ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೧೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ, ೨೧ | ಕಿಷಿಂಧಾಕಾಂಡವು. ೧೪೬ ತಿಗಾಗಿ ಮಾಡತಕ್ಕೆ ಈ ಪ್ರಲಾಪಗಳಿಂದೇನು? ನಿನ್ನ ಪತಿಗೆ * ಪಾರಲೌಕವಾ ಶ್ರೇಯಸ್ಸನ್ನುಂಟುಮಾಡುವ ದಾರಿಯಾವುದೋ ಅದನ್ನು ನೋಡು' ಆಂಗ ದನಿಂದ ಅವನಿಗೆ ಅಪರಕ್ರಿಯೆಗಳನ್ನು ಮಾಡಿಸಿ, ಆ ನಿನ್ನ ಪತಿಯ ಆತ್ಮನಿಗೆ ಸದ್ದತಿಯನ್ನು ಹೊಂದಿಸು' ಇವನಲ್ಲಿ ಲಕ್ಷಾಧಿಕಸಂಖ್ಯೆಯುಳ್ಳ ಕಪಿಗಳು ಆ ಶ್ರಿತರಾಗಿ ಬೇರೆಬೇರೆ ವಿಧದಿಂದ ಉಪಜೀವಿಸುತಿದ್ದರು ಅಂತಹ ಮಹಾವೀ ರನಾದ ವಾಲಿಯು ಈಗ ಕಾಲವಶನಾಗಿದ್ದರೂ, ತನ್ನ ಪುಣ್ಯಗಳಿಗೆ ತಕ್ಕ ಪು ಣ್ಯಲೋಕವನ್ನೇ ಹೊಂದಿರುವನು ಈ ನಿನ್ನ ಪತಿಯಾದ ವಾಲಿಯು ಶಾಸ್ತ್ರ ಗಳನ್ನೋದಿ ಅನೇಕ ವಿಷಯಗಳನ್ನು ತಿಳಿದವನು ಸ್ವಜನರಲ್ಲಿ ಪ್ರೀತಿ, ಯುಕ್ತ ವಾದ ಮಾತು, ಯಾಚಕರಲ್ಲಿ ಔದಾಗ್ಯ, ಅಪರಾಧಿಗಳಲ್ಲಿ ತಾಳ್ಮೆ, ಮುಂತಾ ದ ಅದ್ಭುತಗುಣಗಳೆಲ್ಲವೂ ಈತನಲ್ಲಿ ತುಂಬಿದ್ದುವು ಆದುದರಿಂದ ಇವನು ಈಗ ಧರಜಿತ್ತುಗಳ ಲೋಕವನ್ನೇ ಹೊಂದಿ ಸುಖಿಸುತ್ತಿರುವನು ಇವನಿ ಗಾಗಿ ನೀನು ಶೋಕಿಸಬೇಕಾದುದಿಲ್ಲ ಎಲೈ ಗುಣಾಢಳೆ' ಇಲ್ಲಿನ ಸಮಸ್ತ ವಾನರಶ್ರೇಷ್ಠರೂ, ನಿನ್ನ ಪುತ್ರನಾದ ಈ ಅಂಗದನೂ, ಈ ಸಮಸ್ತಕಪಿಭ ಭೂಕರಾಜ್ಯವೂ ಈಗ ನಿನ್ನ ಧೀನವಾಗಿ ನಿನ್ನಿಂದಲೇ ಪೋಷಿಸಲ್ಪಡಬೇಕಾಗಿ ರುವುದು ಆದುದರಿಂದ ಈಗ ನೀನು ನಿನ್ನ ದುಃಖವನ್ನೂ, ನಿನ್ನ ಸಂ ಕಟವನ್ನೂ ಮೆಲ್ಲಗೆ ತಗ್ಗಿಸಿಕೊಂಡು, ಈ ಸಮಸ್ತರಾಜ್ಯವನ್ನೂ ನಿನ್ನ ಪು ತ್ರನಾದ ಅಂಗದನ ವಶವಲ್ಲಿರಿಸು' ಅವನು ನಿನ್ನ ಥೀನನಾಗಿಯೇ ರಾಜ್ಯವನ್ನು ಪಾಲಿಸಲಿ' ವಾಲಿಗೆ ಈ ಪತ್ರಸಂತಾನವುಂಟಾದುದಕ್ಕೆ ಮುಖ್ಯಫಲವೇ ನೆಂಬುದನ್ನೂ, ಈಗ ಮೊದಲು ನಡೆಸಬೇಕಾದ ಕಾವ್ಯವೇನೆಂಬುದನ್ನೂ ಚೆನ್ನಾಗಿ ಪಾಲೋಚಿಸಿ, ವಾಲಿಗೆ ಸದ್ದತಿಯನ್ನು ೦ಟುಮಾಡುವ ಪ್ರಯ ತ್ರವನ್ನು ಮಾಡು' ಈ ಕಾಲಕ್ಕೆ ನೀನು ಮೊದಲು ನಿಶ್ಚಯಿಸಬೇಕಾದ ಕಾರ್

  • (ಇಲ್ಲಿ ವಾಲಿಯು ಇನ್ನೂ ಪ್ರಾಣಸಹಿತನಾಗಿರುವುದನ್ನು ತಿಳಿದೂ, ಹನು ಮಂತನು ಅವನಿಗೆ ಅಪರಸಂಸ್ಕಾರಗಳನ್ನು ನಡೆಸುವಂತೆ ನಿಯಮಿಸಿದುದುಯುಕ್ತವೆ? ಎಂದರೆ, ಅಮೋಘಬಾದ ರಾಮಬಾಣದಿಂದ ಆಗ ವಾಲಿಗುಂಟಾದ ಗಾಢಮೂರ್ಛಿ ಯನ್ನು ಮರಣವೆಂದೇ ನಿಶ್ಚಯಿಸಿಕೊಂಡು, ಆಂಜನೇಯನು ಹೀಗೆ ಹೇಳಿರುವುದರಿಂದ ದೋಷಾಸ್ಪದವಲ್ಲವೆಂದು ಗ್ರಾಹ್ಯವು,