ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೨ ಅವತಾರಿಕೆ.] ಕಿಷಿಂಧಾಕಾಂಡವು. ವಾಗಿ, ಭಗವಂತನು ಏಕಾಕಿಯಾಗಿ ಸಂತೋಷಿಸುವವನಲ್ಲ ವೆಂದೂ, ಆತನು ನಿತ್ಯಸೂರಿಗಳನ್ನು ನೋಡಿ, ಇವರಂತೆ ಜೀವವರ್ಗಗಳೆಲ್ಲವೂ ಭೋ ಗಾನುಭವಕ್ಕೆ ಅರ್ಹಗಳಾಗಿದ್ದರೂ, ಅವರೇಕೆ ನನ್ನನ್ನು ಹೊಂದದಿರು ವ” ರೆಂದು ದುಃಖಿಸುವುದಾಗಿಯೂ ಧ್ವನಿತವಾಗುವುದು ಇದರಲ್ಲಿ ಸಂಪಾ ತೀರಪ್ರದೇಶವನ್ನು ಪರಮಪದವಾಗಿಯೂ, ಅಲ್ಲಿನ ಪಕ್ಷವೃಕ್ಷಾದಿಗಳನ್ನು ನಿತ್ಯಸೂರಿಗಳನ್ನಾಗಿಯೂ, ಅಲ್ಲಿನ ಮಂದಮಾರುತವನ್ನು ಭಗವತ್ಕೃಪೆಯ ಸ್ನಾಗಿಯೂ, ಪಷ್ಟಗಳನ್ನು ಜ್ಞಾನಾದಿಗಳನ್ನಾಗಿಯೂ, ನಿರ್ಮಲವಾದ ನೀರನ್ನು ಅವರ ಪ್ರಸನ್ನ ಹೃದಯವನನ್ನಾಗಿಯೂ ಹೇಳಿದಂತೆ ಆಯಾಸಂಕೇ ತಗಳನ್ನು ಊಹಿಸಬೇಕು - ಇದಲ್ಲದೆ ಇಲ್ಲಿ ಗ್ರಹಿಸಬೇಕಾದ ಮತ್ತೊಂದು ವಿಶೇಷಾಂಶವೇನೆಂ ದರೆ:-ಪೂರ್ವಕಾಂಡದಲ್ಲಿ ಜಟಾಯುವು, ರಾವಣನು ಸೀತೆಯನ್ನ ಪಹರಿಸಿ ಕೊಂಡು ಹೋದು”ದಾಗಿ ಹೇಳಿದ ಸಂದರ್ಭದಲ್ಲಿಯೇ, ಆತನ ಸ್ಥಲಬಲಾದಿಗ ಬೆಲ್ಲವನ್ನೂ ವಿವರವಾಗಿ ತಿಳಿಸಿಬಿಟ್ಟಿದ್ದ ಪಕ್ಷದಲ್ಲಿ, ರಾಮನು ತಾನಾಗಿಯೇ ಸತ್ವ ಕಾಕ್ಯಗಳನ್ನೂ ನಿವ್ವಹಿಸಿಬಿಡುತಿದ್ದನಾದುದರಿಂದ, ಸುಗ್ರೀವಸಖ್ಯವೇ ಮೊದಲಾದುವುಗಳ ಪ್ರಸಕ್ತಿಗೆ ಸಂದರ್ಭವೇ ಇಲ್ಲದೆ, ರಾಮಾಯಣದಲ್ಲಿ ಈ ಕಿಷಿಂಧಾಕಾಂಡದ ಕಥಾವತರಣಕ್ಕೂ ಅವಕಾಶವೇ ಇಲ್ಲದೆ ಹೋಗು ತಿತ್ತು ಆದುದರಿಂದ ಜಟಾಯುವು ತನಗೆ ತಿಳಿದ ವಿಷಯವನ್ನು ರಾಮನಿಗೆ ಸೂಚಿಸುವುದಕ್ಕೆ ಮೊದಲೇ ಪ್ರಾಣವನ್ನು ಬಿಟ್ಟುದು ಈ ಕಥಾವಿಸ್ತರಕ್ಕೆ ಮುಖ್ಯಬೀಜವಾಯಿತು ರಾಮನಿಗೆ ಜಟಾಯುವಿನ ಮೂಲಕವಾಗಿ ನಿಜಾಂ ಶವೊಂದೂ ಸ್ಪಷ್ಟವಾಗಿ ತಿಳಿಯದುದರಿಂದಲೇ, ಅವನು ಸೀತಾನ್ವೇಷಣ ವ್ಯಾಜ್ಯದಿಂದ ಹೊರಟು ಕಬಂಧನನ್ನು ನೋಡುವಂತಾಯಿತು ಕಬಂಧ ದರ್ಶನವು ಸುಗ್ರೀವಸತ್ಯಕ್ಕೆ ಕಾರಣವಾಯಿತು ಸುಗ್ರೀವಸಖ್ಯವು ವಾಲಿ ವಧಕ್ಕೆ ಮೂಲವಾಯಿತುಹೀಗಿಲ್ಲದೆ ವಾಲಿಸುಗ್ರೀವರಿಗೆ ಪರಸ್ಪರವೈರ ವಿಲ್ಲದಂತೆಯೇ ರಾಮನಿಗೆ ವಾನರಸಖ್ಯವುಂಟಾಗಿದ್ದ ಪಕ್ಷದಲ್ಲಿಯೂ,ವಾಲಿಯ ಪ್ರೇರಣೆಯಿಂದ ಆತನ ಭಯಕ್ಕಾಗಿ ರಾವಣನು ತಾನಾಗಿಯೇ ಸೀತೆಯನ್ನು