ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೧೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ ೨೩ ] | ಕಿಷಿಂಧಾಕಾಂಡವು ಇ೪೬೯ ವರುಷದಲ್ಲಿ ಆ ಗಂಧತ್ವವನ್ನು ಕೊಂದು ಕೆಡಹಿದನು ಹೀಗೆ ಮಹಾವೀರನಾ ದ ಆಗೋಲಭನನ್ನೂ ಕೊಂದು, ಕೂರದಂಷ್ಯಗಳುಳ್ಳವನೆಂದು ಪ್ರಸಿದ್ದಿ ಹೊಂದಿದ ಈ ವಾಲಿಯೇ ಹತನಾಗಿ ಬಿದ್ದನಲ್ಲಾ' ಸಮಸ್ತಲೋಕಕ್ಕೂ ಆ ಭಯವನ್ನು ಕೊಡಬಲ್ಲ ಈತನಿಗೂ,ಹೇಗೆ ಈ ಸ್ಥಿತಿಯುಂಟಾಯಿತೋ ಕಾಣೆ ವು” ಎಂದು ದುಃಖದಿಂದಲೂ, ಆಶ್ಚರದಿಂದಲೂ ಗೋಳಿಡುತಿದ್ದರು ಮ ಹಾರಣ್ಯದಲ್ಲಿ ಸಿಕ್ಕದಿಂದ ಹತವಾದ ಗೂಳಿಯನ್ನು ನೋಡಿ, ಗೋವುಗಳೆಲ್ಲ ವೂ ಕೂಗಿಕೊಳ್ಳುವಂತೆ, ಅಲ್ಲಿದ್ದ ಕಪಿಗಳೆಲ್ಲರೂ ಸತ್ತುಬಿದ್ದ ವಾಲಿಯಸುತ್ತ ಲೂ ನಿಂತು ಅಳುತಿದ್ದರು ಯಾರಮನಸ್ಸಿಗೂ ಸ್ವಲ್ಪವಾದರೂ ನೆಮ್ಮದಿ ಯಿರಲಿಲ್ಲ ಹಾಗೆಯೆ ತಾರೆಯೂ ತನ್ನ ಪತಿಯ ಮುಖವನ್ನು ನೋಡಿ ನೋ ಡಿ ದುಃಖಸಮುದ್ರದಲ್ಲಿ ಮುಳುಗಿದವಳಂತೆ ಸಂಕಟಪಡುತಿದ್ದಳು ದೊಡ್ಡ ಮರವನ್ನು ಸುತ್ತಿ ಬೆಳದ ಒಳ್ಳಿಯು, ಆ ಮರವು ಬೀಳುವಾಗ ತಾನೂ ಬೀಳು ವಂತೆ, ಆಗಾಗ ಆ ವಾಲಿಯ ದೇಹವನ್ನ ಪ್ಪಿಕೊಂಡು ನೆಲದಲ್ಲಿ ಹೊರಳುತಿ ದಳು ಇಲ್ಲಿಗೆ ಇಪ್ಪತ್ತೆರಡನೆಯಸರ್ಗವು | w+ವಾಲಿಯು ಮೃತನಾದುದನ್ನು ಕಂಡು ತಾರೆಯು ವಿಲಾಪವು +w ಹೀಗೆ ತಾರಯು ವಾನರರಾಜನಾದ ವಾಲಿಯ ಮುಖವನ್ನಾ ಫಾ ಣಿಸುತ್ತ, ಪರಲೋಕಗತನಾದ ಆ ಪತಿಯನ್ನು ನೋಡಿಎಲೈ ವೀರಾಗ್ರಣಿ ನೀನು ಮೊದಲೇ ನನ್ನ ಮಾತನ್ನು ಲಾಲಿಸದೆ ಹೋದೆಯಲ್ಲಾ ! ಅದ ರಿಂದಲೇ ಹೀಗೆ ಸುಕುಮಾರವಾದ ಈ ನಿನ್ನ ದೇಹವನ್ನು , ಹಿತಕರವಲ್ಲದ ಈ ಕಲ್ಲುಭೂಮಿಯಲ್ಲಿ,ಹಳ್ಳತಿಟ್ಟಾದ ಪ್ರದೇಶದಲ್ಲಿ ಕಷ್ಟದಿಂದ ಮಲಗಿಸಬೇಕಾ ಯಿತು ಹಾ ! ಕಪಿರಾಜನ 1 ನೀನು ಈ ಭೂದೇವಿಯನ್ನ ಪ್ಪಿ ಮಲಗಿ. ನನಗೆ ಪ್ರತ್ಯುತ್ತರವನ್ನೂ ಕೊಡದಿರುವೆಯಾ'ನನಗಿಂತಲೂ, ಈ ಭೂಮಿಯೇ ಪ್ರಿಯಳಾದಳೆ?ಎಲೆ ಸಾಹಸಿಯೇ'ಇದುವರೆಗೆ ಅನೇಕಾವರ್ತಿ ನಿನ್ನ ೩ ದಿರಿಸಿ ಪ ಲಾಯಿತನಾದ ಸುಗ್ರೀವನಿಗೂ, ಈಗ ನೀನು ಈಡಾಗಿಬಿಟ್ಟೆಯಾ?ಮೊದಲು ಭಯಪಟ್ಟು ಪಲಾಯಿತನಾದ ಆಸುಗ್ರೀವನೇ ಈಗನಿನಗಿಂತಲೂಪರಾಕ್ರಮಿ ಯಾದನೆ?ಆಹಾ!ದೈವಗತಿಯ ವೈಚಿತ್ರ್ಯವನ್ನು ನಾನೇನು ಹೇಳಲಿ!ಹಾ!ನಾ