ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೧೯೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪To ಶ್ರೀಮದ್ರಾಮಾಯಣವು [ಸರ್ಗ ೨೬ ಬೇಕು ಇನ್ನು ನೀನು ಹೊರಡು! ನಿನ್ನ ರಾಜ್ಯದಲ್ಲಿ ಅಭಿಷಿಕ್ತನಾಗಿ ನಿನ್ನ ಮಿತ್ರ ರೆಲ್ಲರನ್ನೂ ಸಂತೋಷಪಡಿಸು” ಎಂದನು. ಹೀಗೆ ರಾಮನು ಅನುಜ್ಞೆಯನ್ನು ಕೊಟ್ಟೂಡನೆಯೇ ಸುಗ್ರೀವನು ಅಲ್ಲಿದ್ದ ವಾನರರೊಡಗೂಡಿ ಕಿಟ್ಟಂಧೆಗೆ ಬಂದನು ಪುರಪ್ರವೇಶಮಾಡುವಾಗ ಸಾವಿರಾರುಮಂದಿ ವಾನರರು ಸುಗ್ರಿ ವನನ್ನು ಹಿಂಬಾಲಿಸಿ ಬಂದು ಆತನಿಗೆ ಸಮಸ್ಕರಿಸುತಿದ್ದರು ಇನ್ನೂ ಅಲ್ಲಿದ್ದ ಸಮಸ್ತವಾನರಪ್ರಜೆಗಳೂ, ತಮಗೆ ಪಾಲಕನಾಗಿ ಬಂದ ಸುಗ್ರೀವನನ್ನು ನೋಡಿ ಸಂತೋಷದಿಂದ ತಲೆಬಗ್ಗಿ ನಮಸ್ಕರಿಸಿ,ವಿನಯದಿಂದ ನಿಂತಿದ್ದರು ಸಂತೋಷಪರವಶರಾಗಿ ತನಗೆ ನಮಸ್ಕರಿಸುತ್ತಿದ್ದ ಆ ಪ್ರಜೆಗಳೆಲ್ಲರನ್ನೂ ಸುಗ್ರೀವನು ಪ್ರೀತಿಯಿಂದ ಮಾತನಾಡಿಸಿ, ಅವರನ್ನು ಮೇಲಕ್ಕೆತ್ತಿ, ಅವ ರೆಲ್ಲರನ್ನೂ ಮನ್ನಿಸಿ, ಅಲ್ಲಿಂದ ನೆಟ್ಟನೆ ವಾಲಿಯ ಅಂತಃಪುರವನ್ನು ಪ್ರವೇಶಿಸಿ ದನು ಅಲ್ಲಿ ತಾರೆಯನ್ನು ಸಮಾಧಾನಪಡಿಸಿ ಅಲ್ಲಿಂದ ಹಿಂತಿರುಗಿದನು ಅಂತಃ ಪುರದಿಂದ ಹಿಂತಿರುಗಿದ ಸುಗ್ರೀವನನ್ನು , ಅಲ್ಲಿನ ವಾನರರೆಲ್ಲರೂ ಅತಿವೈಭವ ಡಿಂದ ಕರೆತಂದು,ದೇವತೆಗಳು ಇಂದ್ರನಿಗೆ ಪಟ್ಟವನ್ನು ಕಟ್ಟುವಂತೆ ಸಂಭ್ರ ಮದಿಂದ ಆತನಿಗೆ ರಾಜ್ಯಾಭಿಷೇಕವನ್ನು ನಡೆಸಲಾರಂಭಿಸಿದರು ಕೆಲವು ವಾ ಮೊದಲೇ ಹತ್ತು ವರ್ಷಗಳು ಕಳೆದುಹೋದುವೆಂದು ಹಿಂದೆಯೇ ತಿಳಿಸಲ್ಪಟ್ಟಿರುವುದು ಆಮೇಲೆ ಪಂಚವಟೆಯಲ್ಲಿ ಮೂರುವರ್ಷಗಳು ಕಳೆದುಹೋದುವು ಆಗಿನ ಚೈತ್ರ ಮಾಸ ದಲ್ಲಿಯೇ ಶೂರ್ಪನಖಾಭಂಗವೂ,ಖರಾದಿರಾಕ್ಷಸವಧವೂ ನಡೆದುದಾಗಿ ತಿಳಿದುಬಂದಿದೆ. ರಾವಣನು ಮಾರೀಚನನ್ನೊಪ್ಪಿಸುವುದರಲ್ಲಿ ಸ್ವಲ್ಪ ಕಾಲವು ಕಳೆದುಹೋದರೂ, ಆಚೆ ತ್ರದ ಕೊನೆಯಲ್ಲಿಯೇ ಸೀತಾಪಹರಣವೂ ನಡೆದಿರಬೇಕು ರಾಮನು ಮೊದಲು ಸೀತಾ ವಿರಹದಿಂದ ಪೀಡಿತನಾಗಿದ್ದಾಗ ಚೈತ್ರಾನಿಲಗಳೇ ಮೊದಲಾದ ವಸಂತಋತುವಿನ ಸ್ವ ಭಾವವನ್ನೇ ವರ್ಣಿಸುತ್ತಿದ್ದುದರಿಂದಲೂ,ಸೀತೆಯು ಲಂಕೆಯಲ್ಲಿದ್ದುದು ಸರಿಯಾಗಿ ಒಂದುವರ್ಷಕಾಲವೆಂದು ನಿರ್ಣಯಿಸಲ್ಪಟ್ಟಿರುವುದರಿಂದಲೂ, ಚೈತ್ರದಲ್ಲಿಯೇ ಸೀತಾ ಪಹರಣವೆಂದು ಸಿದ್ಧವಾಗುವುದು ನಾಲ್ಕು ನದಲ್ಲಿ ರಾವಣವಧವು ಇದಕ್ಕೆ ಮೊದಲು ಆಷಾಢದಲ್ಲಿಯೇ ವಾಲಿವಧವು ಶರದೃತುವಿನಲ್ಲಿ ವಾನರರ ಸೇನಾಸನ್ನಾಹವು ಮಾರ್ಗ ಶೀರ್ಷದಲ್ಲಿ ವಾನರಗೆ ಪ್ರಯಾಣವು ನಾಲ್ಕುನಶುದ್ಧ ತ್ರಯೋದಶಿಯಲ್ಲಿ ಹನುಮಂತನು ಸಮುದ್ರವನ್ನು ದಾಟಿದುದು, ಚತುರ್ದಶಿಯಲ್ಲಿಯೇ ಲಂಕೆಯಿಂದ ಹಿಂತಿರುಗಿದುದು ಪೂರ್ಣಿಮೆಯಲ್ಲಿ ದಂಡಯಾತ್ರೆಯೆಂದು ಗ್ರಾಹ್ಯವು ಮುಂದಿನ ವಿಷಯವು ಯುದ್ಧಕಾಂ ಡದಲ್ಲಿ ಸ್ಪಷ್ಟವಾಗುವುದು