ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೧೦೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪0೨ ಶ್ರೀಮದ್ರಾಮಾಯಣವು [ಸರ್ಗ ೧೧, ಬಿಡುವನಲ್ಲವೆ? ಹಾಗೆಯೇ ಎಷ್ಟೋ ಆವರ್ತಿ ಬಾಣಗಳಿಂದ ಇವುಗಳನ್ನು ಕೊರೆದಿರುವನು ಈಗ ರಾಮನ ತನ್ನ ಒಂದೇಬಾಣದಿಂದ ಇವುಗಳಲ್ಲಿ ಒಂ ದೊಂದು ಮರವನ್ನು ಕಡಿದುಬಿಟ್ಟರೆ ಸಾಕು' ಆಗ ರಾಮನ ವೀರವು ಚೆನ್ನಾಗಿ ತಿಳಿದುಹೋಗುವುದು ವಾಲಿಯ ಹತನಾದನೆಂದೇ ತಿಳಿ ಯುವೆನು ಇದರಲ್ಲಿ ಏನೇನೂ ಸಂದೇಹವಿಲ್ಲ ' ಅದರ ಲಕ್ಷಣಾ ! ನನಗೆ ಇನ್ನೂ ಒಂದುಸಂದೇಹವಿರುವುದು ಅದನ್ನೂ ತೀರಿಸಿಬಿಟ್ಟರೆ ಇನ್ನೂ ಸರೋತ್ರಮವು ಇದೇ' ಇಲ್ಲಿ ಕಾಣುವ ಈ ಎಮ್ಮಯ ಮೃತದೇಹವನ್ನು ವಾಲಿಯು ತನ್ನ ಕೈಯಿಂದ ಇಷ್ಟು ದೂರಕ್ಕ'ಬಿಸುವನಲ್ಲವೆ ? ಈಗೀಗ ಚೆ ಸ್ನಾಗಿ ಒಣಗಿ ಅಸ್ಥಿಶೇಷವಾಗಿರುವ ಈ ದೇಹವನ್ನೇ ರಾಮನು ತನ್ನ ಕಾಲಿನಿಂ ದ ಆದೆ ' ಇನ್ನೂ ರುಬಿಕ್ಸಿನದೂರಕ್ಕೆ ಚಿಮ್ಮಿ ಬಿಡಲಿ' ಆಗ ನನಗೆಸಂಪೂರ್ಣವಾ ದ ನಂಬಿಕಯು ಹುಟ್ಟಿಹೋಗುವುದು” ಎಂದನು ಈ ಮಾತುಗಳನ್ನಾಡಿದ ಮೇಲೆ ಸುಗ್ರೀವನ ಮನಸ್ಸಿನಲ್ಲಿ ಸ್ವಲ್ಪಶಂಕಯುಂಟಾಯಿತು ರಾಮನ ವೀ ಲ್ಯವನ್ನು ನಂಬದಮೇಲೆ ಅವನಿಗೆ ತನ್ನಲ್ಲಿ ಏನು ಕೋಪವುಂಟಾಗುವುದೋ ಎಂದು ಸ್ವಲ್ಪಹೊತ್ತಿನವರಗೆ ಚಿಂತಿಸಿ, ಕೊನೆಗೆ ರಾಮನನ್ನು ಕುರಿತು, ರಾ ಮಾ! ನಾನು ಹೀಗೆ ಹೇಳಿದೆನೆಂದು ಕೋಪಿಸಬೇಡ ! ಆ ವಾಲಿಯೋನೋ ಮಹಾಶೂರನು'ಇದುವರೆಗೆ ಆನೇಕಶೂರರನ್ನೂ ಕೊಂದಿರುವನು ಮಹಾ ಬಲವುಳ್ಳವನು ಅವನ ಬಲಪರಾಕ್ರಮಗಳನ್ನು ಲೋಕವೆಲ್ಲವೂ ಕೇಳಿಬಲ್ಲು ದು ಇದುವರೆಗೆ ಅವನು ಯಾವಯುದ್ಧದಲ್ಲಿಯೂ ಸೋತು ಒಂದವನಲ್ಲ. ಆತನು ದೇವತೆಗಳಿಗೂ ದುಷ್ಕರಗಳಾದ ಅನೇಕ ಕಾರಗಳನ್ನು ನಡೆಸಿರುವುದ ನ್ನು ನಾನೇ ಕಂಡುಬಲ್ಲೆನು ಇವೆಲ್ಲವನ್ನೂ ಆಲೋಚಿಸಿಯೇ ನಾನು ಭಯ ಪಟ್ಟು ಈ ಋಶ್ಯಮಕದಲ್ಲಿ ಸೇರಿಕೊಂಡಿರುವೆನು ಯಾರಿಂದಲೂ ಜಯಿ ಸಲಸಾಧ್ಯವಾದ ಅವನ ಪರಾಕ್ರಮವನ್ನೂ, ಯಾರಿಗೂ ಅಂಜದ ಅವನ ಮ ಹಾಗೈದ್ಯವನ್ನೂ, ತಡೆಯಬಾರದ ಅವನ ಮಹಾಕೋಪವನ್ನೂ ನಾನು ಕಂ ಡುಬಲ್ಲೆನಾದುದರಿಂದಲೇ, ಈ ಋಶ್ಯಮೂಕವನ್ನು ಬಿಡದೆ ಇಲ್ಲಿಯೇ ಅವಿತು ಕೊಂಡಿರುವೆನು, ಯಾವಾಗಲೂ ಅವನ ಭಯದಿಂದಲೂ, ದುಃಖದಿಂದಲೂ ನಡುಗುತ್ತ ಈ ವನದಲ್ಲಿ ನಾನು, ನನ್ನ ಇಷ್ಟರಾಗಿರುವ ಈ ಹನುಮಂತನೇ