ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೧೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪೧೬ ಶ್ರೀಮದ್ರಾಮಾಯಣವು [ಸರ್ಗ ೧೪ ಹೇಗೆ ಫಲಭರಿತವನ್ನಾಗಿ ಮಾಡುವನೋ, ಹಾಗೆ ನಾನು ವಾಲಿಯನ್ನು ಕೊಲ್ಲಬೇಕೆಂದು ಮಾಡಿದ ಪ್ರತಿಜ್ಞೆಯನ್ನು ನನ್ನ ಪರಾಕ್ರಮದಿಂದ ಸ ಫಲವನ್ನಾಗಿ ಮಾಡುವೆನು ಮಾಡಿದ ಪ್ರತಿಜ್ಞೆಗೆ ನಾನು ಯಾವಾಗಲೂ ತಪ್ಪತಕ್ಕವನಲ್ಲ ಅದರಿಂದ ನೀನು ಸಂದೇಹಿಸಬೇಕಾದುದೇ ಇಲ್ಲ ಸುಗ್ರೀ ವಾ ! ಸುವರ್ಣಮಾಲಿಕೆಯೊಡಗೂಡಿದ ಆ ವಾಲಿಯು ಈಕ್ಷಣವೇಹೊರ ಟು ಬರುವುದಕ್ಕೆ ತಕ್ಕಂತೆ ನೀನು ಒಂದುದೊಡ್ಡಗರ್ಜನೆಯನ್ನು ಮಾಡು ಆ ವಾಲಿಯು ಯಾವಾಗಲೂ ಜಯಶೀಲನು ಬಲದಲ್ಲಿ ಬಹಳಖ್ಯಾತಿಯನ್ನು ಹೊಂದಿದವನು ಶತ್ರುಗಳ ಬಲವನ್ನೂ ಮಚ್ಚಿ ಸಂತೋಷಿಸುವವನು ಯುದ್ಧಪ್ರಿಯನು ನೀನು ಇದಕ್ಕೆ ಮೊದಲೇ ಒಂದಾವರ್ತಿ ಆತನನ್ನು ಯು 'ಕ್ಕೆ ಕರೆದು ಇದಿರಿಸಿದವನಾದುದರಿಂದ, ಈಗ ನಿನ್ನ ಗರ್ಜನೆಯನ್ನು ಕೇಳಿದ ಕ್ಷಣವೇ ಅವನು ಕೋಪದಿಂದ ಹೊರಟುಬರುವುದರಲ್ಲಿ ಸಂದೇ ಹವಿಲ್ಲ ಪರಾಕ್ರಮವುಳ್ಳವರು ಯುದ್ಧದಲ್ಲಿ ಶತ್ರುಗಳು ಮಾಡುವ ತಿರಸ್ಕಾ ರವನ್ನು ಸ್ವಲ್ಪವೂ ಸಹಿಸಲಾರರು ಇದರಮೇಲೆ ಈ ವಾಲಿ ಯಂತೆ ತ ಮೃ ಪರಾಕ್ರಮವೇ ಹೆಚ್ಚೆಂಬ ಹೆಮ್ಮೆಯಿಂದಿರುವವರು, ಅದರಲ್ಲಿಯೂ *ತಮ್ಮ ಸ್ತ್ರೀಯರ ಮುಂದಿರುವಾಗ, 'ಶತ್ರುಗಳ ತಿರಸ್ಕಾರವನ್ನು ಸ್ವಲ್ಪಮಾ ತ್ರವೂ ಸಹಿಸರು,” ಎಂದನು ಇದನ್ನು ಕೇಳಿ ಸುವರ್ಣಛಾಯಯುಳ್ಳ ಆ ಸುಗ್ರೀವನು, ಆಕಾಶವನ್ನು ಭರಿಸುವಂತೆ ಆಗಲೇ ಒಂದು ಸಿಂಹ ನಾದವನ್ನು ಮಾಡಿದನು ರಾಜ್ಯವು ಅರಾಜಕವಾಗಿ ಕೇಳುವವರಿಲ್ಲದಿದ್ದಾಗ, ದೇಶದಲ್ಲಿರುವ ಕುಲಸ್ತ್ರೀಯರು ಪರಪುರುಷರಿಂದ ಹಿಡಿಯಲ್ಪಟ್ಟ ತುರು ಬುಳ್ಳರಾಗಿ, ದಿಕ್ಕು ಕಾಣದೆ ತತ್ತಳಿಸುವಂತೆ ಆಗಪಟ್ಟಣದ ಹೊರಗಿದ್ದ ಗೋ ಕುಲವೆಲ್ಲವೂ ಸುಗ್ರೀವನ ಧ್ವನಿಗೆ ಬೆದರಿ ಪಟ್ಟಣಕ್ಕೆ ಹಿಂತಿರುಗಿದುವು ಅಲ್ಲಿದ್ದ ಜಿಂಕೆಗಳೂ, ಯುದ್ಧದಲ್ಲಿ ಗಾಯಪಟ್ಟ, ಕುದುರೆಗಳಂತೆ, ಹಿಂದು 'ಪ್ರಾತರೂತ್ರಪರೀಡಾಭ್ಯಾಂ ಮಧ್ಯಾಹ್ನ ಕುಪ್ಪಿಪಾಸಯಾ।*ಸಾಯಂ ಕಾ ಮೇನ ಪೀಡ್ಯಂತೇ ಜಂತವೋನಿಶಿನಿದ್ರಯಾ” ಎಂಬುದಾಗಿ ವಾಲಿಯು ಸೀಮಧ್ಯಗತ ನೆಂದು ಹೇಳಿರುವುದರಿಂದಲೂ, ಗೋವುಗಳಿಗೆ ಪುರಪ್ರವೇಶವನ್ನು ಹೇಳಿದುದರಿಂದಲೂ ಇದು ಸಾಯಂಕಾಲವೆಂದೂಹ್ಯವು