ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೧೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪೩೭ ಸರ್ಗ ೨೨ ] ಕಿಷಿಂಧಾಕಾಂಡವು ಅವನ ಕೋಪಕ್ಕೆ ಮಾತ್ರ ನೀನು ಪಾತ್ರನಾಗಬೇಡ ಎಲೆ ವತ್ಪನೆ' ಇದೆ! ನನಗೆ ದೇವೇಂದ್ರನು ಅನುಗ್ರಹಿಸಿಕೊಟ್ಟ ಈ ಕಾಂಚನಮಾಲಿಕೆಯನ್ನು ಕೊಡುವೆನು ಈಗಲೇ ಇದನ್ನು ನೀನು ಸ್ವೀಕರಿಸು ಇದರೊಡನೆಯೇ ನಾ ನು ಸತ್ತರೆ ಇದರಲ್ಲಿರುವ ದಿವ್ಯತೇಜಸ್ಸು ನನ್ನ ಪ್ರಾಣಗಳೊಡನೆಯೇ ಹಾರಿ ಹೋಗುವುದು ಆದುದರಿಂದ ನನ್ನ ಪ್ರಾಣಗಳು ಹೋಗುವುದಕ್ಕೆ ಮೊದಲೇ ಇದನ್ನು ನೀನು ಧರಿಸು”ಎಂದನು ಹೀಗೆ ವಾಲಿಯು ಒಡಹುಟ್ಟಿದ ಪ್ರೇಮ ದಿಂದ ಹೇಳಿದ ಮಾತನ್ನು ಕೇಳಿ, ಸುಗ್ರೀವನ ಕಣ್ಣುಗಳಿಂದ ಪಳಪಳನೆ ನೀರು ಸುರಿಯಿತು ಆತನ ಉತ್ಸಾಹವೆಲ್ಲವೂ ಅಡಗಿತು ಸಹಿಸಲಾರದ ಸಂ ಕಟವುಂಟಾಯಿತು ರಾಹುಗ್ರಸ್ತನಾದ ಚಂದ್ರನಂತೆ ಕಳೆಗುಂದಿದ್ದನು ಹೀಗೆ ಸುಗ್ರೀವನು ದುಃಖದಿಂದ ಹಿಂದುಮುಂದುತೋರದೆ ಸ್ತಬ್ಬನಾಗಿ ನಿಂತಿರಲು, ಅಂಗದನು ಕಾಲಜ್ಞನಾದುದರಿಂದ, ವಾಲಿಯ ಮಾತನ್ನು ಯುಕ್ತವೆಂದು ಗ್ರಹಿಸಿ,ಮನಸ್ಸಿನಲ್ಲಿ ಶಾಂತಿಯನ್ನು ಹೊಂದಿ, ತಂದೆಯ ಅನು ಮತಿಯನ್ನು ಪಡೆದು, ಅವನ ಕೊರಳಿನಿಂದ ಆ ಕಾಂಚನಮಾಲಿಕಯನ್ನು ತೆಗೆ ದುಬಿಟ್ಟನು ಆಗ ವಾಲಿಯು ಆ ಮಾಲಿಕೆಯನ್ನು ಸುಗ್ರೀವನ ಕೈಗೆ ಕೊಡಿಸಿ, ತಾನು ಪರಲೋಕಪ್ರಯಾಣಕ್ಕೆ ಸಿದ್ಧನಾಗಿ, ಇದಿರಿಗೆ ನಿಂತಿದ್ದ ತನ್ನ ಕು ಮಾರನಾದ ಅಂಗದನನ್ನು ನೋಡಿ ಸ್ನೇಹಪೂರಕವಾಗಿ, ( ಎಲೆ ವತ್ರನೆ | ಇನ್ನು ನಾನು ಹೋಗುವೆನು ಇನ್ನು ಮೇಲೆ ನೀನು ಕಾಲದೇಶಗಳನ್ನರಿತು ನಡೆಯಬೆಕು ಪ್ರಿಯವಾಗಲಿ ಅಪ್ರಿಯವಾಗಲಿ, ಪ್ರಭುವಾದ ಸುಗ್ರೀವ ನು ಹೇಳಿದಮಾತನ್ನು ಸ್ವಲ್ಪವೂ ಮೀರದೆ ನಡೆಸುತ್ತಿರು ಒಂದುವೇಳೆ ಅವ ನಮಾತು ನಿನಗೆ ಅಪ್ರಿಯವಾಗಿ ತೋರಿದರೂ ಅದನ್ನು ಪ್ರಿಯವಾದಂತೆಯ ಆದರಿಸಬೇಕು ದುಃಖಕಾಲದಲ್ಲಿ ಬರತಕ್ಕ ಸುಖವನ್ನೂ, ಸುಖಕಾಲಗಳಲ್ಲಿ ಬಂದೊದಗುವ ದುಃಖವನ್ನೂ, ಸಹಿಸಿಕೊಂಡು ಸಮಸ್ತ ವಿಧದಲ್ಲಿಯೂ ಸುಗ್ರೀವನಿಗೆ ಪರತಂತ್ರನಾಗಿ ನಡೆದುಕೊಳ್ಳಬೇಕು ಎಲೈ ಮಹಾಬಾಹು ವೆ' ಇದುವರೆಗೆ ಯಾವಾಗಲೂ ನೀನು ನನ್ನಿಂದ ಲಾಲಿಸಲ್ಪಡುತ್ತಿದ್ದಂತೆ ಯೇ, ಮುಂದೆಯೂ ನಡೆಯುವುದೆಂಬ ನಿರೀಕ್ಷಣೆಯನ್ನು ಬಿಟ್ಟುಬಿಡು ಆ ಮುದ್ದಾಟಗಳೆಲ್ಲವೂ ಇನ್ನು ಮೇಲೆ ಸುಗ್ರೀವನ ಮನಸ್ಸಿಗೆ ಸರಿಬೀಳದಿರಬ