ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೨೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ ೨೯.] ಕಿಮ್ಮ೦ಥಾಕಾಂಡವು ೧೫of ಗಾಲದಲ್ಲಿ ವಿಶ್ರಮಿಸಿಕೊಂಡಿದ್ದು,ಶರತ್ಕಾಲವು ಬಂದೊಡನೆತಾನಾಗಿಬಂದು ನನ್ನ ಉಪಕಾರಕ್ಕೆ ಪ್ರತ್ಯುಪಕಾರವನ್ನು ಮಾಡುವುದರಲ್ಲಿ ಸಂದೇಹವಿಲ್ಲ ಎಲೆ ವತ್ರನೆ' ಆದುದರಿಂದ ನಾನು ಶರತ್ಕಾಲವು ಬಂದಮೇಲೆ, ಈ ನದಿಗಳ ನೀರೂ, ಸುಗ್ರೀವನ ಮನಸ್ಕ ಪ್ರಸನ್ನ ವಾಗುವುದನ್ನೇ ನಿರೀಕ್ಷಿಸುತ್ತಿರುವೆ ನು ವೀರನಾದ ಪುರುಷನು ತನಗುಪಕಾರವನ್ನು ಮಾಡಿದವರಿಗೆ ಪ್ರತ್ಯುಪ ಕಾರಮಾಡದಿರನು ಹಾಗೆ ಕೃತಜ್ಞತೆಯಿಲ್ಲದೆ ಪ್ರತ್ಯುಪಕಾರವನ್ನು ಮಾಡದ ಪಕ್ಷದಲ್ಲಿ, ಸಾತ್ವಿಕರಾದ ಸತ್ಪುರುಷರ ಮನಸ್ಸಿಗೆ ಸಂಕಟವನ್ನುಂಟುಮಾಡಿ ದಂತಾಗುವುದು ಆದುದರಿಂದ ಸುಗ್ರೀವನು ನಮ್ಮ ವಿಷಯದಲ್ಲಿ ಹೇಗಿದ್ದರೂ ಸತ್ಪುರುಷರ ಮನಸ್ಸನ್ನು ನೋಯಿಸಬಾರದೆಂಬುದಕ್ಕಾಗಿ ನಮಗೆ ತಪ್ಪದೆ ಪ್ರತ್ಯುಪಕಾರವನ್ನು ಮಾಡಬಹುದು” ಎಂದನು ಇವೆಲ್ಲವನ್ನೂ ಕೇಳುತಿದ್ದ ಲಕ್ಷ್ಮಣನು ಆತನ ಮಾತುಗಳನ್ನು ಗೌರವಿಸುತ್ತ,ಅವನಿಗೆ ಕೈಮುಗಿದು, ಮುಂ ಗೆ ನಡೆಸಬೇಕಾದ ಕಾಠ್ಯವನ್ನು ತನ್ನ ಮನಸ್ಸಿನಲ್ಲಿಯೇ ಆಲೋಚಿಸಿಕೊಂಡು, ತನ್ನ ಮನೋಭಿಪ್ರಾಯವೂ ಅದೇ ಎಂಬುದನ್ನು ರಾಮನಿಗೆ ತಿಳಿಸಬೇಕಂ ದು ನಿಶ್ಚಯಿಸಿ ('ಅಣ್ಣಾ' ವಾನರೇಂದ್ರನಾದ ಸುಗ್ರೀವನು ಆಡಿದಮಾತಿ ಗೆ ತಪ್ಪವವನಲ್ಲ ನಿನ್ನ ಕೋರಿಕೆಗಳನ್ನು ಶೀಘ್ರದಲ್ಲಿಯೇ ಈಡೇರಿಸುವನು ನೀನುಮಾತ್ರ ಧೈರೆಗುಂದಬೇಡ ಶರತ್ಕಾಲವು ಬರುವವರೆಗೂ ಧೈಯ್ಯದಿಂದ ಸಹಿಸಿಕೊಂಡು ಈ ಮಳೆಗಾಲವನ್ನು ಕಳೆದುಬಿಡು” ಎಂದನು ಇಲ್ಲಿಗೆ ಇ ಸ್ಪತೆಂಟನೆಯಸರ್ಗವು ವರ್ಷಾಕಾಲವು ಕಳೆಯುತ್ತ ಬಂದುದನ್ನು ನೋಡಿ, ಹ) \ ನುಮಂತನು ಸುಗ್ರೀವನಿಗೆ ರಾಮಕಾರವನ್ನು ಜ್ಞಾ ಪಿಸಿದುದು ಸುಗ್ರೀವನು ನೀಲನನ್ನು ಕರೆದು ಸಮಸ್ತ ( ಸೈನ್ಯಗಳನ್ನೂ ಕರೆಸುವಂತೆ ನಿಯಮಿಸಿದುದು.) ಕ್ರಮಕ್ರಮವಾಗಿ ಮಳೆಗಾಲವು ಕಳೆಯುತ್ತ ಬಂದಿತು ಆಕಾಶದಲ್ಲಿ ಮಿಂಚುಗಳೂ ಮೇಫುಗಳೂ ತಗ್ಗುತ್ತ ಬಂದುವು ದಿಕ್ಕುಗಳೆಲ್ಲವೂ ಸ್ವಚ್ಛ ವಾದುವು ಸಾರಸಪಕ್ಷಗಳು ಕೂಗಿಡಲಾರಂಭಿಸಿದುವು ಬೆಳ್ಳಿಂಗಳನ್ನು ಲೇಪಿ ಸಿದಂತೆ ಆಕಾಶವೂ ಸ್ವಚ್ಚವಾಗುತ್ತಬಂದಿತು, ಅತ್ತಲಾಗಿ ಕಿಷಿಂಧೆಯಲ್ಲಿ