ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೧೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ, ೧೨ | ಕಿಷಿಂಧಾಕಾಂಡವು. ೧೪೦೬ ಗದಿಂದ ಹೊರಗೆ ಹೊರಟುಬಂದನು ಆಕಾಶದಲ್ಲಿ ಬುಧಾಂಗಾರಕಗ್ರಹಗ ಛಂತೆ ವಾಲಿಸುಗ್ರಿವರಿಬ್ಬರೂ ಘೋರವಾದ ತುಮುಲಯುದ್ಧಕ್ಕಾರಂಭಿ ಸಿದರು ಆ ಸಹೋದರರಿಬ್ಬರೂ ಒಬ್ಬರಿಗೊಬ್ಬರು ಕೋಪದಿಂದ ಮೈತಿಳಿ ಯದೆ, ಸಿಡಿಲಿಗೆ ಸಮಾನವಾದ ಅಂಗೈಗಳಿಂದಲೂ, ವಜಸಮಾನಗ ಳಾದ ಮುಮ್ಮಿಗಳಿಂದಲೂ ಹೊಡೆದಾಡುತಿದ್ದರು ಇತ್ತಲಾಗಿ ರಾಮನು ಧನುರ್ಧಾರಿಯಾಗಿ ಮರದ ಮರೆಯಲ್ಲಿ ನಿಂತು ನೋಡುತಿದ್ದನು ವಾ ಅಸುಗ್ರಿವರಿಬ್ಬರೂ ಅವಳಿಮಕ್ಕಳಾದ ಅಸೀದೇವತೆಗಳಂತ ಸ್ವಲ್ಪ ವೂ ವ್ಯತ್ಯಾಸವಿದೆ ಒಬ್ಬರನ್ನೊಬ್ಬರು ಹೋಲುತಿದ್ದುದರಿಂದ, ಅವ ರಲ್ಲಿ ವಾಲಿ ಯಾರ', ಸುಗ್ರಿವನಾರು” ಎಂಬ ಭೇದವನ್ನು ಕಂಡುಹಿಡಿ ಯಲಾರದೆ ಹೋದನು ಈ ಸಂದೇಹದಿಂದ ತಾನು ಕೈಯಲ್ಲಿ ಹಿಡಿದಿದ್ದ ಬಾಣವನ್ನು ಬಿಡುವ ವಿಷಯದಲ್ಲಿ ಆತನ ಮನಸ್ಸು ಹಿಂತೆಗೆಯಿತು ಇಷ್ಟರಲ್ಲಿ ಸುಗ್ರಿವನೂ ಶ್ರಾಂತನಾಗಿ ವಾಲಿಯಿಂದ ಭಂಗವನ್ನು ಹೊಂದಬೇಕಾದ ಸಮಯವು ಬಂದಿತು ಕ್ಷಣಕ್ಷಣಕ್ಕೂ ರಾಮನನ್ನೂ, ರಾಮಬಾಣವನ್ನೂ ಇ ದಿರುನೋಡುತಿದ್ದನು ಎತ್ತಲಾಗಿ ತಿರುಗಿ ನೋಡಿದರೂ ರಾಮನ ಸುಳಿವಿಲ್ಲ ಮಾಡಬೇಕಾದುದೇನು?ಹೀಗೆ ತರಗೆ ಪೂರ್ಣ ವಾದಭರವಸವನ್ನು ಕೊಟ್ಟಿದ್ದ ರಾಮನನ್ನು ಕಾಣದೆ ಆಶಾಭಂಗವನ್ನು ಹೊಂದಿ, ಹಿಂತಿರುಗಿ ಪಲಾಯನಮಾ ಡುವುದೇ ಕಾಲೋಚಿತವೆಂದು ನಿಶ್ಚಯಿಸಿ, ಆ ಕ್ಷಣವೇ ಋಶ್ಯಮೂಕಕ್ಕ ಓ ಡಿಹೋದನು ಇಷ್ಟರಲ್ಲಿ ಆ ಸುಗ್ರೀವನ ದುರವಸ್ಥೆಯನ್ನು ಕೇಳ ಬೇಕ?ಅವನ ಶಕ್ತಿಯಲ್ಲವೂ ಕುಗ್ಗಿ ಹೋಯಿತು ಮೈಯಲ್ಲಿ ಧಾರಧಾರೆಯಾಗಿ ರಕ್ತವು ಸೋರುತಿತ್ತು' ವಾಲಿಯ ಕೃಪೆಟ್ಟುಗಳಿಂದ ಅವನ ಅಂಗಾಂಗವೆ ಲವೂ ಜರ್ಝರಿತವಾಯಿತು'ಇದರಮೇಲೆ ಹಿಂದೆ ವಾಲಿ ಯು ಬೆನ್ನಟ್ಟಿ ಓಡಿಸಿ ಕೊಂಡೂ ಬರುತಿದ್ದನು ಸುಗ್ರೀವನು ಮಹಾಪ್ರಯತ್ನದಿಂದ ತಲೆತಪ್ಪಿಸಿ ಕೊಂಡು ಬಂದು,ಮತಂಗವನದಲ್ಲಿ ಅವಿತುಕೊಂಡುಬಿಟ್ಟನು ಅದನ್ನು ನೋಡಿ ಬೆನ್ನಟ್ಟಿ ಬರುತಿದ್ದ ವಾಲಿ ಯು, ಶಾಪಭಯದಿಂದ ಅಲ್ಲಿಗೆ ಪ್ರವೇಶಿಸಲಾ ರದೆ ಕೋಪದಿಂದ ಆ ಸುಗ್ರೀವನನ್ನು ಕೂಗಿ ಸುಗ್ರೀವಾ' ಈಸಲಕ್ಕ ತಪ್ಪಿ ಸಿಕೊಂಡು ಬದುಕಿದೆ' ಹೋಗು” ಎಂದು ಹೇಳಿ ತನ್ನ ಪುರಕ್ಕೆ ಹಿಂತಿರುಗಿಬಿ