರೆಗೆ ನನ್ನಿಂದ ಅನೇಕಭೋಗಗಳನ್ನನುಭವಿಸಿಯೂ, ನನ್ನಲ್ಲಿ ಕೃತಜ್ಞ ತೆಯಿಲ್ಲದೆ ನನಗೆ ಕೇಡನ್ನೆ ಕೋರುತ್ತಿರುವೆ ದುಷ್ಯರ ಸೈ ಹವೇ ಈ ರೀತಿ ಯಾಗಿರುವುದು ಕಾಡಾನೆಯು ಕೊಳದಲ್ಲಿ ಮುಳುಗಿ ಬಂದೊಡನೆ, ಸುಂಡಿ ಲಿಂದ ನೆಲದ ಮಣ್ಣನ್ನೆತ್ತಿ ತನ್ನ ಮೈಮೇಲೆ ಸುರಿದು, ಮೈ ಯನ್ನು ಕೊಳೆ ಮಾಡಿಕೊಳ್ಳುವಂತೆ, ದುಷ್ಯರ ಸ್ನೇಹದಿಂದ ತನ್ನನ್ನೇ ತಾನು ಕೆಡಿಸಿದಂತಾ ಗುವುದು, ಮೇಫುಗಳು ಶರತ್ಕಾಲದಲ್ಲಿ ಅಟ್ಟಹಾಸದಿಂದ ಗರ್ಜಿಸಿ ಎಡೆಬಿಡದೆ ಮಳೆಯನ್ನು ಸುರಿಸಿದರೂ, ಆ ನೀರು ಭೂಮಿಗಂಟಿದಂತೆ ಎಂದಿದ್ದರೂ ದು «ರ ಸ್ನೇಹವು ಫಲಕಾರಿಯಲ್ಲ. ಛೇ ' ಕುಲಗೇಡಿಯೆ ' ಸೀನು ನನಗೆ ಒಡ ಹುಟ್ಟಿದ ತಮ್ಮ ನಾದುದರಿಂದ ನಾನು ಸುಮ್ಮನಿರಬೇಕಾಗಿದೆ ಈಗ ನೀನು ಹೇಳಿದ ಮಾತನ್ನೇ ಬೇರೊಬ್ಬನು ನನ್ನ ಮುಂದೆ ನುಡಿದಿದ್ದರೆ, ಇದುವರೆ ಗೂ ಅವನು ಬದುಕುತ್ತಿರಲಿಲ್ಲ! ಕುಲಗೇಡಿಯಾದ ನಿನ್ನ ಜನ್ಮವನ್ನು ಸುಡ ಬೇಕು” ಎಂದನು. ಹೀಗೆ ರಾವಣನು ಪರುಷವಾಕ್ಯಗಳನ್ನಾಡಲು, ನ್ಯಾ ಯವಾದಿಯಾದ ವಿಭೀಷಣನು ಆ ಮಾತುಗಳನ್ನು ಕೇಳಿ ಸಹಿಸಲಾರದೆ, ತನ್ನ ನಾಲ್ವರು ರಾಕ್ಷಸಮಂತ್ರಿಗಳೊಡಗೂಡಿ, ಕೈಯಲ್ಲಿ ಹಿಡಿದ ಗದೆಯೊ ಡನೆ ಆಕಾಶಕ್ಕೆ ಹಾರಿಬಿಟ್ಟನು ಸದ್ದತಿ ಸೇತುವಾದ ರಾಮಾಶ್ರಯಣಪ್ರಯ ತವೆಂಬ ಭಾಗ್ಯಲಕ್ಷಿವಿಶಿಷ್ಟನಾದ ವಿಭೀಷಣನು, ಹೀಗೆ ಕೋಪದಿಂದ ಮೇಲೆ ಹಾರಿ,ಅಂತರಿಕ್ಷದಲ್ಲಿದ್ದಂತೆಯೇ ತಿರುಗಿ ತನ್ನ ಣ್ಣನಾದ ರಾವಣನನ್ನು ಕುರಿತು, “ಎಲೆ ರಾಜನೆ' ಹೇಗಿಣ್ಣರೂ ನೀನು ನನಗೆ ಒಡಹುಟ್ಟಿದವನು ನನ್ನ ನಲ್ಲಿ ಹೇಗೆ ಬೇಕಾದರೂ ಸಿಂಡಿಸಬಹುದು' ನಿನ್ನ ಮಾತಿಗೆ ನಾನು ಇದಿ ರು ಮಾತಾಡಬಾರದು! ನೀನು ನನಗೆ ಅಣ್ಣನಾದುದರಿಂದ ತಂದೆಗೆ ಸಮಾ ನನು! ಪೂಜ್ಯನು' ಆದರೇನು? ನೀನು ಥರ ಮಾರ್ಗವನ್ನು ಬಿಟ್ಟು ಹೋಗು ವುದಲ್ಲದೆ, ನನ್ನ ಮೇಲೆಯೂ ಇಲ್ಲದ ದೋಷವನ್ನು ಕಲ್ಪಿಸಿ ಕ್ರೂರವಾಕ್ಯವನ್ನು