ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೧೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪೫೨ ಶ್ರೀಮದ್ರಾಮಾಯಣವು [ಸರ್ಗ ೧೮, ಕುರಿತು ಅನೇಕವಿಧದಲ್ಲಿ ಅಪ್ರಿಯವಾಕ್ಯಗಳನ್ನಾಡಿಬಿಟ್ಟೆನು ಆ ಅಪರಾಧ ವನ್ನು ನೀನು ಮನಸ್ಸಿಗೆ ತಂದುಕೊಳ್ಳದೆ ಮನ್ನಿ ಸಬೇಕು ನೀನು ಸಮಸ್ತ ವಿಧಗಳಾದ ಆರ್ಥತತ್ವಗಳನ್ನೂ ತಿಳಿದವನು ಪ್ರಜೆಗಳಿಗೆ ಕ್ಷೇಮವನ್ನು oಟು ಮಾಡುವುದರಲ್ಲಿಯೇ ಆಸಕ್ತಿಯುಳ್ಳವನು ಕಾರ್ ಕಾರಣಗಳನ್ನು ವಿಮರ್ಶಿ ಸಿ ನಿಶ್ಚಯಿಸುವವಿಷಯದಲ್ಲಿ ನಿನ್ನ ಬುದ್ಧಿಯು ಸ್ವಲ್ಪವೂ ಚಾಂಚಲ್ಯವಿಲ್ಲದೆ ಪ್ರಸನ್ನ ವಾಗಿರುವುದು ಎಲೈ ಧರಜ್ಞನೆ ನೀನು ಹೇಳಿದಂತೆಯೇ ನಾನು ಧರವನ್ನು ಮೀರಿ ನಡೆದವನೆಂಬುದೇನೋ ನಿಜವು ಮಾಡಬಾರದ ಕಾರವ ನ್ಯೂ ಮಾಡಿಬಿಟ್ಟೆನು ಇಂತಹ ಪಾಪಿಯಾದ ನನ್ನ ನ್ನು ನೀನು ಮನ್ನಿ ಸಬೇಕು ಹಾಗೆ ನೀನು ಕ್ಷಮಿಸಿದವಿಷಯದಲ್ಲಿ ಧಯುಕ್ತವಾದ ನಿನ್ನ ಮಾತಿನಿಂದ ಅಭಯವಾಕ್ಯವನ್ನೂ ಕೊಟ್ಟು ಕಾಪಾಡಬೇಕು ಈಗ ನಾನು ನಿನ್ನಿಂದಹತನಾ ದುದಕ್ಕಾಗಿ ನನ್ನನ್ನು ಕುರಿತಾಗಲಿ, ತಾರಯನ್ನು ಕುರಿತಾಗಲಿ, ನನ್ನ ಇತ ರಬಂಧುಗಳನ್ನು ಕುರಿತಾಗಲಿ ನಾನು ಸ್ವಲ್ಪವೂ ದುಃಖಿಸುವವನಲ್ಲ ಆ ದರೆ ಗುಣಾಗ್ರಣಿಯಾಗಿ ರತ್ನಾಂಗದಗಳಿಂದೊಪ್ಪುತ್ತಿರುವ ನನ್ನ ಮುದ್ದು ಮಗನಾದ ಈ ಅಂಗದನಿಗಾಗಿಯೇ ನಾನು ಬಹಳವಾಗಿ ದುಃಖಿಸಬೇ ಕಾಗಿರುವುದು, ಅವನು ಹುಟ್ಟಿದಂದಿನಿಂದಲೂ ನಾನು ಎಷ್ಟೋ ಮೋ ಹದಿಂದ ಲಾಲಿಸಿ ಬಳೆಸಿದೆನು ಅವನು ನನ್ನನ್ನು ನೋಡದೆ ನಿಮಿಷಮಾ ತ್ರವೂ ಸಹಿಸಲಾರನು ನಾನು ಈಗ ಮೃತನಾದುದನ್ನು ಕೇಳಿದರೆ, ನೀರಿ ಲ್ಲದ ಕೆರೆಯು ಕ್ಷಣಕ್ಷಣಕ್ಕೂ ಒಣಗಿಹೋಗುವಂತೆ ದುಃಖದಿಂದ ಕೃತಿ ಹೋಗುವನು ರಾಮಾ' ನಾನು ತಾರೆಯಲ್ಲಿ ಬಹುಕಾಲಕ್ಕೆ ಈ ಮುದ್ದುಮ ಗನೊಬ್ಬನನ್ನು ಪಡೆದೆನು ಇನ್ನೂ ಅವನು ಕೇವಲಬಾಲ್ಯದಶೆಯಲ್ಲಿರುವ ನು ಯಾವುದನ್ನೂ ತಿಳಿದವನಲ್ಲ ನನಗೆ ಅವನೊಬ್ಬನೇ ಕೇವಲಪ್ರಿಯನಾ ದ ಮಗನು ಅವನು ಬಾಲನಾದರೂ ಬಹಳಬಲಾಡ್ಯನು ರಾಮಾ ! ಆತ ನನ್ನು ಮಾತ್ರ ನೀನು ಯಾವವಿಧದಲ್ಲಿಯೂ ನೋಯಿಸದೆ, ಪ್ರೀತಿಯಿಂದ ಪೋಷಿಸುತ್ತಿರಬೇಕು ಸುಗ್ರೀವನಲ್ಲಿಯೂ, ಆ ಅಂಗದನಲ್ಲಿಯೂ ನೀನು ಸ ಮಾನವಾದ ಬುದ್ಧಿಯನ್ನೇ, ಇಟ್ಟು ನಿಷ್ಪಕ್ಷಪಾತವಾಗಿ ನೋಡಬೇಕು ಆ ವರಿಬ್ಬರಲ್ಲಿ ಯಾವನೊಬ್ಬನು ತಪ್ಪಿ ನಡೆದರೂ ಅವರನ್ನು ಶಿಕ್ಷಿಸುವುದಕ್ಕೂ,