ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೨೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

m೧೩ ಶ್ರೀಮದ್ರಾಮಾಯಣವು (ಸರ್ಗ, ೩೦, ಕಾಲದಲ್ಲಿ ಆಕೆಯನ್ನು ಬಾಧಿಸದೆ ಸುಮ್ಮನಿರುವನೆ'ಎಂದಿಗೂ ಇರಲಾರನು ಆ ವಳಿಗೆ ಪ್ರಾಣಾಂತಕರವಾದ ವಿಪತ್ತನ್ನೇ ತಂದಿಡುವನು”ಎಂದುನಾನಾವಿಧ ದಿಂದ ವಿಲಪಿಸುತಿದ್ದನು ಚಾತಕಪಕ್ಷಿಯು, ಮಳೆಯ ನೀರಿಗಾಗಿ ಇಂದ್ರನನ್ನು ಕುರಿತು ಕೂಗಿಡುವಂತೆ, ಪುರುಷಶ್ರೇಷ್ಠ ನಾದ ರಾಮನು ಹೀಗೆ ನಾನಾವಿಧದ ಲ್ಲಿ ದೈನ್ಯದಿಂದ ವಿಲಪಿಸುತ್ತಿರಲು, ಇಷ್ಟರಲ್ಲಿ ಆ ಬೆಟ್ಟದ ತಪ್ಪಲುಗಳಲ್ಲಿ ಹ ಣ್ಣುಗಳನ್ನು ಕಿತ್ತು ತರುವುದಕ್ಕಾಗಿ ಹೋಗಿದ್ದ ಲಕ್ಷ್ಮಣನು, ಅಲ್ಲಲ್ಲಿಸುತ್ತಿಹಿಂ ತಿರುಗಿ ಬಂದು,ದೈನ್ಯದಿಂದ ಕೊರಗುತ್ತಿರುವ ಅಣ್ಣನ ಸ್ಥಿತಿಯನ್ನು ನೋಡಿದ ನು ಯಾರೂ ಇಲ್ಲದ ಸ್ಥಳದಲ್ಲಿ ಏಕಾಕಿಯಾಗಿ ಕುಳಿತು, ಸಹಿಸಲಾರದ ಸಂಕ ಟದಿಂದ ಕೊರಗುತ್ತಪ್ರಜ್ಞೆ ತಪ್ಪಿದವನಂತಿರುವ ರಾಮನಸ್ಥಿತಿಯನ್ನೂ , ಅವನ ದುಃಖವನ್ನೂ ನೋಡಿ ಲಕ್ಷಣಸಿಗೆ ಬಹಳ ಸಂಕಟವುಂಟಾಯಿತು ಧೀರಮ ನಸ್ಸುಳ್ಳ ಆ ಸೌಮಿತ್ರಿಯು ರಾಮನನ್ನು ಕುರಿತು (ಅಣ್ಣಾ'ಇದೇನು?ಬಹಳ ಚೆನ್ನಾ ಯಿತು'ಸೀನೂ ಹೀಗೆ ಕಾಮಪರವಶನಾಗಿರುವುದೆಂದರೇನು?ನಿನ್ನ ಸಹ ಜವಾದ ಪೌರುಷವನ್ನು ಬಿಡುವುದೆಂದರೇನು? ಧೈರವೆಂಬುದನ್ನು ಆಗಾಗ ಎಷ್ಟೋ ಪ್ರಯತ್ನ ದಿಂದ ಸಾಧಿಸಿಕೊಳ್ಳಬೇಕು ನೀನು ಅದರಲ್ಲಿಯೂ ಈ ಕಾಲದಲ್ಲಿ ಅಂತಹ ದೃಶ್ಯವನ್ನೇ ಬಿಟ್ಟ ಮೇಲೆ ಇನ್ನೇಸಿರುವುದು ಮುಂದೆ ನಡೆಯಬೇಕಾದ ಕಾವ್ಯವನ್ನು ನೋಡು ' ಮನಸ್ಸನ್ನು ಪ್ರಸ ವ್ಯವಾಗಿಸು ' ಕಾಲೋಚಿತವಾದ ಧೈದ್ಯೋಪಾಯಗಳನ್ನವಲಂಬಿಸು | ನಿನಗೆ ಸಹಾಯಕರಾದ ಸುಗ್ರೀವಾದಿಗಳ ಸಾಮರ್ಥ್ಯವನ್ನೂ ಚೆನ್ನಾಗಿ ಪರಾ ಲೋಚಿಸಿ, ನೃತ್ಯಗೊಂಡು, ನಮ್ಮ ಕಾರಸಿದ್ಧಿಗೆ ಸಾಧನಗಳಾದ ದೇವತಾ ಪ್ರಾರ್ಥನಾದಿಕರಗಳಲ್ಲಿ ಮನಸ್ಸಿಡು' ಈಗ ನಾವು ನಡೆಸಬೇಕಾದ ಕಾರ್ ವೇನೆಂಬುದನ್ನು ನೋಡು ಎಲೆವೀರನೆ' ನೀನು ನಾಥನಾಗಿರುವಾಗ ಸೀತೆ ಯನ್ನು ದಕ್ಕಿಸಿಕೊಳ್ಳಬೇಕೆಂದರೆ ಮತ್ತೊಬ್ಬನಿಗೆ ಸಾಧ್ಯವೆ ? ಅಗ್ನಿ ಜ್ವಾಲೆ ಯನ್ನು ಕೈಯಿಂದಮುಟ್ಟಿ,ಕೈಸುಡಿಸಿಕೊಳ್ಳದಿರುವನಾವನುಂಟು?”ಎಂದನು ಹೀಗೆ ಲಕ್ಷಣನು, ಕಾಲೋಚಿತವಾಗಿಯೂ, ಹಿತವಾಗಿಯೂ, ನೀತಿಯುಕ್ತ ವಾಗಿಯೂ, ಧಾರಸಹಿತವಾಗಿಯೂ ಹೇಳಿದ ಮಾತನ್ನು ಕೇಳಿ ರಾಮನು, ಆತನನ್ನು ಕುರಿತು ಎಲೈ ವತ್ರನೆ' ನೀನು ಹೇಳಿದಂತೆ ಉದ್ದೇ