ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೧೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪೫೭ ಸರ್ಗ, ೧೯.] ಕಿಂಧಾಕಾಂಡವು ರವವರು ಕೆಲವರು ಇವರೆಲ್ಲರೂ ಮೊದಲು ಇಲ್ಲಿಯೇ ಇದ್ದು ಹೋ ದವರು ಹೀಗೆ ಪತ್ನಿ ಯನ್ನಗಲಿದವರೂ, ಸಮಾನಭಾರೈಯುಳ್ಳವರೂ ಆತುರದಿಂದ ಕಾದಿರುವರು ಅವರೂ ನಮ್ಮ ಜ್ಞಾತಿಗಳಾದ ಸುಗ್ರೀವಾದಿಗ ಳೂ ಇಲ್ಲಿಗೆ ಬಂದಮೇಲೆ ನಮ್ಮ ಗತಿಯೇನು?” ಎಂದರು ಹೀಗೆ ಭೀರು ಗಳಾದ ವಾನರರು, ಮುಂದೆ ಬಂದು ಈ ಮಾತುಗಳನ್ನಾಡಲು ತಾರೆ ಯು ಅದನ್ನು ಕೇಳಿ ತನ್ನ ಧೈರಕ್ಕೆ ತಕ್ಕಂತೆ ಅವರನ್ನು ಕುರಿತು “ ಎಲೆ ವಾನರರೆ' ವಾನರಸಿಹ್ಮನಂತಿದ್ದ ಮಹಾತ್ಮನಾದ ಆ ನನ್ನ ಪತಿಯ ಹೋ ದಮೇಲೆ ನನಗೆ ಈ ಪುತ್ರನಿಂದಾಗಲಿ, ಈ ರಾಜ್ಯದಿಂದಾಗಲಿ, ಕೊನೆಗೆ ಈ ನನ್ನ ದೇಹದಿಂದಲೇ ಆಗಲಿ ಮಾಡಬೇಕಾದ ಕಾರವೇನು? ಈಗ ನಾನೂ ಹೋಗಿ ಮಹಾತ್ಮನಾದ ಆ ವಾಲಿಯ ಕಾಲಿನ ತಳದಲ್ಲಿಯ ಬಿಳುವೆನು ರಾಮಪ್ರಯುಕ್ತವಾದ ಬಾಣದಿಂದ ಕೆಡಹಲ್ಪಟ್ಟ ಆತನ ಪಾದಮೂಲ ವನ್ನೇ ಸೇರುವೆನು” ಎಂದು ಹೇಳಿ ದುಃಖದಿಂದ ಕುಂದಿ ರೋದಿಸುತ್ತ, ಮ ನಸ್ಸಂಕಟವನ್ನು ತಡೆಯಲಾರದೆ, ಎರಡು ಕೈಯಿಂದಲೂ ತನ್ನ ಹೊಟ್ಟೆ ಯನ್ನೂ , ತಲೆಯನ್ನೂ ಚಚ್ಚಿಕೊಳ್ಳುತ್ತಾ ಬಂದಳು ಹೀಗೆ ತಾರೆಯು ಹಿಂದುಮುಂದುತೋರದೆ ಓಡಿಬಂದು, ಅಲ್ಲಿ ನೆಲದಮೇಲೆ ಬಿದ್ದಿದ್ದ ತನ್ನ ಪ ತಿಯನ್ನು ನೋಡಿದಳು ಆತನಾದರೂ ಇದುವರೆಗೆ ಎಷ್ಟೋಯುದ್ಧಗಳ ಕ್ಲಿ ಪರಾಜಿತರಾಗದೆ ಜಯಿಸಿಬಂದ ಮಾಯಾವಿ ಮೊದಲಾದ ಅನೇಕರಾಕ್ಷ ಸರನ್ನು ಕೊಂದು ಕೆಡಹಿದವನು ಇಂದ್ರನು ವಜಾಯುಧಗಳನ್ನು ಬೀ ಸುವಂತೆ ಎಷ್ಟೋ ಪ್ರತಗಳನ್ನೆತ್ತಿ ಶತ್ರುಗಳಮೇಲೆ ಬೀಸಿದವನು ಮಹಾ ವಾತಗಳೆಲ್ಲವೂ ಒಂದಾಗಿ ಸೇರಿದಷ್ಟು ಬಲಾಢನು ಮಹಾಮೇಫುಗಳ ಮೊ ಳಗಿನಂತೆ ಥೀರಧ್ವನಿಯುಳ್ಳವನು ಇಂದ್ರನಿಗೆಣೆಯಾದ ಪರಾಕ್ರಮವುಳ್ಳವ ನು ಅಂತವನು ಈಗ,ಬಹುಕಾಲದವರೆಗೆ ಎಡೆಬಿಡದೆ ದೊಡ್ಡ ಮಳೆಯನ್ನು ಸು ರಿಸಿ ಶಾಂತವಾದ ಮಹಾಮೇಫುದಂತೆ ಮಲಗಿದ್ದನು ಮತ್ತು ಆತನು ಇದಿ ರಾಗಿ ನಿಂತು ಗರ್ಜನಧ್ವನಿಗಳಿಂದ ಹೆದರಿಸುವವರನ್ನೆಲ್ಲಾ ಅದಕ್ಕಿಂತಲೂ ಮೇಲೆ ಗರ್ಜಿಸಿ 'ನಡುಗಿಸತಕ್ಕ ಮಹಾವೀರನು. ಇಷ್ಟುಶೂರನಾದ ವಾ ಲಿಯು, ಮಹಾಪರಾಕ್ರಮವುಳ್ಳ ಸಿಹ್ನದಿಂದ ಮಾಂಸಾರ್ಥವಾಗಿ ಕೊಲ್ಲ 92