ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೨೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೫೧o ಶ್ರೀಮದ್ರಾಮಾಯಣವು - [ಸರ್ಗ, ೨೯. ತನ್ನ ಶತ್ರುವಾದ ವಾಲಿಯನ್ನು ಕೊಲ್ಲಿಸಿ, ರಾಜ್ಯಸಿದ್ಧಿಯನ್ನು ಹೊಂದಿ ದ ಸುಗ್ರೀವನಕೂಡ, ರತ್ನ ವಸ್ತ್ರಾಭರಣಗಳೇ ಮೊದಲಾದ ಸಮಸ್ಯೆ ಭೋಗಸಾಮಗ್ರಿಗಳನ್ನೂ ಸಮೃದ್ಧವಾಗಿ ಪಡೆದು ಸುಖಿಸುತ್ತಿದ್ದನು ಅವ ನ ಮನೋರಥಗಳೆಲ್ಲವೂ ಸಂಪೂರ್ಣವಾಗಿ ಈಡೇರಿದುವು ಯಾವಾಗಲೂ ಸ್ತ್ರೀಯರೊಡನೆ ಕಾಮಸುಖದಲ್ಲಿಯೇ ಮಗ್ನನಾಗಿದ್ದನು ತನ್ನ ಪತ್ನಿ ಯಾದ ರುಮೆಯನ್ನೂ , ತಾನು ಬಹುಕಾಲದಿಂದ ಕಣ್ಣಿಟ್ಟು ಕಾದಿದ್ದ ತಾರೆಯನ್ನೂ ಕೈವಶಮಾಡಿಕೊಂಡು, ಅವರೊಡನೆ ಆಹೋರಾತ್ರವೂ ಸುಖಿಸುತಿದ್ದನು ಹೀಗೆ ಸುಗ್ರೀವನು ಕೃತಾರನಾಗಿ, ಮನಸ್ಸಿನಲ್ಲಿ ಯಾವುದೊಂದು ಚಿಂತೆ ಯೂ ಇಲ್ಲದೆ, ಕಾಮುಕರ ಮಾರ್ಗವನ್ನನುಸರಿಸಿ, ಧರಾದ್ಧಿಗಳೆರಡರಲ್ಲಿಯೂ ಅಷ್ಟಾಗಿ ಶ್ರದ್ದೆಯಿಲ್ಲದೆ, ಕಾಮಪುರುಷಾರವೊಂದರಲ್ಲಿಯೇ ನಟ್ಟ ಮನಸ್ಸು ತೃವನಾಗಿದ್ದನು ರಾಜಕಾರಗಳೆಲ್ಲವನ್ನೂ ಮಂತ್ರಿಗಳಮೇಲೆ ಹೊರಿಸಿಬಿಟ್ಟ ನು ಆ ಮಂತ್ರಿಗಳು ಹೇಗೆ ನಡೆಸುವರೆಂಬುದನ್ನೂ ಪರಾಮರ್ಶಿಸುತ್ತಿರಲಿ ಲ್ಲ ನಂದನವನದಲ್ಲಿ ಅಪ್ಪರಸ್ಸುಗಳೊಡನೆ ಕ್ರೀಡಿಸುತ್ತಿರುವ ದೇವೇಂದ್ರ ನಂತೆ ಅನವರತವೂ ಸ್ತ್ರೀಯರೊಡನೆಯೇ ವಿಹರಿಸುತ್ತ ರಾಜ್ಯದ ಚಿಂತೆ ಯನ್ನೇ ಬಿಟ್ಟುಬಿಟ್ಟನು ಆಗ ಹನುಮಂತನು, ಸಗ್ರೀವನು ಕೇವಲಕಾಮ ವೃತ್ತನಾಗಿರುವುದನ್ನೂ , ಆಕಾಶವು ನಿಮ್ಮಲವಾಗಿರುವುದನ್ನೂ ನೋಡಿದನು ಭಾವಿಕಾರವನ್ನು ತಿಳಿದವನಾಗಿಯೂ, ಕಾತ್ಯಾಕಾರಗಳ ತತ್ವವನ್ನು ಬಲ್ಲವ ನಾಗಿಯೂ, ಕಾಲೋಚಿತಗಳಾದ ಧರ ವಿಶೇಷಗಳನ್ನರಿತವನಾಗಿಯೂ ಇ " ಆ ಹನುಮಂತನು, ಮುಂದೆ ನಡೆಸಬೇಕಾದುದೇನೆಂಬುದನ್ನು ತನ್ನ ಮನ ಸ್ಸಿನಲ್ಲಿ ನಿಶ್ಚಯಿಸಿಕೊಂಡು, ಸುಗ್ರೀವನನ್ನು ನೋಡುವುದಕ್ಕಾಗಿ ಬಂದನು ಈತನು ಮಾತುಬಲ್ಲವನಾದುದರಿಂದ ಯುಕ್ತಿಯುಕ್ತವಾಗಿಯೂ, ಹಿತವಾ ಗಿಯೂ, ಕಿವಿಗಿಂಪಾಗಿಯೂ ಇರುವ ಮಾತುಗಳಿಂದ ರಾಜನಾದ ಸುಗ್ರೀ ವನ್ನು ಮೊದಲು ಪ್ರಸನ್ನ ನನ್ನಾಗಿ ಮಾಡಿಕೊಂಡು, ಆಮೇಲೆ ಅವನಿಗೆ ಹಿತವಾಗಿಯೂ, ಯಧಾರವಾಗಿಯೂ, ಸಾಮಯುಕ್ತವಾಗಿಯೂ, ಥಾ ರ್ಥಗಳಿಂದಲೂ, ನ್ಯಾಯದಿಂದಲೂ, ಕೂಡಿದುದಾಗಿಯೂ, ತನಗೆ ಆತ ನಲ್ಲಿರುವ ಸ್ನೇಹವಾತ್ಸಲ್ಯಗಳಿಗೆ ತಕ್ಕುದಾಗಿಯೂ, ನಂಬಿಕೆಯನ್ನು ಹು