ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೨೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೫೧ ಸರ್ಗ ೨೯ ] ಕಿಷಿ ೦ಥಾಕಾಂಡವ ರಗರನ್ನೂ ವಶಪಡಿಸಿಕೊಳ್ಳಬಲ್ಲದು ಆದರೆ ತಾನು ಸತ್ಯಸಂಧನೆನಿಸಿಕೊಂ ಡಿರುವಂತೆ ಇತರರ ಮಾತನೂ ಉಳಿಸಬೇಕೆಂಬುದೇ ಅವನ ಉದ್ದೇಶವು, ಅ ದರಿಂದ ನೀನು ಅವನಿಗೆ ಮಾಡಿಕೊಟ್ಟಿರುವ ಪ್ರತಿಜ್ಞೆಯು ಕೆಡಬಾರದೆಂಬು ದಕ್ಕಾಗಿಯೇ ಅವನು ಇದಿರುನೋಡುತ್ತಿರುವನೆಂದು ತಿಳಿ ತನ್ನ ಪ್ರಾಣಗಳ ಮೇಲೆಯೂ ಲಕ್ಷ್ಯವಿಡದೆ ಆತನು ನಿನಗೆ ಉಪಕಾರವನ್ನು ಮಾಡಿರುವನು ಅಂತವನಿಗಾಗಿ ನಾವು ಸೀತೆಯನ್ನು ಭೂಮ್ಯಾಕಾಶಗಳಲ್ಲಿ ಎಲ್ಲಿದ್ದರೂ ಹು ಡುಕಿ ತರಬೇಡವೆ? ದೇವತೆಗಳಾಗಲಿ, ಗಂಧಕ್ವರಾಗಲಿ, ದಾನವರಾಗಲಿ, ಮ ರುದ್ದಣಗಳಾಗಲಿ, ಆತನನ್ನು ಹೆದರಿಸಲಾರರು ಇನ್ನು ಅವನು ರಾಕ್ಷಸರಿ ಗಂಜುವನೆ? ಆದುದರಿಂದ ರಾಮನು ತಾನಾಗಿ ಶಕ್ತಿಯುಳ್ಳವನಾಗಿದ್ದರೂ ಮೊದಲು ನಿನ್ನ ಗಾರವನ್ನು ಈಡೇರಿಸಿಕೊಟ್ಟಿರುವನಾದುದರಿಂದ, ಸತ್ವವಿ ಥದಲ್ಲಿಯೂ ನೀನಾಗಿ ಅವನಿಗೆ ಪ್ರಿಯವನ್ನು ಂಟುಮಾಡಬೇಕಾದುದೇ ನ್ಯಾ ಯವು ಎಲೈ ಕಪೀಂದ್ರನೆ'ನೀನು ಮಾತ್ರ ಆಜ್ಞೆಯನ್ನು ಕೊಟ್ಟಿಯಾದರೆ, ಪಾ ತಾಳದಲ್ಲಿಯಾಗಲಿ, ಭೂಮಿಯಲ್ಲಿಯಾಗಲಿ, ನೀರಿನಲ್ಲಿಯಾಗಲಿ, ಆಕಾಶದಲ್ಲಿ ಯೇ ಆಗಲಿ ನಮ್ಮ ವಾನರರು ತಡೆಯಿಲ್ಲದೆ ಸಂಚರಿಸಬಲ್ಲರು ನಿನಗೆ ಪ್ರಿಯ ರಾಗಿಯೂ, ಪಾಪದೂರರಾಗಿಯೂ ಎಂತವರಿಗೂ ದುರ್ಜಯರಾಗಿಯೂ ಇರುವ ವಾನರರು ಕೋಟಿಕೋಟಿಸಂಖ್ಯೆಯಿಂದ ನಿನ್ನ ವಶದಲ್ಲಿರುವರು ಆದರೆ ನಿನಗಾಗಿ ಯಾರುಯಾರು ಯಾವಯಾವಕಾರವನ್ನು ಮಾಡಬೇಕೆಂ ಬುದನ್ನು ನೀನು ನಿಯಮಿಸಬೇಕು” ಎಂದನು ಹೀಗೆ ಕಾಲೋಚಿತವಾಗಿ ಹೇ ಳಿದ ಹನುಮಂತನ ವಾಕ್ಯವನ್ನು ಕೇಳಿದಮೇಲೆ ಬಲಾಢನಾದ ಸುಗ್ರೀವ ನಿಗೆ ಮಿತ್ರಕಾರವನ್ನು ನಡೆಸಬೇಕೆಂಬ ಮನಸ್ಸು ಹುಟ್ಟಿತು ಆಗಲೇ ಆ ವನು ತನ್ನ ಮನಃಪ್ರಿಯನಾಗಿಯೂ, ಯಾವಾಗಲೂ, ಕಾರೊದ್ಯೋಗಪ ರನಾಗಿಯೂ ಇರುವ ನೀಲನೆಂಬ ವಾನರಸೈನ್ಯಾಧಿಪತಿಯನ್ನು ಕರೆದು, ಸ ಮಸ್ತ ದಿಕ್ಕುಗಳಿಂದಲೂ ಕಪಿಸೈನ್ಯಗಳೆಲ್ಲವನ್ನೂ ಕರೆಸುವಂತೆ ನಿಯಮಿಸಿ (ಎಲೆ ಸೇನಾಪತಿ' ಯೂಥಪಾಲಕರೊಡನೆ ಸಮಸ್ತವಾನರವೀರರೂ ಇ ಪ್ಲೆಗೆ ಈಗಲೇ ಬಂದು ಸೇರುವಂತೆ ಆಜ್ಞಾಪಿಸು : ಪ್ರಯತ್ನ ಪರರಾಗಿಯೂ ಶೀಘ್ರಗಾಮಿಗಳಾಗಿಯೂ ಇರುವ ಸೈನ್ಯಾಧಿಪತಿಗಳು, ಅಲ್ಲಲ್ಲಿರುವ ತಮ್ಮ