ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೧೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ ೧೬ || ಕಷಿಂಧಾಕಾಂಡವು ೧೪೬೭ ಹಾಕುತ್ತಿದ್ದರು ಹೀಗೆ ದ್ವಂದ್ವಯುದ್ಧವನ್ನು ಮಾಡುತ್ತಿರುವಾಗಲೇ ಮ ಹಾವೀರವುಳ್ಳ ವಾಲಿಯ ಬಲವು ಮೇಲಾಯಿತು ಸೂಕ್ಯಪುತ್ರನಾದ ಸು ಗ್ರೀವನ ಬಲವು ಕ್ರಮಕ್ರಮವಾಗಿ ತಗ್ಗುತಿತ್ಯ ಎಷ್ಟೇ ಬಲಹೀನನಾದ ರೂ ಸುಗ್ರೀವನು ತನ್ನ ಉತ್ಸಾಹವನ್ನೂ, ಕೋಪವನ್ನೂ ಬಿಡದೆ, ಸಾಧ್ಯ ವಾದ ಮಟ್ಟಿಗೆ ತನ್ನ ಹಸ್ತಲಾಘುವಗಳನ್ನು ವಾಲಿಯಮೇಲೆ ತೋರಿಸು ತಿದ್ದನು ವಾಲಿಸುಗ್ರಿವರಿಬ್ಬರೂ ಕೈಗೆ ಸಿಕ್ಕದ ಮರಗಳನ್ನು ಕಿತ್ತು ತಂದು, ಒಬ್ಬರಮೇಲೊಬ್ಬರು ಬೀಸುತಿದ್ದರು ವಜ್ರಸಮಾನಗಳಾದ ಉಗುರುಗಳಿಂದ ಒಬ್ಬರನ್ನೊಬ್ಬರು ಪರಚುತಿದ್ದರು ಮುಖ್ಯಗಳಿಂದಲೂ, ಮೊಳಕಾಲುಗಳಿಂದಲೂ, ಕಾಲುಗಳಿಂದಲೂ, ತೋಳುಗಳಿಂದಲೂ, ಎಡೆ ಬಿಡದೆ ಒಬ್ಬರನ್ನೊಬ್ಬರು ಹೊಡೆಯುತ್ತಿದ್ದರು ಇವರಿಬ್ಬರಿಗೂ ನಡೆದ ಯುದ್ಧವು ಇಂದ್ರವೃತ್ರರಿಗೆ ನಡೆದ ಮಹಾಯುದ್ಧದಂತೆ ಅತಿಘೋರ ವಾಯಿತು ಇಬ್ಬರ ದೇಹದಲ್ಲಿಯೂ ರಕ್ತ ಸುರಿಯುತಿತ್ತು ಇಷ್ಟಾದರೂ ವನಚಾರಿಗಳಾದ ಆ ವಾನರರಿಬ್ಬರೂ ಧೈಯ್ಯಗೆಡದೆ, ಗರ್ಜಿಸುವ ಮಹಾಮ ಫುಗಳಂತ ಸಹ್ಮನಾದದಿಂದ ಒಬ್ಬರನ್ನೊಬ್ಬರು ಹೆದರಿಸುತ್ತ, ಯುದ್ಧ ಮಾಡುತಿದ್ದರು ಅತ್ತಲಾಗಿ ಮರದ ಮರೆಯಲ್ಲಿದ್ದ ರಾಮನು ಇದೆಲ್ಲವನ್ನೂ ನೋಡುತ್ತಿದ್ದನು ಕ್ರಮಕ್ರಮವಾಗಿ ಸುಗ್ರೀವನು ಶಕ್ತಿಗುಂದಿ, ಭಯದಿಂ ದ ಬಾರಿಬಾರಿಗೂ ನಾಲ್ಕು ದಿಕ್ಕುಗಳನ್ನು ನೋಡುತ್ತಿರುವುದನ್ನು ಕಂಡನು ಹೀಗೆ ದುಃಖಿತನಾದ ಸುಗ್ರೀವನನ್ನು ನೋಡಿದೊಡನೆ ಮಹಾತೇಜಸ್ವಿ ಯಾದ ರಾಮನಿಗೆ ಮರುಕವು ಹುಟ್ಟಿತು ವಾಲಿಯನ್ನು ಕೊಲ್ಲುವುದಕ್ಕೆ ತಕ್ಕ ಬಾಣವಾವುದೆಂದು ಹುಡುಕಿ, ಉತ್ತಮವಾದ ಬಾಣವೊಂದನ್ನು ತೆಗೆ ದುಕೊಂಡನು ಸತ್ವದಂತ ಘೋರವಾದ ಆ ಬಾಣವನ್ನು ಧನುಸ್ಸಿನಲ್ಲಿ ಸಂಧಾನಮಾಡಿ, ಯಮನು ಕಾಲಚಕ್ರವನ್ನೆಳೆಯುವಂತೆ ಆ ಧನುಸ್ಸನ್ನು ಆ ಕರ್ಣಾ೦ತವಾಗಿ ಎಳೆದನು ರಾಮನ ಹಸ್ತಸ್ಪರ್ಶಮಾತ್ರದಿಂದಲೇ ಆ ಬಿಲ್ಲಿನ ನಾಣಿನಲ್ಲಿ ಹೊರಟ ಮಹಾಧ್ವನಿಯನ್ನು ಕೇಳಿ, ಆ ವನದಲ್ಲಿದ್ದ ಪಕ್ಷಿ ಗಳೂ, ಮೃಗಗಳೂ, ಪ್ರಳಯಭಯವನ್ನು ಹೊಂದಿದಂತೆ ದಿಕ್ಕುಗೆಟ್ಟು ಓಡಿ ದುವು ಈಬಾಣವನ್ನು ರಾಮನು ತನ್ನ ಬಿಲ್ಲಿನಿಂದ ಪ್ರಯೋಗಿಸಿದೊಡನೆ