ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೧೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ, ೨೪.] ಕಿಂಧಾಕಾಂಡವು ೧೪೭೯ ರಿಗೂ ನೀನು ಈಡಾಗುವವನಲ್ಲ ಜಿತೇಂದ್ರಿಯನು, ಧಾರ್ಮಿಕರಲ್ಲಿ ನೀನೇ ಮೇಲೆನಿಸಿಕೊಂಡಿರುವವನು ಕಂದುಕುಂದಿಲ್ಲದ ಆಪಾರಕೀರ್ತಿ ಯುಳ್ಳವನು ಅಪಾರಬುದ್ಧಿಯುಳ್ಳವನು ಭೂಮಿಯಂತೆ ತಾಳ್ಮೆಯುಳ್ಳ ವನು ರಕ್ಷದಂತೆ ಕೆಂಪಾಗಿ, ರಾಜಲಕ್ಷಣಗಳಿಂದಕೂಡಿದ ಕಣ್ಣುಳ್ಳವನು ಮಹಾಬಲಾಡ್ಯನು ಆ ಮಹಾಬಲಕ್ಕೆ ತಕ್ಕ ಮೈಕಟ್ಟುಳ್ಳವನು ಈ ವಿಧಗಳಾದ ಅವಯವಸಂಸ್ಥಾನಗಳು ಸಾಮಾನ್ಯ ದೇಹಕ್ಕೆ ಲಭಿಸವು ನೀನು ಮನುಷ್ಯರೂಪದಿಂದಿದ್ದರೂ, ನಿನ್ನ ದೇಹವು ಮನುಷ್ಯಲಕ್ಷಣ ಗಳನ್ನು ಬಿಟ್ಟು ದಿವ್ಯಸೌಭಾಗ್ಯದಿಂದ ಕೂಡಿರುವುದು ಎಲೆ ವೀರ ನೆ' ನನ್ನ ಪತಿಯನ್ನು ಕೊಂದ ಧನುರ್ಬಾಣಗಳೆರಡೂ, ಈಗಲೂ ನಿನ್ನ ಕೈಯಲ್ಲಿ ಸಿದ್ಧವಾಗಿಯೇ ಇರುವುವಲ್ಲವೆ? ಯಾವ ಒಂದೇ ಬಾಣದಿಂದ ನೀನು ನನ್ನ ಪ್ರಿಯನನ್ನು ಕೊಂದೆಯೋ, ಅದೇಬಾಣದಿಂದ ನನ್ನನ್ನೂ ಕೊಂ ದುಬಿಡು' ನಿನ್ನಿಂದ ಹತಳಾಗಿ ನಾನೂ ನನ್ನ ಪತಿಯೊಡನೆ ಸೇರುವೆನು ನೀನು ಸಮಸ್ತ ಜಗತ್ತನ್ನೂ ರಂಜಿಸತಕ್ಕವನಾದುದರಿಂದಲೇ, ನಿನ್ನನ್ನು ಎ ಲ್ಲರೂ ರಾಮನೆಂದು ಕರೆಯುವರು ಈಗ ನೀನು ನಮ್ಮಿಬ್ಬರನ್ನು ಮಾತ್ರ ಅಗಲಿಸಿ ಸಂಕಟಪಡಿಸುವುದೇಕೆ? ನನ್ನ ನ್ಯೂ ಕೊಂದು ವಾಲಿಯ ಬಳಿಗೆ ಸೇ ರಿಸಿ, ಅವನಿಗೆ ನನ್ನ ವಿಯೋಗವನ್ನು ತಪ್ಪಿಸಿ ಸಂತೋಷಪಡಿಸು' ನನ್ನನ್ನಗಲಿ ವಾಲಿಯು ಎಷ್ಟು ಮಾತ್ರವೂ ನೆಮ್ಮದಿಯಿಂದಿರುವವನಲ್ಲ ವೀರಸ್ವರ್ಗದಲ್ಲಿ ಕಮಲನೇತ್ರೆಯರಾದ ಅಪ್ಪರಸ್ಸುಗಳು ತನ್ನ ಸುತ್ತಲೂ ಬಂದು ನೆರೆದಿದ್ದ ರೂ, ಆವಾಲಿಯು ನನ್ನನ್ನು ಕಾಣದಿದ್ದರೆ ತಪಿಸುವನು ನಾನಿಲ್ಲದಿದ್ದರೆ ವಿಚಿತ್ರಪುಷ್ಪಾಭರಣಗಳಿಂದಲಂಕೃತರಾದ ಆ ಅಪ್ಪರಸ್ತ್ರೀಯರನ್ನೂ ಆ ನಾದರಿಸಿಬಿಡುವನು ರಾಮಾ ! ನಿನಗೆ ಬಹುದಿನಗಳ, ಅನುಭವದಿಂದಲೇ ತಿ ಳಿದಿರುವ ಈ ವಿಷಯವನ್ನು ನಾನು ಹೇಳಿ ತಿಳಿಸಬೇಕೆ ? ಇಷ್ಟು ರಮಣೀಯ ಇರುವುದರಿಂದ, ನೀನೊಬ್ಬನೇ ಉತ್ತಮಧಾತ್ಮಿಕನೆಂದು ಭಾವವು (ಅಕ್ಷಯ್ಯ ಕೀರ್ತಿಶ್) 'ತಸ್ಯನಾಮಮಹದ್ಯರ ಎಂಬಂತೆ ಪರತೃಪಯುಕ್ತವಾದ ಕೀರ್ತಿಯುಳ್ಳವನು (ವಿಜ ಕ್ಷಣಶ್ಯ ದೂರದೃಷ್ಟಿಯುಳ್ಳವನು ಎಂದರೆ ಪರೋಕ್ಷ ಜ್ಞಾನವುಳ್ಳವನು (ಹಿತಿಕ್ಷಮಾ ರ್ವಾ) ಭೂಮಿಯಂತೆ ತಾಳ್ಮೆಯುಳ್ಳವನು "ಇತ್ಯಾದಿರೀತಿಯಲ್ಲಿ ತಾರೆಯು ಈ ಶ್ಲೋ ಕದಿಂದ ರಾಮನ ಭರತ್ವವನ್ನು ಹೇಳಿದುದಾಗಿ ಅಂತರಾಶಯವು.