ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೨೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೫೭೩ ಸರ್ಗ, ೩೨] ಕಿಷಿಂಧಾಕಾಂಡವು. ಷಗಳನ್ನಾ ರೋಪಿಸಿ ಹೇಳಿರಬಹುದು, ಹೇಗಾದರೂ ಆಗಲಿ : ಮೊದಲು ನೀವೆಲ್ಲರೂ ಹೋಗಿ, ನಿಮ್ಮ ನಿಮ್ಮ ಬುದ್ಧಿಚಾತುರವನ್ನು ಪಯೋಗಿಸಿ ಅವರ ನಿಶ್ಚಯವನ್ನು ಕ್ರಮವಾಗಿ ತಿಳಿದು ಬರಬೇಕು ಅವನಿಗೆ ಕೋಪವುಂಟಾ ದುದಕ್ಕೆ ಕಾರಣವೇನು' ಅದಕ್ಕಾಗಿ ಈಗ ನಾವು ಮಾಡಬೇಕಾದುದೇನು? ಎಂಬಿವೆಲ್ಲವನ್ನೂ ಮೆಲ್ಲಮೆಲ್ಲಗೆ ನಿಮ್ಮ ಚಾತುರದಿಂದ ಚೆನ್ನಾಗಿ ನಿಶ್ಚಯಿಸಿ ತಿಳಿದುಕೊಳ್ಳಬೇಕು ಎಲೆ ಮಂತ್ರಿಗಳೆ' ನಾನು ಈಗ ಭಯದಿಂದ ಹೊರ ಗೆದ್ದು ಬಂದೆನೆಂದು ತಿಳಿಯಬೇಡಿರಿ' ಲಕ್ಷಣನಿಂದಾಗಲಿ,ರಾಮನಿಂದಾಗಲಿ ನನಗೆ ಸ್ವಲ್ಪವೂ ಭಯವಿಲ್ಲ ಆದರೆ ತನ್ನಲ್ಲಿ ಸ್ನೇಹವುಳ್ಳವರು ನಿಷ್ಕಾರಣ ವಾಗಿ ಕೋಪಗೊಂಡು ಬಂದಾಗ ಎಂತವನಿಗಾದರೂ ಮನಸ್ಸಿನಲ್ಲಿ ಕಳವಳ ವುಂಟಾಗದೆ ಇರದು ಸ್ನೇಹಿತರನ್ನು ಸಂಪಾದಿಸುವುದೇನೋ ಸುಲಭವೇ? ಆ ಸ್ನೇಹವನ್ನು ಕಾಪಾಡಿಕೊಳ್ಳುವುದು ಬಹಳಕಷ್ಟವು ಯಾರ ಮನಸ್ಕೂ ಒಂದೇ ಸ್ಥಿರವಾಗಿ ನಿಲ್ಲುವುದಲ್ಲ ಅತ್ಯಲ್ಪ ಕಾರಣದಿಂದಲೇ ಪರಸ್ಪರಪ್ರಿತಿ ಯು ಕಟ್ಟು ಹೋಗುವುದು ಈ ಕಾರಣದಿಂದ ನಾನು ಹೆದರುತ್ತಿರುವೆ ನು ಮಹಾತ್ಮನಾದ ಆ ರಾಮನು ನನಗೆ ಮಾಡಿರುವ ಮಹೋಪಕಾರಕ್ಕೆ ತಕ್ಕ ಪ್ರತ್ಯುಪಕಾರವನ್ನು ಮಾಡಬೇಕೆಂದರೆ ಎಂದಿಗೂ ನನಗೆ ಸಾಧ್ಯವಲ್ಲ ಇದಕ್ಕಾಗಿ ನನ್ನ ಮನಸ್ಸು ಕಳವಳಿಸುತ್ತಿರುವುದು” ಎಂದನು ಸುಗ್ರೀವ ನು ಹೇಳಿದ ಈ ಮಾತುಗಳನ್ನು ಕೇಳಿ, ಕಷಿಪುಂಗವನಾದ ಹನುಮಂತನು ಆ ಮಂತ್ರಿಗಳನಡುವೆ ಸ್ವಬುದ್ಧಿಯಿಂದಾಲೋಚಿಸಿ, ಸುಗ್ರೀವನನ್ನು ಕುರಿತು ಹೇಳುವನು (“ಎಲೈ ವಾನರೇಂದ್ರನೆ' ನಿನಗೆ ಮಹೋಪಕಾರವನ್ನು ಮಾಡಿ ನಿನ್ನಲ್ಲಿ ಸ್ನೇಹವನ್ನು ಬಳೆಸಿದ ಗುಣಾಢನಾದ ಮಿತ್ರನನ್ನು ನೀನು ಮರೆಯ ದಿರುವುದೇನೂ ಆಶ್ಚರವಲ್ಲ ಇದು ನಿನಗೆ ಸಹಜಗುಣವಾಗಿಯೇ ಇರುವ ದು ನಿನ್ನ ಪ್ರೀತಿಗಾಗಿಯೇ ವೀರನಾದ ರಾಮನು,ಸ್ವಲ್ಪಮಾತ್ರವೂ ಭಯವಿ ಲ್ಲದೆ ಇಂದ್ರನಿಗೆಣೆಯಾದ ಪರಾಕ್ರಮವುಳ್ಳ ಆವಾಲಿಯನ್ನು ಕೊಂದನಲ್ಲವೇ? ಅಷ್ಟು ಪ್ರೇಮವುಳ್ಳ ರಾಮನು ಮನಃಪೂರಕವಾಗಿ ನಿನ್ನಲ್ಲಿ ಕೋಪಗೊಂಡಿ ರಲಾರನು ಏನೋ ಪ್ರಣಯಕೋಪದಿಂದ ಲಕ್ಷಣವನ್ನು ನಿನ್ನಲ್ಲಿಗೆ ಕಳು ಹಿಸಿರುವನೆಂಬುದರಲ್ಲಿ ಸಂದೇಹವೇ ಇಲ್ಲ ಆದರೆ ನಿನ್ನಲ್ಲಿಯೂ ತಪ್ಪಿಲ್ಲವೆಂ