ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೨೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ, ೨೯.) ಕಿಂಧಾಕಾಂಡವು. ೧೧೧ ಟ್ವಿಸತಕ್ಕುದಾಗಿಯೂ ಇರುವ ಮಾತನ್ನು ಹೇಳತೊಡಗಿದನು 'ಎಲೈ ಕವಿರಾಜನೆ! ನಿನಗೆ ರಾಜ್ಯವು ಕೈಸೇರಿತು ನೀನು ಅಪಾರವಾದ ಕೀರ್ತಿ ಯನ್ನೂ ಹೊಂದಿದೆ ನಿನ್ನ ಕುಲಕ್ರಮಾಗತವಾದ ರಾಜ್ಯಶ್ರೀಯನ್ನೂ ಹೆ ಜೈಸಿಕೊಂಡುದಾಯಿತು ಇಷ್ಟಾದರೂ ಇದರಿಂದಲೇ ನೀನು ಕೃತಾರ ನೆಂದೆಣಿಸಬಾರದು ನೀನು ನಡೆಸಬೇಕಾದ ಪ್ರಧಾನಕಾಠ್ಯವೊಂದು ಇನ್ನೂ ಉಳಿದಿರುವುದು ಅದೇನೆಂದು ಬಲ್ಲೆಯಾ ? ಮಿತ್ರಸಂಗ್ರಹವು ಇನ್ನು ಮೇಲೆ ನೀನು ಆ ಕಾರಕ್ಕೆ ಪ್ರಯತ್ನಿ ಸಬೇಕು ಯಾವನು ಕಾಲವನ್ನರಿತು ಮಿತ್ರರೊಡನೆ ಸೇರಿ, ಅವರವರ ಮನಸ್ಸಿಗೆ ಕಿಂಕೃತಿಯುಂಟಾಗದಂತೆ ಸರಿ ಯಾಗಿ ನಡೆದುಕೊಳ್ಳುವನೋ, ಅವನ ರಾಜ್ಯವೂ, ಖ್ಯಾತಿಯೂ, ಪರಾಕ್ರ ಮವೂ ಮಲೆಮೇಲೆ ವೃದ್ಧಿ ಹೊಂದುವುವು ಯಾವ ರಾಜಸಿಗೆ ಬಂಡಾರವೂ, ಸೇನೆಯೂ, ಮಿತ್ರರೂ, ನಡತೆಯೂ ಲೋಪವಿಲ್ಲದೆ ಚೆನ್ನಾಗಿ ಹೊಂದಿ ರುವುವೋ ಅವನು ದೊಡ್ಡ ರಾಜ್ಯಕ್ಕೆ ಅಧಿಪತಿಯಾಗುವನು ನೀನು ಸದಾಚಾ ರಸಂಪನ್ನ ನಾಗಿಯೂ, ಸನ್ಮಾರ್ಗಪ್ರವೃತ್ತನಾಗಿಯೂ ಇರುವುದರಿಂದ, ಮೊದಲು ನಿನ್ನ ಮಿತ್ರರ ಕೋರಿಕೆಗಳನ್ನಿಡೇರಿಸಿಕೊಟ್ಟು, ಅವರನ್ನು ಸಂ ತೋಷಪಡಿಸಬೇಕು ಯಾವನು ತನ್ನ ಸಮಸ್ತಕಾಕ್ಯಗಳನ್ನಾ ದರೂ ಬಿಟ್ಟು ಆದರದಿಂದಲೂ, ಉತ್ಸಾಹದಿಂದಲೂ ತನ್ನ ಮಿತ್ರರ ಕಾಠ್ಯವನ್ನು ಎಡೆಬಿಡ ದೆ ನಡೆಸುತ್ತಿರುವನೋ, ಅವನು ಯಾವ ಆವರಗಳನ್ನಾದರೂ ತಪ್ಪಿಸಿಕೊಳ್ಳ ಬಹುದು ಯಾವನು ಮಿತ್ರರ ಕಾಕ್ಯಗಳನ್ನು ಸಕಾಲದಲ್ಲಿ ನಡೆಸದೆ ಅಲಕ್ಷ ದಿಂದಿರುವನೋ ಅವನು ಕಾಲಾಂತರದಲ್ಲಿ ಅವರಿಗಾಗಿ ಎಷ್ಟೇ ದೊಡ್ಡ ಕಾ ಕ್ಯಗಳನ್ನು ನಡೆಸಿದರೂ ನಡೆಸದಂತೆಯೇ ಆಗುವುದು, ಎಲೆ ವೀರನೆ' ಇದು ವರೆಗೆ ನಾನು ಸಾಮಾನ್ಯವಾಗಿ ಹೇಳಿದೆನು ವ್ಯಕ್ತವಾಗಿಯೇ ತಿಳಿಸುವೆನು ಕೇಳು ಈಗ ನಾವು ಮೊದಲು ನಡೆಸಬೇಕಾದ ಮಿತ್ರಕಾರವು ರಾಮನ ಕಾ ರೈವೇಹೊರತು ಬೇರೆಯಲ್ಲ ಸೀತೆಯನ್ನು ಹುಡುಕಿಸಬೇಕಾದುದೇ ಅವನಿಗಾ ಗಿ ಈಗ ನಾವು ಮಾಡಬೇಕಾದ ಸಹಾಯವು ಎಲೈ ವೀರನೆ 'ಈಗ ನೀನು ಅವಶ್ಯವಾಗಿ ನಡೆಸಬೇಕಾದ ಆ ಮಿತ್ರಕಾರಕ್ಕೂಕೂಡ ಕಾಲವು ಮೀರಿ ಹೋಗುತ್ತ ಬಂದಿರುವುದು, ಪ್ರಾಜ್ಞನಾದ ರಾಮನು ಕಾಲಜ್ಞನಾಗಿಯೂ