ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೨೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦೩ ಶ್ರೀಮದ್ರಾಮಾಯಕವ [ಸರ್ಗ ೨೮, ಸುತ್ತಲೂ, ಕಾಡಾನೆಗಳು ಸಂತೋಷದಿಂದ ಸಂಚರಿಸುತ್ತಿರುವುವು ಈಗ ವಿಶೇಷವಾದ ಮಳೆಯ ವೇಗದಿಂದ ಕಮಲಗಳಲ್ಲಿ ಕೇಸರಗಳೆಲ್ಲವೂ ಉದರಿ ಹೋದುದನ್ನು ನೋಡಿ, ಭಮರಗಳು ಆ ಕ್ಷಣವೇ ಆ ಕಮಲಗಳನ್ನು ಬಿ ಟ್ಯು, ಕೇಸರಗಳಿಂದ ತುಂಬಿದ ಕಡವಿನ ಮರಗಳ ಹೊಸಹೂಗಳಲ್ಲಿ ಅತ್ಯಾ ದುರದಿಂದ ಬಂದುಬಿಳುವುವು ಈಗ ಆನೆಗಳು ವಿಶೇಷವಾದ ಮದದಿಂದ ಕೊಬ್ಬಿರುವುವು ಗೋವುಗಳು ಸಂತೋಷದಿಂದುಬ್ಬಿರುವುವು ಸಿಂಹಗಳು ಕಾಡಿನಲ್ಲಿ ವಿಶ್ರಾಂತಿಯಿಂದ ಮಲಗಿರುವುವು ಬೆಟ್ಟಗಳು ಹೂಗಳಿಂದಲೂ ಚಿಗುರುಗಳಿಂದಲೂ ತುಂಬಿ ರಮ್ಯವಾಗಿರುವುವು ರಾಜರು ಯುದ್ಧ ಯಾತ್ರೆ ಗಳನ್ನು ಬಿಟ್ಟು ಅತ್ತಿತ್ತ ಕದಲದೆ ಸುಮ್ಮನಿರುವರು ದೇವೇಂದ್ರನೊಬ್ಬನು ಮೇಫುಗಳಿಂದ ಆಟವಾಡುತ್ತಿರುವನು ಮೇಘಗಳು ಜಲಭರಿತಗಳಾಗಿ ಆಕಾ ಶದಲ್ಲಿ ಸುತ್ತುತ್ತ, ಸಮುದ್ರಘೋಷವನ್ನೂ ಮರೆಸುವಂತೆ ಗರ್ಜಿಸುತ್ತ, ಕೊಳಬಾವಿಗಳನ್ನೂ , ಕೆರತೊರೆಗಳನ್ನೂ, ಸಮಸ್ತಭೂಮಿಯನ್ನೂ ತೇಲಾ ಡಿಸುವಂತೆ ಮಳೆಯನ್ನು ಸುರಿಸುತ್ತಿರುವುವು ಈಗ ಎಡೆಬಿಡದೆ ಮಳೆ ಬೀಳು ತಿರುವುದು ಗಾಳಿಯು ಮಹಾಘೋಷದಿಂದ ವೇಗವಾಗಿ ಬೀಸುತ್ತಿರುವುದು. ನದಿಗಳು ಪೂರ್ಣಪ್ರವಾಹದಿಂದ ದಡವನ್ನು ಮೀರಿ ದಾರಿತಪ್ಪಿ ಪ್ರವಹಿಸು ವುವು ಪಟ್ಟಕ್ಕೆ ಬಂದ ರಾಜರು ಜಲಕುಂಭಗಳಿಂದಭಿಷಿಕ್ತರಾದಮೇಲೆ ಅವರಲ್ಲಿ ರಾಜಲಕ್ಷ್ಮಿಯು ಕಾಣುವಂತೆ, ದೇವೇಂದ್ರನು ಮೇಫುಗಳೆಂಬ ಕುಂಭಗಳಿಂದ ಈ ಪಕ್ವತಗಳಿಗೆ ಅಭಿಷೇಕಮಾಡಿದೊಡನೆ,ಇವು ನೈರಲ್ಯರೂ ಪವಾದ ತಮ್ಮ ಕಾಂತಿಯನ್ನು ತೋರಿಸುವಂತಿರುವುವು ಆಕಾಶವು ಮೋಡ ಗಳಿಂದ ಮುಚ್ಚಿ, ಹಗಲಲ್ಲಿ ಸೂರನಾಗಲಿ, ರಾತ್ರಿಯಲ್ಲಿ ನಕ್ಷತ್ರಗಳಾಗಲಿ ಗೋಚರಿಸುವುದಿಲ್ಲ ನೆಲವೆಲ್ಲವೂ ಜಲಪ್ರವಾಹದಿಂದ ತುಂಬಿ ಹೋಗಿರುವು ದು ಕತ್ತಲೆಯಿಂದ ಲೇಪಿಸಲ್ಪಟ್ಟಂತೆ ದಿಕ್ಕುಗಳೊಂದೂ ಕಾಣುವುದಿಲ್ಲ. ಮಳೆಯನೀರಿನಿಂದ ತೊಳೆಯಲ್ಪಟ್ಟ ಈ ದೊಡ್ಡ ದೊಡ್ಡ ಪಕ್ವತಶಿಖರಗಳ ನ್ನು ಮುತ್ತಿನ ಹಾರಗಳಿಂದಲಂಕರಿಸಿಟ್ಟಂತೆ, ಅವುಗಳ ಸುತ್ತಲೂ ಗಿರಿನದಿ ಗಳು ಪ್ರವಹಿಸುತ್ತಿರುವುವು ಅಲ್ಲಲ್ಲಿ ಕಲ್ಲುಬಂಡೆಗಳಿಂದ ತಡೆಯಲ್ಪಟ್ಟ ವೇಗ ವುಳ್ಳ ಈ ಗಿರಿನಹಿಗಳು, ನವಿಲುಗಳ ಕೇಕಾಧ್ವನಿಯಿಂದ ಕೂಡಿದ ಪಕ್ವತಗುಹೆ