ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೨೦೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪೪ ಶ್ರೀಮದ್ರಾಮಾಯಣವು [ಸರ್ಗ, ೨೬, ವು, ನವಿಲುಗಳು ಕೇಕಾಧ್ವನಿಯನ್ನು ಮಾಡುವುವು ಮಾಲತಿ, ಮೊಲ್ಲೆ ಮೊ ದಲಾದ ಹೂಗಿಡಗಳ ಪೊದೆಗಳು ಎಷ್ಟೋ ಮನೋಹರವಾಗಿರುವುವು ಇನ್ನೂ ಅಲ್ಲಲ್ಲಿ ಪುಷಿತಗಳಾದ ಸಿಂಧುವಾರ, ಗೋರಂಟೆ, ಕಡವು.ಅರ್ಜುನ ಸರ್ಜಕ ಮುಂತಾದ ಹೂಗಿಡಗಳ, ಶೋಭಿಸುತ್ತಿರುವುವು ಇದೋ ಇಲ್ಲಿ ಅರಳಿದ ಕಮಲಗಳಿಂದ ಶೋಭಿಸುವ ಈ ಕಮಲಸರೋವರವು ಎಷ್ಟು ಮ ನೋಹರವಾಗಿರುವುದು ನೋಡಿದೆಯಾ? ನಮ್ಮ ಗುಹೆಗೆ ಇದು ಸಮೀಪವಾಗಿ ಯೇ ಇರುವುದು ನೈಋತ್ಯಾಭಿಮುಖವಾದ ಬಾಗಿಲುಳ್ಳುದಾಗಿ ಈಶಾನ್ಯದ ಕಡೆಗಿರುವ ಈ ಗುಹೆಯು, ನಮಗೆ ಬಹುವಿಧದಲ್ಲಿ ಅನುಕೂಲವಾಗಿರುವುದು ಇದಲ್ಲದೆ ಇದರ ಹಿಂಭಾಗವು ತಿಟ್ಟಾಗಿಯೂ ಇರುವುದರಿಂದ, ವಿಶೇಷವಾದ ಗಾಳಿಯು ಬಡಿಯದಂತೆ ಮರೆಯಾಗಿಯೂ ಇರುವುದು ಈ ಗುಹೆಯ ಬಾಗಿ ಲಲ್ಲಿರುವ ಕಲ್ಲುಬಂಡೆಯೂಕೂಡ ಹೆಚ್ಚು ತಗ್ಗಿಲ್ಲದೆ ಸಮವಾಗಿಯೂ, ನುಣು ಪಾಗಿಯೂ, ವಿಸ್ತಾರವಾಗಿಯೂ ಇರುವುದು ಇದು ಕಾಡಿಗೆಯ ಹರಳಿ ನಂತೆ ಎಷ್ಟು ಕಪ್ಪಾಗಿರುವುದು ನೋಡು ಎಲೆ ವತ್ರನೆ' ಇದೊ ಇತ್ಯ ಲಾಗಿ ಉತ್ತರದಿಕ್ಕಿನಲ್ಲಿ ಕಾಣುವ ಶಿಖರವನ್ನು ನೋಡು ಮೇಲೇಳುತ್ತಿರುವ ಕರೀಮೇಫು ಸಮೂಹದಂತೆಯೇ ಕಾಣುತ್ತಿರುವುದು ಈ ದಕ್ಷಿಣದಿಕ್ಕಿನಲ್ಲಿ ಯೂಕೂಡ ಬಗೆಬಗೆಯ ಧಾತುಗಳಿಂದ ಶೋಭಿತವಾಗಿ ಕೈಲಾಸತಿಖರದ ತೆ ಕಾಣುವ ಬಿಳೀತಿಖರವು ಎಷ್ಟು ಮನೋಹರವಾಗಿರುವುದು ನೋಡು ನಮ್ಮಗುಹೆಯ ಮುಂಭಾಗದಲ್ಲಿ ಸ್ವಲ್ಪವೂ ಕಸರಿಲ್ಲದೆ ಪೂರಾಭಿಮುಖವಾ ಗಿ ಹರಿಯುತ್ತಿರುವ ಈ ನದಿಯನ್ನು ನೋಡಿದೆಯಾ? ಇದರ ಬಣ್ಣವನ್ನು ನೋಡಿದರೆ ತ್ರಿಕೂಟಗಿರಿಯಲ್ಲಿರುವ ಗಂಗಾನದಿಯಂತೆಯೇ ಕಾಣುತ್ತಿರುವು ದು ಮತ್ತು ಇಲ್ಲಿ ಸಂಪಗೆ, ತಿಲಕ, ತಾಳೆ, ಹೊಂಗೆ, ಅದಿಮುತ್ತೆ, ಪದ್ಮ ಪರ್ಣಿ, ಸರಳ, ಅಶೋಕ, ಆಲ, ಸ್ವಂದನ, ವಾಸೀರ, ಪಗಡೆ, ಕೇಗದೆ,ಆಲ, ಹಿಂತಾಲ, ತಿಲ್ಯ, ಬೆತ್ತ, ಕಡವು, ಕೃತಮಾಲ ಇವೇ ಮೊದಲಾದ ತೀರವೃ ಕ್ಷಗಳು, ಪಷ್ಟ ಫಲಗಳಿಂದ ತುಂಬಿ, ಈ ನದಿಗೆ ಎಷ್ಟೊಂದು ಅಪೂಶೋಭೆ ಯನ್ನುಂಟುಮಾಡುತ್ತಿರುವುವು ನೋಡು' ಇವುಗಳಿಂದ ಈ ನದಿಯು ಅನೇಕ ವಸ್ತ್ರಾಭರಣಗಳಿಂದಲಂಕೃತಳಾದ ಉತ್ತಮಯಂತೆಯೇ ತೋರುತ್ತಿ