ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೧೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ, ೨೬ ] ಕಿಷಿಂಧಾಕಾಂಡವು ೧೪೮೬ ಕ್ಯಾಗಿ ಅಂಗದನನ್ನು ನದಿಯಬಳಿಗೆ ಕರೆತಂದರು ಅಲ್ಲಿ ಸಮಸ್ತ ವಾನರರೂ ಸುಗ್ರೀವನನ್ನ, ತಾರೆಯನ್ನೂ, ಅಂಗದನನ್ನೂ ಮುಂದಿಟ್ಟುಕೊಂಡು | ವಾಲಿಗೆ ಜಲತ್ತುಣಗಳನ್ನು ನಡೆಸಿದರು ಮಹಾಬಲಾಡ್ಯನಾದ ರಾಮನೂ ಕೂಡ, ಅವರೆಲ್ಲರೊಡನೆ ಸಮಾನದುಃಖವುಳ್ಳವನಾಗಿ, ಸುಗ್ರೀವನ | ಮೂಲಕವಾಗಿ ವಾಲಿಗೆ ಸಮಸ್ತಪ್ರೇತಕಾರಗಳನ್ನೂ ತಾನೇ ಮಾಡಿಸಿದ ನು ಹೀಗೆ ಜಗತ್ಪಸಿದ್ಧನಾಗಿಯೂ, ಮಹಾಪರುಷವುಳ್ಳವನಾಗಿಯೂ ಇದ್ದು ರಾಮಬಾಣದಿಂದ ಹತನಾದ ನಾಲಿಗೆ ದಹನಸಂಸ್ಕಾರಗಳೆಲ್ಲವ ನ್ನೂ ಮಾಡಿ ಮುಗಿಸಿದಮೇಲೆ, ಸುಗ್ರೀವನು ಲಕ್ಷಣಸಹಿತನಾಗಿ ನಿಂತಿದ್ದ ರಾಮನಬಳಿಗೆ ಬಂದನು ಇಲ್ಲಿಗೆ ಇಪ್ಪತ್ತೈದನೆ ಯಸರ್ಗವು w+ ಸುಗ್ರೀವಪಟ್ಟಾಭಿಷೇಕವು, www ಸುಗ್ರೀವನ ಅಣ್ಣನಾದ ನಾಲಿಗೆ ಆಪರಕಾರಗಳನ್ನು ನಡೆಸಿದಾಗ ಉಟ್ಟಿದ್ದ ಆದ್ರ್ರವಸ್ತ್ರದೊಡನೆಯೇ ರಾಮನ ಸಮೀಪದಲ್ಲಿ ದುಃಖದಿಂದ ನಿಂತಿದ್ದನು ಅಲ್ಲಿದ್ದ ವಾನರಮಂತ್ರಿಗಳೆಲ್ಲರೂ ಆತನನ್ನು ಸುತ್ತಿನಿಂತರು ಬ್ರಹ್ಮನ ಸುತ್ತಲೂ ದೇವರ್ಷಿಗಳು ನಿಂತಂತೆ ಸುಗ್ರೀವಾದಿವಾನರರೆಲ್ಲರೂ ರಾಮನಮುಂದೆ ಕೈಮುಗಿದು ವಿನಯದಿಂದ ನಿಂತಿದ್ದರು ಅವರಲ್ಲಿ ಮೇರು ಪರೈತದಂತೆ ಹೊಂಬಣ್ಣವಾದ ದೇಹಕಾಂತಿಯುಳ್ಳವನಾಗಿಯೂ, ಬಾಲ ಸೂರಬಿಂಬದಂತೆ ತೇಜೋವಿಶಿಷ್ಟವಾದ ಮುಖವುಳ್ಳವನಾಗಿಯೂ ಇದ್ದ ಆಂಜನೇಯನು, ಮುಂದೆ ಬಂದು,ರಾಮನಿಗೆ ಕೈಮುಗಿದು ((ಸ್ವಾಮೀ'ತಮ್ಮ ಅನುಗ್ರಹದಿಂದ ಸುಗ್ರೀವನು ತನಗೆ ಪಿತೃಪಿತಾಮಹಪರಂಪರೆಯಾಗಿ ಬಂದ ವಾನರರಾಜ್ಯವನ್ನು ಪಡೆದಿರುವನು ಬೇರೆ ಯಾರಿಗೂ ಸುಲಭವಾಗಿ ಸಿಕ್ಕದ ಈದೊಡ್ಡ ರಾಜ್ಯವು,ತಮ್ಮ ಅನುಗ್ರಹವಿಶೇಷದಿಂದಲೇ ಇವನ ಕೈಗೆ ಲಭಿಸಿರು ವುದು ಇನ್ನು ಈಸುಗ್ರೀವನು ತಮ್ಮ ಅನುಜ್ಞೆಯನ್ನು ಪಡೆದು, ಕಿಷ್ಕಂಥೆಯ ನ್ನು ಪ್ರವೇಶಿಸಿ, ತನ್ನ ಮಿತ್ರರೊಡಗೂಡಿ ಮುಂದೆ ನಡೆಸಬೇಕಾದ ಸಮಸ್ತಕಾ ಲ್ಯಗಳನ್ನೂ ನಡೆಸಬೇಕಾಗಿರುವುದು ತಾವು ಅನುಚ್ಛೆಯನ್ನು ಕೊಡಬೇಕು. ಇವನು ಶಾಸೊಕ್ಕವಾಗಿ, ನಾನಾವಿಧಗಂಧಗಳಿಂದಲೂ, ಓಷಧಿಗಳಿಂದ