ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೨೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ ೩೦ } ಕಿಷಿಂಧಾಕಾಂಡವ ೧೫೧೭ ತಿಸಿವ ಕಾಠ್ಯವನ್ನು ತಕ್ಕ ಧೈಯ್ಯದಿಂದ ಸಾಧಿಸಬೇಕೆಂಬುದೇ ನ್ಯಾಯ ವು' ಇದರಲ್ಲಿ ಸಂದೇಹವಿಲ್ಲ ಆ ಕಾರೈ ಸಾಧನೆಗೆ ಬೇಕಾದ ಉತ್ತಾಹಾದಿಸಾ ಧನಗಳೂ ಇರಬೇಕಾದುದೇ ನ್ಯಾಯವು ಈಗ ನಾವು ಉದ್ದೇಶಿಸಿರುವ ಕಾರವು ಫಲಿಸಬೇಕಾದ ರೀತಿಯಾವುದೆಂಬುದನ್ನು ಆಲೋಚಿಸಬೇಕಾದು ದೂ ಅವಶ್ಯವಲ್ಲವೆ?” ಎಂದನು ಹೀಗೆಂದು ಹೇಳಿ ರಾಮನು ಪುನಃ ಪ ಬ್ಯಾಕ್ಷಿಯಾದ ಸೀತೆಯನ್ನೇ ಚಿಂತಿಸುತ್ತ, ಬಾಡಿದ ಮುಖದಿಂದ ಲಕ್ಷಣ ನನ್ನು ಕುರಿತು ಎಲೆ ವತ್ರನೆ' ದೇವೇಂದ್ರನು ಭೂಮಿಗೆ ಬೇಕಾದಷ್ಟು, ಮಳೆಯನ್ನು ಸುರಿಸಿ, ತಂಪೇರಿಸಿ, ಪೈರುಗಳಿಗೂ ಉಲ್ಲಾಸವನ್ನು ಕೊಟ್ಟು, ಈ ಗ ಕೃತಕೃತ್ಯನಾಗಿರುವನು ಮೇಫುಗಳೂಕೂಡ ಇಂಪಾದ ಗಂಭೀರವ್ವನಿಗ ಳನ್ನು ತೋರಿಸುತ್ಯ, ಪರತಗಳಮೇಲೆಯೂಮರಗಳಮೇಲೆಯೂ ಸಂಚರಿ ಸಿ, ಬೇಕಾದಷ್ಟು ಮಳೆಯನ್ನೂ ಸುರಿಸಿ,ಆ ಆಯಾಸದಿಂದ ಬಳಲಿದಂತೆ ಈಗ ವಿಶ್ರಾಂತಿಯನ್ನು ಹೊಂದಿರುವುವು, ನೀಲೋತ್ಪಲದಳಗಳಂತೆ ಶ್ಯಾಮವರ್ಣ ವುಳ್ಳ ಮೋಡಗಳು ಇದುವರಗೂ ಸಮಸ್ತ ದಿಕ್ಕುಗಳನ್ನೂ ತಮ್ಮ ಬಣ್ಣದಿಂ ದ ಕಪ್ಪಾಗಿಸಿದ್ದರೂ, ಈಗ ಮದವುಡುಗಿದ ಆನೆಗಳಂತೆ ಶಾಂತವಾಗಿರುವು ವು ಮಳೆಗಾಳಿಯಕೂಡ ಇದುವರೆಗೆ ಜಲಮಿಶ್ರಿತವಾಗಿ, ಗಿರಿಮಲ್ಲಿಗೆ ಮೊ ದಲಾದ ಹೂಗಳ ಸುವಾಸನೆಯನ್ನು ಹರಡುತ್ತ ಅತಿವೇಗದಿಂದ ಎಡೆಬಿಡದೆ ಬೀಸುತಿದ್ದು ಈಗ ಶಾಂತವಾಗಿರುವುದು ಮೇಫುಗಳೂ, ಆನೆಗಳೂ, ನವಿ ಲುಗಳೂ, ಪ್ರವಾಹಗಳೂ ಇದುವರೆಗೆ ಅಟ್ಟಹಾಸದಿಂದ ತೋರಿಸುತಿದ್ದ ಮೊರೆತಗಳೆಲ್ಲವೂ ಈಗ ಅಡಗಿಹೋಗಿರುವುವು ಸುತ್ತಲೂ ಮೇಫುಗಳು ವ ರ್ಮಿಸಿರುವುದರಿಂದ ಕೊಳೆಯಿಲ್ಲದೆ ಸ್ವಚ್ಛವಾಗಿರುವ ಈ ಬೆಟ್ಟದ ತಪ್ಪಲುಗ ಳಲ್ಲಿ ಬಗೆಬಗೆಯ ಬಣ್ಣಗಳುಳ್ಳ ಗೈರಿಕಾದಿಧಾತುಗಳು ಸ್ಪಷ್ಟವಾಗಿ ಕಾಣುತ್ತಿ ರುವುದರಿಂದ, ಇವು ನಾಲ್ಕು ಕಡೆಗಳಿಗೂ ಬಣ್ಣವನ್ನು ಲೇಪಿಸಿ ಅಲಂಕರಿಸಿದಂ ತೆ ಕಾಣುವುದು ಪ್ರಥಮಸಂಭೋಗಕ್ಕೆ ಬಂದ ಸ್ತ್ರೀಯರು ಲಜ್ಜೆಯಿಂದ ಸ್ವ ಲ್ಪ ಸ್ವಲ್ಪವಾಗಿ ತಮ್ಮ ಜಫುನಗಳನ್ನು ತೆರೆಯುವಂತೆ, ಈನದಿಗಳಲ್ಲಿ ಮೆಲ್ಲಮೆಲ್ಲ ಗೆ ನೀರಿಳಿದು, ಅಲ್ಲಲ್ಲಿನ ಮಳಲುದಿಣ್ಣೆಗಳು ಕ್ರಮಕ್ರಮವಾಗಿ ಹೊರಕ್ಕೆ ಕಾಣು ವುವು ಎಲೆ ವತ್ರನೆ' ಈಗಿನ ಶರತ್ಕಾಲವು,ಏಳೆಲೆಬಾಳೆಗಳ ಕೊಂಬೆಗಳಲ್ಲಿಯೂ