ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೧೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪೫೫; ಸರ್ಗ, ೧೯ ] ಕಿಷಿಂಧಾಕಾಂಡವು ++ ತಾರೆಯು ವಾಲಿಯನ್ನು ನೋಡುವುದಕ್ಕಾಗಿ ಬಂದುದು ww ಬಾಣದಿಂದ ಹತನಾಗಿ ನೆಲದಮೇಲೆ ಬಿದ್ದಿದ್ದ ಆ ವಾಲಿಯು, ತನ್ನ ಆಕ್ಷೇಪಣೆಗಳಿಗೆ ರಾಮನು ಯುಕ್ತಿಯುಕ್ತರಾಗಿ ಹೇಳಿದ ಪ್ರತ್ಯುತ್ತರಗಳನ್ನು ಕೇಳಿ,ಮನಸ್ಸಿನ ಶಂಕೆಯನ್ನು ಬಿಟ್ಟು, ಮುಂದೆ ಯಾವುದೊಂದುಮಾತನ್ನೂ ಆಡಲಾರದೆ ಸುಮ್ಮನಾಗಿ ಬಿಟ್ಟನು ಮೊದಲು ಸುಗ್ರೀವನೊಡನೆ ಯುದ್ಧ ಮಾಡುವಾಗಲೇ,ಅವನು ತನ್ನ ಮೇಲೆ ಬೀಸಿದ ಕಲ್ಲುಗಳಿಂದಲೂ, ಮರಗಿಡಗೆ ಳಿಂದಲೂ, ಅವನ ಅಂಗಾಂಗವೆಲ್ಲವೂ ಜರ್ಝರಿತವಾಗಿತ್ತು ಇಷ್ಟರಲ್ಲಿ ಅ ತಿಕರವಾದ ರಾಮನ ಬಾಣವೂ ಮೇಲೆ ಬಿದ್ದುದರಿಂದ, ಅವನಿಗೆ ಮೇಲೆ ಮೇಲೆ ತಾಣವಡಗಿ ಉತ್ನಮಣಕಾಲವೇ ಸಮೀಪಿಸಿದಂತಾಯಿತು ಹಾ ಗೆಯೇ ಮೂರ್ಛಯನ್ನು ಹೊಂದಿಬಿಟ್ಟನು ಅತ್ತಲಾಗಿ ಇವನ ಪತ್ನಿ ಯಾದ ತಾರಯು, ರಾಮಪ್ರಯುಕ್ತವಾದ ಖಾಣದಿಂದ ಪತಿಯು ಹತನಾದನೆಂಬ ಸುದ್ದಿಯನ್ನು ಕೇಳಿದಳು ಈ ಭಯಂಕರವಾರ್ತೆಯನ್ನು ಕೇಳಿದೊಡನೆ ಆ ಕೆಯ ಎದೆಯೊಡೆದು, ಮೈ ನಡುಗಿಹೋಯಿತು ಒಡನೆಯೇ ಪತ್ರನಾದ ಅಂಗದನನ್ನೂ ಸಂಗಡ ಕರೆದುಕೊಂಡು ತನ್ನ ಗುಹೆಯನ್ನು ಬಿಟ್ಟು ಹೊರ ಟುಬಂದಳು ಇಷ್ಟರೊಳಗಾಗಿ ಅಂಗದನಿಗೆ ಪರಿಚರರಾಗಿ ಮಹಾಪರಾಕ್ರ ಮಿಗಳೆನಿಸಿಕೊಂಡ ಕೆಲವು ವಾನರರು, ಮುಂದೆಹೋಗಿ ಧನುರ್ಧಾರಿಯಾಗಿ ನಿಂತಿದ್ಯ ರಾಮನನ್ನು ನೋಡಿ ಭಯಪಟ್ಟು ಹಿಂತಿರುಗಿ ಓಡಿ ಬರುತಿದ್ದರು. ತಮ್ಮ ಗುಂಪನ್ನು ಕಾಯುತಿದ್ದ ಸಲಗವು ಹತವಾದುದನ್ನು ನೋಡಿ,ಭಯದಿಂ ದ ಚದರಿ ದಿಕ್ಕುಗೆಟ್ಟು ಓಡುತ್ತಿರುವ ಮೃಗಗಳಂತೆ, ಭಯದಿಂದ ಓಡಿ ಬರು ತಿರುವ ದುಃಖಿತರಾದ ಆ ವಾನರರನ್ನು ತಾರೆಯು ನಡುದಾರಿಯಲ್ಲಿ ಕಂಡ ಳು ರಾಮಬಾಣದಿಂದ ತೂರಿಸಲ್ಪಟ್ಟವರಂತೆ ಅತಿವೇಗದಿಂದ ಓಡಿಬ ಗುತ್ತಿರುವ ಆವಾನರರನ್ನು ನೋಡಿ ತಾರೆಯು “ಎಲೈ ವಾನರರೆ ! ರಾಜಸಿ ಹ್ಮನಾದ ವಾಲಿಗೆ ನೀವು ಅನುಚರರಾಗಿದ್ದರೂ ಅವನನ್ನು ಬಿಟ್ಟು ಹೀಗೆ ಭಯಪಟ್ಟು ಓಡುವುದೇಕೆ ? ಒಂದುವೇಳೆ ಆ ಕ್ರೂರಸಹೋದರ ನಾದ ಸುಗ್ರೀವನು, ರಾಜ್ಯದಾಸೆಯಿಂದ ತನಗೆ ಒಡಹುಟ್ಟಿದವನಾದ ವಾಲಿಯನ್ನು ರಾಮನ ಕೂರಬಾಣಗಳಿಂದ ಕೊಲ್ಲಿಸಿರಬಹುದು ಆದ.