ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೨೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೫೩ ಸರ್ಗ, ೩೩.] ಕಿಷಿಂಧಾಕಾಂಡವು ಮನೆಯೂ ಬಿಳೀಮೇಘದಂತೆ ಪ್ರಕಾಶಿಸುತಿತ್ತು: ಒಂದೊಂದುಮನೆಯ ಅನೇಕ ದಿವ್ಯಪುಷ್ಪಮಾಲಿಕೆಗಳಿಂದಲಂಕೃತನಾಗಿದ್ದಿತು ಒಂದೊಂದು ಮ ನೆಯಲ್ಲಿಯೂ ನೂರಾರು ಮಂದಿ ಉತ್ತಮಸಿಯ ನೆರದಿದ್ದರು ಒಂ ದೊಂದು ಮನೆಯ ಧನಧಾನ್ಯ ಸಮೃದ್ಧವಾಗಿ ಶೋಭಿಸುತ್ತಿತ್ತು ಇವೆಲ್ಲವ ನ್ನೂ ನೋಡುತ್ತ ಮುಂದೆ ಹೋಗಿ, ಕೊನೆಗೆ ಸುಗ್ರೀವನ ಅರಮನೆಯನ್ನೂ ಕಂಡನು ಅದು ಸಾಕ್ಷಾನ್ಮಹೇಂದ್ರಭವನದಂತೆಯೇ ಅತಿಮನೋಹರವಾಗಿ, ಇತರರಿಗೆ ಪ್ರವೇಶಿಸಲಸಾಧ್ಯವಾದ ಬಿಳೀಬ್ರಾಕಾರದಿಂದ ಸುತ್ತಲೂ ಪರಿ ವೃತವಾಗಿತ್ತು ಕೈಲಾಸತಿಖರದಂತೆ ಬಿಳುಪಾದ ಅನೇಕಪ್ರಾಕಾರಶಿಖರ ಗಳಿಂದಲೂ, ಬೇಕುಬೇಕಾದ ಫಲವೃಕ್ಷಗಳಿಂದಲೂ, ಹೂಗಿಡಗಳಿಂದಲೂ, ನಿಬಿಡವಾಗಿತ್ತು. ಸಾಮಾನ್ಯವೃಕ್ಷಗಳ ಅಲ್ಲದೆ, ವಾಲಿಗಾಗಿ ದೇವೇಂದ್ರನು ಅನುಗ್ರಹಿಸಿಕೊಟ್ಟ, ಅನೇಕವ್ಯವೃಕ್ಷಗಳೂ ತುಂಬಿದ್ದುವು ಈ ವೃಕ್ಷಗಳಿಂ ದ ಅಲ್ಲಿ ಒಂದು ಅಪೂಶೋಭೆಯು ತುಳುಕುತಿತ್ತು ಕರೀಮೇಫುಗಳಂತೆ ಹಸುರಾಗಿ ಕಾಣುತಿದ್ದ ಆ ದಿವ್ಯವೃಕ್ಷಗಳೆಲ್ಲವೂ ದಿವ್ಯಫಲಗಳಿಂದಲ , ದಿವ್ಯ ಪುಷ್ಪಗಳಿಂದಲೂ ತುಂಬಿ, ಶೀತಲಚ್ಯಾಯಯುಳ್ಳವುಗಳಾಗಿದ್ದುವು ಆ ಆರ ಮನೆಯ ಬಾಗಿಲಲ್ಲಿ ಮಹಾಬಲಾಡ್ಯರಾದ ಕಪಿಗಳು ಶಸ್ತ್ರಧಾರಿಗಳಾಗಿ ಕಾವ ಲಿರುತಿದ್ದರು ಅನೇಕದಿವ್ಯಮಾಲಕಗಳಿಂದಲೂ ಚಿನ್ನದ ತೋರಣಗಳಿಂದ ಲೂ ಅಲಂಕೃತವಾಗಿ, ಅತಿಶುಭ್ರವಾಗಿ,ನೇತ್ರಾನಂದಕರವಾಗಿದ್ದ ಆ ಸುಗ್ರೀ ವನ ಅರಮನೆಯನ್ನು ಪ್ರವೇಶಿಸಿದನು ಸೂರನು ಮಹಾಮೇಫುದನಡುವೆ ನುಗ್ಗು ವಂತೆ,ಲಕ್ಷಣವು ಅಲ್ಲಿ ಯಾರತಡೆಯೂ ಇಲ್ಲದೆ ಧಾರಾಳವಾಗಿ ಬಾ ಗಿಲನ್ನು ದಾಟಿ, ಅನೇಕಜನಸಮಹದಿಂದ ತುಂಬಿದ ಆ ಅರಮನೆಯ ಏಳು ತೊಟ್ಟಿಗಳನ್ನೂ ಅತಿಕ್ರಮಿಸಿಹೋದನು ಕೊನೆಗೆ ಅತಿರಹಸ್ಯವಾದ ಸುಗ್ರಿ ವನ ಅಂತಃಪುರವನ್ನೂ ಪ್ರವೇಶಿಸಿದನು ಚಿನ್ನ ಬೆಳ್ಳಿಯ ಮಂಚಗಳಿಂದಲೂ, ಬಗೆಬಗೆಮ ಉತ್ತಮಾಸನಗಳಿಂದಲೂ, ಬೆಲೆಯುಳ್ಳ ಹಾಸಿಗೆಗಳಿಂದಲೂ ಶೋಭಿತವಾದ ಆ ಅಂತಃಪುರವನ್ನು ಪ್ರವೇಶಿಸುತ್ತಿರುವಾಗಲೇ, ಕಿವಿಗಿಂಪಾ ದ ಸಂಗೀತಸ್ವರವು ಇವನ ಕಿವಿಗೆ ಬಿದ್ದಿತು ಆ ಸಂಗೀತವು ಮನೋಹರವಾದ ಶ್ರುತಿಯಿಂದಲೂ, ತಂತಿಯಿಂದ ನುಡಿಯುವ ನಾನಾವಿಧಸ್ವರಗಳಿಂದಲೂ 9?