ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೧೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೧೪೫೩ ಶ್ರೀಮದ್ರಾಮಾಯಣವು [ಸರ್ಗ ೧೯. ಮಾತ್ರಕ್ಕೆ ನೀವು ಭಯಪಡಬೇಕಾದ ಕಾರಣವೇನು? ರಾಜ್ಯಕೋಶಗಳೊಂ ದೂ ಇಲ್ಲದ ನಿಮ್ಮಲ್ಲಿ ಆ ಸುಗ್ರೀವನಿಗೆ ವೈರವೇನು ? ಆದುದರಿಂ ದ ನಿಮಗೆ ಸ್ವಲ್ಪವೂ ಭಯ ಕಾರಣವಿಲ್ಲ?” ಎಂದಳು ಕಾಮರೂಪಿಗಳಾದ ಆವಾನರರು, ತಾರೆಯ ಈ ಮಾತನ್ನು ಕೇಳಿ, ಆಕೆಯನ್ನು ಕುರಿತು ಕಾಲೋ ಚಿತವಾದ ಯುಕ್ತಿವಾಕ್ಯಗಳಿಂದ«ಆಮಾ 'ನಮ್ಮ ಪಾಡು ಹಾಗಿರಲಿ ನೀನೇ ಕೆ ಅಲ್ಲಿಗೆ ಹೋಗುವ? ನಿನ್ನ ಮಗನಾದ ಅಂಗದನನ್ನೂ ಅನ್ಯಾಯವಾಗಿ ಆ ರಾಮನ ಕೈಗೆ ಸಿಕ್ಕಿಸಿಕೊಲ್ಲಿಸಬೇಡ. ಈತನಾದರೂ ಬದುಕಿರಲಿ, ಈತ ನನ್ನು ಕರೆದುಕೊಂಡು ನೀನು ಹಿಂತಿರುಗಿಹೋಗು ಮೃತ್ಯುವೇ ರಾಮ ಪದಿಂದ ಬಂದು ವಾಲಿಯನ್ನು ಕೊಂದು ಪರಲೋಕಕ್ಕೆ ಸಾಗಿಸುತ್ತಿರುವ ನೆಂದು ತಿಳಿ ಸಿನ್ನ ಪತಿಯಾದ ವಾಲಿಯುಯುದ್ಧದಲ್ಲಿ ಸುಗ್ರೀವನಿಂದ ಪ್ರೇರಿ ತಗಳಾದ ಎಷ್ಟೋ ವೃಕ್ಷಗಳನ್ನು ಮುರಿದು ಹಾಕಿದನು ಎಷ್ಟೋ ಕಲ್ಲು ಬಂಡೆಗಳನ್ನು ಪ್ರಡಿಪುಡಿಮಾಡಿದನು ಏನಾದರೇನು? ಕೂನೆನೆ ವಜ್ರಸಮಾನ ಗಳಾದ ರಾಮನ ಬಾಣಗಳಿಂದ ನೆಲಕ್ಕುರಿಳಿಸಲ್ಪಟ್ಟನು ಇಂದ್ರನಿಗೆಣೆ ಯಾದ ತೇಜಸ್ಸುಳ್ಳ ವಾಲಿಯು ಆಗಲೇ ಸತ್ತುಬಿದ್ದನು ಮೊದಲು ಕಿಷಿಂಥೆಯಿಂದ ವಾಲಿಯನ್ನು ಹಿಂಬಾಲಿಸಿಬಂದ ವಾನರಸೈನ್ಯವೆಲ್ಲವೂ ಜಲ್ಲಾ ಚದರಾಗಿ ಹಿಂತಿರುಗಿ ಓಡಿಬರುತ್ತಿರುವುದನ್ನು ನೋಡು' ನೀನು ಈಗ ಲೇ ಹಿಂತಿರುಗಿ ಪರದಬಾಗಿಲನ್ನು ಮುಚ್ಚಿ ನಮ್ಮನ್ನು ರಕ್ಷಿಸು' !ಂಗದಸಿಗೂ ಈಗಲೇ ಪಟ್ಟಾಭಿಷೇಕವನ್ನು ಮಾಡಿಬಿಡು' ಅವನಿಗೆ ಈಗಲೇ ರಾಜ್ಯವನ್ನು ವಹಿಸಿಬಿಟ್ಟರೆ, ಇಲ್ಲಿನ ವಾನರರೆಲ್ಲರೂ ಅವನ ವಶರಾಗಿಬಿಡುವರು” ಈಗ ಸಾವಕಾಶಕ್ಕೆ ಕಾಲವಲ್ಲ ಅಥವಾ ವಾನರರಿಗೆ ನೀನಿರುವ ಈ ಕಿಷಿಂ ಥೆಯೇ ಇನ್ನು ಮೇಲೆ ವಾಸಕ್ಕೆ ರುಚಿಸಲಾರದು ಶತ್ರುಗಳು ಬಂದು ಈ ಸೃ ಇವನ್ನಾಕ್ರಮಿಸುವರೆಂಬ ಭಯದಿಂದ ಇಲ್ಲಿನ ವಾನರರಲ್ಲರೂ ಬೇರೆ ದುರ್ಗ ಗಳಿಗೆ ಹೋಗಿಸೇರಿಬಿಡುವರು ಆ ಶತ್ರುಗಳೂ ಈಗಲೇ ಬಂದು ನಮ್ಮ ನಾ ಸಸ್ಯಾನಗಳನ್ನೂ , ಇತರದುರ್ಗಗಳನ್ನೂ ಆಕ್ರಮಿಸಿಬಿಡುವರು ಆಕ್ರಮಿ ಸಿದರೇನು?”ಎಂದುಕೇಳುವೆಯಾಗಿ ವಾಲಿಯು ಇಲ್ಲಿಂದ ಎಷ್ಟೋ ಮಂದಿ ಕ ಪಿಗಳನ್ನು ಹೊರಡಿಸಿಬಿಟ್ಟಿರುವನು “ಅವರಲ್ಲಿ ಪತ್ನಿ ಯನ್ನಗಲಿರುವವರು ಕೆ ಲವರು! ಒಬ್ಬಳನ್ನೇ ತಮ್ಮಲ್ಲಿ ಅನೇಕರಿಗೆ ಪತ್ನಿಯನ್ನಾಗಿ ಮಾಡಿಕೊಂಡಿ