ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೧೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ ೧೮] ಕಿಷಿಂಧಾಕಾಂಡವು. ೧೪೫೧ ಸರಿಸಿಯೇ ನಾನೂ ನಿನ್ನನ್ನು ಬಾಣದಿಂದ ವಧಿಸಿರುವೆನು ನೀನು ಶಾಖಾಮ್ಮ ಗವೆನಿಸಿಕೊಂಡಿರುವುದರಿಂದ, ನೀನು ನನ್ನ ಮುಂದೆ ಯುದ್ಧಸನ್ನದ್ಧನಾಗಿ ನಿಂ ತರೂ, ನಿಲ್ಲದಿದ್ದರೂ ನಾನು ನಿನ್ನನ್ನು ಕೊಲ್ಲಬೇಕಾದವಿಷಯದಲ್ಲಿ ಯುಕ್ತಾ ಯುಕ್ತಗಳನ್ನು ಆಲೋಚಿಸಬೇಕಾದುದಿಲ್ಲ ರಣರಂಗದಲ್ಲಿ ನಿಂತು ವೀರ ರೊಡನೆ ಯುದ್ಧ ಮಾಡುವಾಗ ಅನುಸರಿಸಬೇಕಾದ ಧರ್ಮವೇ ಬೇರೆ ! ಬೇ ಟೆಯಲ್ಲಿ ಮೃಗಗಳನ್ನು ಕೊಲ್ಲುವ ರೀತಿಯೇ ಬೇರೆ' ಅದಕ್ಕಿದಕ್ಕೆ ಸಂಬಂಧ ವೇ ಇಲ್ಲ ಎಲೈ ವಾನರಶ್ರೇಷ್ಠನೆ' ದುರ್ಲಭವಾದ ಧರವನ್ನಾಗಲಿ, ಜೀ ವನವನ್ನಾಗಲಿ, ಶುಭವನ್ನಾಗಲಿ ಪ್ರಜೆಗಳಿಗೆ ರಾಜರೇ ನಡೆಸಿಕೊಡತಕ್ಕವ ರು ದೇವತಗಳ ಮನುಷ್ಯರೂಪದಿಂದ ಭೂಲೋಕದಲ್ಲಿ ಹುಟ್ಟಿ, ಧಮ್ಮ ರಕ್ಷಣಾರವಾಗಿ ರಾಜರೆನಿಸಿಕೊಂಡು ಸಂಚರಿಸುತ್ತಿರುವರು ಇದರಲ್ಲಿ ಸಂ ದೇಹವಿಲ್ಲ ಆದುದರಿಂದ ದೇವಾಂಶವುಳ್ಳ ಆ ರಾಜರನ್ನು ಎಷ್ಟು ಮಾತ್ರ ವೂ, ಹಿಂಸಿಸುವುದಾಗಲಿ, ನಿಂದಿಸುವುದಾಗಲಿ, ಆಕ್ಷೇಪಿಸುವುದಾಗಲಿ, ಅವ ರೊಡನೆ ಆಪ್ರಿಯವಾಕ್ಯಗಳನ್ನಾಡುವುದಾಗಲಿ ಯುಕ್ತವಲ್ಲ ನೀನಾದರೋ ಈ ಧರೆ ಸೂಕ್ಷವೊಂದನ್ನೂ ತಿಳಿಯದೆ, ಕೇವಲರೋಷದಿಂದ ಮಾತಾ ಡುತ್ತಿರುವೆ ಪಿತೃಪಿತಾಮಹರ ಕಾಲದಿಂದ ಬಂದ ಸನಾತನಧಮ್ಮವನ್ನು ತಪ್ಪದೆ, ತದನುಸಾರವಾಗಿ ನಡೆಯುತ್ತಿರುವ ನನ್ನನ್ನು ಹೀಗೇಕೆ ದೂಷಿಸು ವೆ?” ಎಂದನು ಇದನ್ನು ಕೇಳಿದಮೇಲೆ ವಾಲಿಗೆ ಪಶ್ಚಾತ್ತಾಪವು ಹುಟ್ಟಿತು. ಧಮ್ಮಸೂಕ್ಷವನ್ನು ತನ್ನ ಕ್ಲಿಯೂ ಆಲೋಚಿಕೊಂಡು, ರಾಮನಲ್ಲಿ ಯಾವ ದೋಷವೂ ಇಲ್ಲವೆಂದೇ ನಿಶ್ಚಯಿಸಿಕೊಂಡನು ಮೊದಲು ಯುಕ್ತಾಯುಕ್ತ ವನ್ನು ವಿಚಾರಿಸದೆ ಕೇವಲರೋಷದಿಂದ ರಾಮನನ್ನು ನಿಂದಿಸಿದುದಕ್ಕಾಗಿ ಅನುತಾಪಪಡುತ್ತ, ಆತನನ್ನು ನೋಡಿ, ಆತನಿಗೆ ಕೈಮುಗಿದು “ಎಲೈ ಪ ರುಷಶ್ರೇಷ್ಠನೆ' ನೀನು ಹೇಳಿದುದೇ ವಾಸ್ತವವು ಇದರಲ್ಲಿ ಸಂದೇಹವಿಲ್ಲ ಧಮ್ಮಸೂಕ್ಷವೆಂಬುದು ಬಹಳ ದುರವಗಾಹವು ಅಂತಹವಿಷಯದಲ್ಲಿ ಆ ಲ್ಪನಾದ ನಾನು ಸಮಾಧಾನವನ್ನು ಹೇಳಲಾರೆನೆಂಬುದೂ ನಿಜವು ಸತ್ವಜ್ಞ ನಾದ ನಿನ್ನ ಮಾತಿಗೆ ಅಲ್ಪ ಜ್ಞನಾದ ನಾನು ಯಾವಪ್ರತ್ಯುತ್ತರವನ್ನು ಹೇ ಳಬಲ್ಲೆನು! ಎಲೈ ಮಹಾತ್ಮನೆ' ನಾನು ಮೊದಲು ಅಜ್ಞಾನದಿಂದ ನಿನ್ನನು