ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೨೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪೦೨ ಶ್ರೀಮದ್ರಾಮಾಯಣವು [ಸರ್ಗ ೨೮. ಬಿಳುಪಾಗಿ, ಹೊಸನೀರಿನೊಡನೆ ಕಲೆತು, ಎಷ್ಟು ವೇಗವಾಗಿ ಹರಿಯುತ್ತಿರು ವುದು ನೋಡು, ಇವುಗಳ ಪ್ರವಾಹಘೋಷವು, ಅಲ್ಲಲ್ಲಿ ಕೂಗುತ್ತಿರುವ ನ ವಿಲುಗಳ ಕೇಕಾಧ್ವನಿಯೊಡನೆ ಕಲೆತಿರುವುದು *ದುಂಬಿಯಂತೆ ಕಪ್ಪಾಗಿರಸ ಮಿಶ್ರವಾಗಿ ಬಿಳುತ್ತಿರುವ ಈ ನೇರಳೆಯ ಹಣ್ಣುಗಳನ್ನು ಈಗ ಜನಗಳು ಯ ಥೇಚ ವಾಗಿಭುಜಿಸುತಿರುವರು,ಇದೊಂತ ಲಾಗಿ ಚೆನಾಗಿ ಮಾಗಿ, ಗಾಳಿ ಯಿಂದದಿರಿ ನೆಲದಮೇಲೆ ಬಿದ್ದಿರುವ ಬಗೆಬಗೆಯ ಬಣ್ಣಗಳುಳ್ಳ ಮಾವಿನ ಹ ಇುಗಳನ್ನು ನೋಡಿದೆಯಾ' ಮಿಂಚುಗಳಿಂದಲೂ,ಹಂಸಗಳಿಂದಲೂ, ಶೋ ಭಿತಗಳಾಗಿ ಬೆಟ್ಟದ ಶಿಖರಗಳಂತಿರುವ ಈ ಮೇಫುಗಳು, ಧ್ವಜಗಳಿಂದಲೂ ನಕ್ಷತ್ರಮಾಲಿಕೆಗಳಿಂದಲೂ ಅಲಂಕೃತಗಳಾಗಿ, ಯುದ್ಧಕ್ಕೆ ನಿಂತಿರುವ + ಮ ದದಾನೆಗಳಂತೆ ಉಚ್ಚ ಧ್ವನಿಯಿಂದ ಗರ್ಜಿಸುತ್ತಿರುವುವು ಎಲೆ ವತ್ಪನೆ' 'ಈ ಅರಣ್ಯ ಪ್ರದೇಶಗಳನ್ನು ನೋಡು ಇಲ್ಲಿನ ತೃಣಭೂಮಿಗಳೆಲ್ಲವೂ ಮಳೆಯಿಂ ದ ಚಿಗುರಿರುವುವು ಅಲ್ಲಲ್ಲಿ ನವಿಲುಗಳು ಸಂತೋಷದಿಂದ ನರ್ತಿಸುತ್ತಿರುವು ವು. ಇದರ ಸುತ್ತಲೂ ಮೇಫುಗಳು ವರ್ಷಧಾರೆಯನ್ನು ಕರೆಯುತ್ತಿರುವುವು ಸಾಯಂಕಾಲಗಳಲ್ಲಿ ಇವುಗಳ ಶೋಭಾತಿಶಯವು ವಿಶೇಷಮನೋಹರವಾಗಿ ರುವುದು ಬಹಳವಾದ ನೀರಿನ ಭಾರವನ್ನು ಹೊತ್ತು ಗರ್ಜಿಸುತ್ತಿರುವ ಈ ಮೇಫುಗಳು, ಆ ಜಲಗರ್ಭಭಾರದಿಂದ ಬೇಗನೆ ನಡೆ ಯಲಾರದೆ, ಅಲ್ಲಲ್ಲಿನ ಶಿಖ ರಗಳಲ್ಲಿ ವಿಶ್ರಮಾರವಾಗಿ ನಿಂತುನಿಂತು ನಡೆಯುತ್ತಿರುವುದನ್ನು ನೋಡು

  • ಇದರಿಂದ ಜೀವರಿಗೆ ಭಗವತ್‌ಪೆಯಿಂದನುಭವಿಸಬಹುದಾದ ಫಲಸಮೃದ್ಧಿ ಯು ಸೂಚಿತವು

↑ ಇದರಿಂದ ವೇದಮಾರ್ಗಪ್ರತಿಷ್ಠೆಗಾಗಿ ವಾದ ಮಾಡುವ ಅಸ್ತಿಕರು ಸೂಚಿತ ರಾಗುವರು,

  • ಇಲ್ಲಿ ಮೇಘಗಳು ಒಳಗೆ ಜಲಭಾರವನ್ನು ಹೊತ್ತು ಕೊಕ್ಕರೆಗಳ ಸಮೂಹ ದಿಂದ ಕೂಡಿ ಗರ್ಜಿಸುತ್ತಪರತದ ಒಂದೊಂದು ಶಿಖರವನ್ನೂ ದಾಟಿ ಹೋಗುವುವೆಂ ಬುದರಿಂದ, 'ಹೃದಯೇನೋದ್ಯರ್ಹಹರಿo” ಎಂಬಂತೆ ಭದವದ್ಧಾನಪರರಾಗಿ,ವಿಶದ ವಾದ ಜ್ಞಾನವನ್ನು ಹೊಂದಿ, ಯಾವಾಗಲೂ ಸ್ತುತಿಶೀಲರಾಗಿ, ಪೂವ್ಯಾಘೋತ್ತರಾಳ ಗಳ ಕ್ಷೇಶವೆಲ್ಲವನ್ನೂ ಕ್ರಮವಾಗಿ ದಾಟಿ, ಪರಾಕಾಷ್ಠೆಯನ್ನು ಹೊಂದುವವರು ಸೂ ಚೆಸಲ್ಪಡುವರು.