ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೨೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ, ೩೦] ಕಿಷಿಂಥಾಕಾಂಡವು ೧೫೨೧ ೧ ನಿಂತಿರುವ ಹಂಸಗಳೆಂಬ ಮೇಖಲೆಗಳಿಂದಲೂ, ಅರಳಿದ ತಾವರೆ ನೈ ಗೀಳೆಗಳೆಂಬ ಪುಷ್ಪಮಾಲಿಕೆಗಳಿಂದಲೂ ಶೋಭಿತಗಳಾದ ಈ ನಡೆಬಾವಿ ಗಳು ಆಭರಣಾಲಂಕೃತರಾದ ಉತ್ತಮಸಿಯರಂತೆ ಕಾಣುವುವು ಪ್ರಾ ತಃಕಾಲಗಳಲ್ಲಿ ಗೋಪಾಂಗನೆಯರು ಮೊಸರನ್ನು ಕಡೆಯುವುದರಿಂದುಂ ಟಾದ ಶಬ್ದವೂ, ಗೋವುಗಳ ಧ್ವನಿಯೂ, ಕಾಡಿನಲ್ಲಿ ಹೊರಟುಬರುವ ವೇ ಣುಧ್ವನಿಯೂ ಒಟ್ಟುಗೂಡಿ, ಬೆಳಗಿನ ಗಾಳಿಯಿಂದ ಹೆಚ್ಚಿಸಲ್ಪಟ್ಟು, ಸಮ ಸದಿಕ್ಕುಗಳನ್ನೂ ತುಂಬುವಂತಿರುವುದು ಇಲ್ಲಿನ ನದೀತೀರಗಳು, ಮಂದ ಮಾರುತದಿಂದಲುಗಿಸಲ್ಪಟ್ಟ, ಹೊಸಹೂಗಳ ಗೊಂಚಲಿನಿಂದ ತುಂಬಿದ ಈ ನೊದೆಹುಲ್ಲುಗಳಿಂದ, ಬಿಳೀಪಟ್ಟೆ ಯ ದುಕೂಲವನ್ನುಟ್ಟ ಸ್ತ್ರೀಯರ ಜಥುನ ಗಳಂತೆ ಪ್ರಕಾಶಿಸುವುವು ತೋಟಗಳಲ್ಲಿ ಮಕರಂದವಾನವನ್ನು ಮಾಡಿ ಮದದಿಂದ ಕೊಬ್ಬಿ, ತಮ್ಮ ತಮ್ಮ ಪ್ರಿಯೆಯರೊಡಗೂಡಿರುವ ಈ ಭಮ ರಗಳು, ಅಲ್ಲಲ್ಲಿ ತಾವರ ಮತ್ತು ಬಂದುಗೆಹೂಗಳ ಧೂಳಿಯಿಂದ ಹೊಂಬ ಇವಾದ ಮೈಯುಳ್ಳವುಗಳಾಗಿ, ಈಗಿನ ಗಾಳಿಯಲ್ಲಿರುವ ಸುವಾಸನೆಗಾಗಿ ಅದನ್ನೇ ಹಿಂಬಾಲಿಸಿ ಹೋಗುತ್ತಿರುವುವು ಸ್ವಚ್ಛವಾದ ಈಗಿನ ನದೀಜಲ ವೂ, ಅರಳಿದ ನೈದಿಲೆಯೂ, ಕೌಂಚಪಕ್ಷಿಗಳ ಕಿವಿಗಿಂಪಾದ ಧ್ವನಿಯೂ, ಚೆನ್ನಾಗಿ ಪಕ್ಷವಾದ ಹೊಲಗದ್ದೆಗಳ ಪೈರುಗಳೂ, ಮೆಲ್ಲಗೆ ಬೀಸುವ ಗಾ ಳಿಯೂ, ಸ್ವಚ್ಛವಾದ ಚಂದ್ರಬಿಂಬವೂ, ಈಗ ಮಳಗಾಲವು ಕಳೆದು ಶರ ತಾಲವು ಬಂದೊದಗಿರುವುದನ್ನು ಸ್ಪಷ್ಟವಾಗಿ ತಿಳಿಸುತ್ತಿರುವುವು ರಾತ್ರಿ ಯಲ್ಲಿ ತಮ್ಮ ಪ್ರಿಯರೊಡನೆ ಸಂಭೋಗಿಸಿ, ಬೆಳಗಾದಮೇಲೆ ಆಯಾಸದಿಂ ದ ಮೆಲ್ಲಗೆ ನಡೆದುಹೋಗುವ ಸಿಯರಂತೆ, ಈ ನದಿಗಳತಮ್ಮಲ್ಲಿ ಥಳ ಧಳಿಸುವ ಮೀನುಗಳೆಂಬ ಮೇಖಲೆಗಳನ್ನು ತೋರಿಸುತ್ತ, ಮಂದವಾಗಿ ಪ್ರ ವಹಿಸುವುವು ಚಕ್ರವಾಕಗಳಿಂದಲೂ, ಪಾಚಿಗಳಿಂದಲೂ, ದುಕೂಲದಂತಿ ರುವ ನೊದೆಯಹೂಗಳಿಂದಲೂ ಶೋಭಿಸುವ ಈ ನದೀಮುಖಗಳು, ಗೋರೋಚನದ ತಿಲಕದಿಂದಲೂ, ಕಪೋಲಪತ್ರಗಳಿಂದಲೂ ಅಲಂಕೃ ತವಾದ ಸ್ತ್ರೀಯರ ಮುಖದಂತೆ ಕಾಣುವುವು ನೋಡು ಅರಳಿದ ಗೋರಂ ಟೆಯ ಹೂಗಳಿಂದಲೂ, ಹಾಲೆಯ ಹೂಗಳಿಂದಲೂ ಚಿತ್ರಿತವಾಗಿ, ಭ್ರಮ 96