ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೨೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೫೩೨ ಶ್ರೀಮದ್ರಾಮಾಯಣವು [ಸರ್ಗ ೩೨. ಉಕ್ಕುತ್ತಿರುವುದು, ತನ್ನ ದೃಷ್ಟಿಯಿಂದಲೇ ನಮ್ಮ ವಾನರರೆಲ್ಲರನ್ನೂ ದ ಹಿಸಿಬಿಡುವಂತೆ ಬಾಗಿಲಲ್ಲಿ ಕಾದಿರುವನು ಎಲೆ ವಾನರೇಂದ್ರನೆ ! ನೀನು ಈಗಲೇ ನಿನ್ನ ಮಗನಾದ ಅಂಗದನನ್ನೂ, ನಿನ್ನ ಬಂಧುಗಳನ್ನೂ ಸಂಗಡಕರೆ ದುಕೊಂಡು ಲಕ್ಷಣನಬಳಿಗೆ ಹೋಗಿ, ಅವನಿಗೆ ಸಾಷ್ಟಾಂಗಪ್ರಣಾಮವ ನ್ನು ಮಾಡಿ ಅವನಕೋಪವನ್ನು ನೀಗಿಸು 'ರಾಮನು ಹೇಳಿ ಕಳುಹಿಸಿದ ಮಾ ತನ್ನು ಜಾಗರೂಕತೆಯಿಂದ ಶೀಘ್ರದಲ್ಲಿ ನಡೆಸಿಬಿಡು ಮರಾದೆಯನ್ನು ಬಿ ಡದೆ ಕಾಪಾಡಿಕೊಳ್ಳುವನಾಗು' ಮಾಡಿದ ಪ್ರತಿಜ್ಞೆಯನ್ನು ತಪ್ಪದೆ ನೆರವೆ ರಿಸು 'ಎಂದರು ಇಲ್ಲಿಗೆ ಮೂವತ್ತೊಂದನೆಯಸರ್ಗವು

  • ಅಂಗದನ ಮಾತನ್ನು ಕೇಳಿ ಸುಗ್ರೀವನು ಹಾಸಿಗೆ ) -w<3 ಯಿಂದೆದ್ದು ಬರಲು, ಹನುಮಂತನು ಸುಗ್ರೀವನಿಗೆ •

ಹಿತೋಪದೇಶವನ್ನು ಮಾಡಿದುದು - ಹೀಗೆ ಅಂಗದನು ಪ್ರಮುಖರಾದ ವಾನರಮಂತ್ರಿಗಳೊಡನೆ ಬಂದು, ಲಕ್ಷ್ಮಣನು ಕುಪಿತನಾಗಿ ಬಂದಿರುವ ವಿಷಯವನ್ನು ತಿಳಿಸಿದಮೇಲೆ, ಸುಗ್ರೀ ವನಿಗೆ ಅದರಲ್ಲಿ ಗಮನವುಂಟಾಯಿತು ಮನಸ್ಸಿನಲ್ಲಿ ಭಯವೂ ಹುಟ್ಟಿತು ಮೆ ಲ್ಲಗೆ ಆಸನವನ್ನು ಬಿಟ್ಟು ಎದ್ದು ಬಂದವು ಆದರೆ ಸುಗ್ರೀವನು ಮಂತ್ರಾಲೋ ಚನೆಯಲ್ಲಿ ಕುಶಲನಾದುದರಿಂದ, ಮೊದಲು ತನ್ನ ಮನಸ್ಸಿನಲ್ಲಿಯೇ ನ್ಯೂನಾ ತಿರೇಕಗಳನ್ನು ಚೆನ್ನಾಗಿ ನಿಶ್ಚಯಿಸಿಕೊಂಡು, ಮಂತ್ರಾಲೋಚನೆಗಳ ವಿಷ ಯದಲ್ಲಿ ಬಹುಕಾಲದ ಅನುಭವವುಳ್ಳವರಾಗಿಯೂ, ಮಂತ್ರಾಲೋಚನೆಯ ರೀತಿಯನ್ನು ಚೆನ್ನಾಗಿ ಬಲ್ಲವರಾಗಿಯೂ ಇರುವ ಆ ಮಂತ್ರಿಗಳನ್ನು ಕುರಿ ತು 'ಎಲೈ ಅಮಾತ್ಯತೆ'ನಾನು ರಾಮನ ವಿಷಯದಲ್ಲಿಯಾಗಲಿ, ಲಕ್ಷಣ ನ ವಿಷಯದಲ್ಲಿಯಾಗಲಿ ಎಂದಾದರೂ ತಪ್ಪಮಾತುಗಳನ್ನಾಡಿದವನಲ್ಲ ಅ ವರಿಗೆ ಯಾವವಿಧದಲ್ಲಿಯೂ ಕೆಡುಕುಮಾಡಿದವನೂ ಅಲ್ಲ ಹೀಗಿದ್ದರೂ ರಾ ಮನ ತಮ್ಮನಾದ ಆ ಲಕ್ಷಣನು, ಕೋಪಗೊಂಡಿರುವುದಕ್ಕೆ ಕಾರಣವೇ ನೆಂದು ಚಿಂತಿಸುತ್ತಿರುವೆನು ನನ್ನ ಮೇಲೆ ವೈರದಿಂದ ಸಮಯವನ್ನು ಕಾದಿ ದ್ದ ಯಾರೋ ದುರಾತ್ಮರು,ಆ ಲಕ್ಷ್ಮಣನಲ್ಲಿಗೆಹೋಗಿ ನನ್ನಲ್ಲಿ ಇಲ್ಲದ ದೋ