ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೨೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

* mM ಸರ್ಗ ೨೮.] ಕಿಷಿಂಧಾಕಾಂಡವು, ೧೪o೧ ಮೊದಲಾದ ದೋಷಗಳೆಲ್ಲವೂ ತಗ್ಗಿ ಹೋದುವು ರಾಜರ ದಂಡಯಾತ್ರೆಗ ಳು ತತ್ಕಾಲಕ್ಕೆ ನಿಲ್ಲಸಲ್ಪಟ್ಟಿರುವುವು ದೇಶಾಂತರಕ್ಕೆ ಹೋದವರೆ ಲ್ಲರೂ ತಮ್ಮ ತಮ್ಮ ನಿವಾಸಗಳನ್ನು ಸೇರುತ್ತಿರುವರು * ಈಗ ಹಂಸಗಳೆಲ್ಲ ವೂ ಅತ್ಯಾತುರದಿಂದ ವಾಸಾರ್ಥವಾಗಿ ಬಾನಸಸರಸ್ಸಿಗೆ ಹೊರಡುತ್ತಿ ರುವುವು ಚಕ್ರವಾಕದಂಪತಿಗಳು ಕಾಮೋದ್ರೇಕದಿಂದ ಒಂದನ್ನೊಂದ ಗಲದಿರುವುವು ಮಳೆಯ ನೀರಿನಿಂದ ಮಾರ್ಗವೆಲ್ಲವೂ ಕೆಟ್ಟು, ರಥಾದಿವಾಹ ನಗಳ ಸಂಚಾರವೇ ನಿಂತುಹೋಗಿರುವುದು ಆಕಾಶದಲ್ಲಿ ಮೋಡಗಳು ಅಲ್ಲಲ್ಲಿ ಬೇರೆಬೇರೆಯಾಗಿ ಕೂಡಿರುವುದರಿಂದ, ಕಲವುಕಡೆಯಲ್ಲಿ + ಪ್ರಕಾಶ ವಾಗಿಯೂ ಮತ್ತೆ ಕೆಲವು ಕಡೆಗಳಲ್ಲಿ ಕತ್ತಲಾಗಿಯೂ ಇರುವುದು ಮತ್ತು ಈಗ ವನಪ್ರದೇಶವು ಒಂದೊಂದುಕಡೆಯಲ್ಲಿ ಪ್ರತಗಳಿಂದ ಮರೆಸಲ್ಪ ಟ್ಟು ಅಲೆಯಿಲ್ಲದೆ ಶಾಂತವಾಗಿರುವ ಮಹಾಸಮುದ್ರದಂತಿರುವುದು ಇ ದೋ'ಇತ್ತಲಾಗಿ ಬೆಟ್ಟದಿಂದ ಬಿಳುವ ನದಿಗಳ ನೀರನ್ನು ನೋಡಿದೆಯಾ? # ಈನದಿಗಳು ಬೆಟ್ಟದ ಮೇಲಿನ ಗೈರಿಕಾದಿಧಾತುಗಳ ಬಣ್ಣದಿಂದ ಕೆಂಪಾಗಿ, ಅಲ್ಲಲ್ಲಿ ಉದಿರಿ ಬೀಳುವ ಸರಪುಷ್ಪಗಳಿಂದಲೂ, ಕದಂಬಪುಷ್ಪಗಳಿಂದಲೂ

  • ಇಲ್ಲಿ ಹಂಸಗಳಿಗೆ ಮಾನಸವಾಸಾಭಿಕಾಂಕ್ಷೆಯನ್ನು ಹೇಳಿರುವುದರಿಂದ, ಪರ ಮಹಂಸರೆನಿಸಿದ ಸನ್ಯಾಸಿಗಳು ಚಾತುದ್ಮಾಸ್ಯವನ್ನು ಹಿಡಿದು ಸಂಚಾರರಹಿತರಾಗಿರುವ ರೆಂದು ಸೂಚಿತವು ಮತ್ತು ಚಕ್ರವಾಕಗಳು ತಮ್ಮ ಪ್ರಿಯೆಯರೊಡಗೂಡಿರುವುದಾ ಗಿ ಹೇಳಿದುದರಿಂದ, ಭಗವದ್ಭಕ್ತಿಯುಕ್ತರಾದ ಯೋಗಿಹೃದಯಗಳು ಸೂಚಿತವು ವ ರ್ಪಧಾರೆಯಿಂದ ಯಾನಗಳು ನಿಂತುದಾಗಿ ಹೇಳಲ್ಪಟ್ಟಿರುವುದರಿಂದ ಭಗವತ್ಕಟಾಕ್ಷ ವರ್ಷದಿಂದಾಗುವ ಕರನಿವೃತ್ತಿಯು ಸೂಚಿತವಾಗಿದೆ

↑ ಇಲ್ಲಿ ಆಕಾಶದ ಪ್ರಕಾಶಾಪ್ರಕಾಶಗಳನ್ನು ಹೇಳಿರುವುದರಿಂದಮಂದಾಜ್ಞಾನ ದಿಂದ ಬ್ರಹ್ಮ ಸ ರೂಪವು ಕಂಡೂ ಕಾಣದಂತಿರುವುದೆಂದು ಸೂಚಿತವು ↑ ಇಲ್ಲಿ ಕಷ್ಟಗಳ ಬಿಳುಪಿನಿಂದಲೂ, ಧಾತುಗಳ ಕೆಂಪಿನಿಂದಲೂ ಮಿಶ್ರವಾಗಿ ಹ ರಿಯುವ ನದಿಗಳ ವೇಗವನ್ನೂ, ಅವುಗಳ ಸುತ್ತಲೂ ನವಿಲುಗಳ ಕೇಶಾಧ್ವನಿಯನ್ನೂ ಹೇಳಿರುವುದರಿಂದ, ಸಾತ್ವಿಕ ರಾಜಸಜ್ಞಾನಮಿಶ್ರವಾಗಿ, ಭಗವದ್ವಿಷಯಾನುರಾಗದಿಂದ ಕೂಡಿರುವ ಭಕ್ತರು,ತಮ್ಮ ಸುತ್ತಲೂ ನಿಂತು ಭಕ್ತಿ ಪ್ರೇರಿತರಾಗಿ ಭಗವಂತನನ್ನು ಸ್ತು ತಿಸುವ ಇತರಭಕ್ತರ ಸ್ತುತಿರವವನ್ನು ಕೇಳಿ ಉತ್ಸಾಹದಿಂದುಬ್ಬುವರೆಂದು ಸೂಚಿತ.