ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೨೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ ೩೩ ].. ಕಿಷಿಂಧಾಕಾಂಡವ ೧೩೯ ಘೋಷವೂ ಸುಗ್ರಿವನ ಕಿವಿಗೆ ಬಿದ್ದುದರಿಂದ, ಲಕ್ಷಣನು ಕೋಪದಿಂದ ಬಂದಿರುವನೆಂಬುದು ಅವನ ಮನಸ್ಸಿಗೆ ಚೆನ್ನಾಗಿ ನಿರ್ಧರವಾಯಿತು ಆಗಲೇ ಅವನ ಮುಖವು ಬಾಡಿಹೋಯಿತು ಆಗ ಸುಗ್ರೀವನು ಭಯದಿಂದ ಚಂಚಲ ವಾದ ಮನಸ್ಸುಳ್ಳವನಾದರೂ, ತನ್ನ ಮನಸ್ಸನ್ನು ಸ್ವಾಧೀನಪಡಿಸಿಕೊಂಡು ಮುಂದೆ ತನಗೆ ಹಿತಕರವಾದ ರೀತಿಯನ್ನೂ ಚಿಂತಿಸಿ ಸಮೀಪದಲ್ಲಿದ್ದ ತಾರೆಯ ನ್ನು ಕುರಿತು 'ಎಲೆ ಸುಳ್ಳು' ಲಕ್ಷ್ಮಣನ ಮನಸ್ಸಾದರೋ ಸ್ವಾಭಾವಿಕವಾಗಿ ಯೇ ಬಹಳಮೃದುವಾದುದು ಹೀಗಿದ್ದರೂ ಅವನು ನಿಷ್ಕಾರಣವಾಗಿ ಕೋಪ ಗೊಂಡು ಬಂದಿರುವಂತಿದೆ ಇದಕ್ಕೆ ಕಾರಣವೇನಿರಬಹುದು? ರಾಜಕುಮಾರ ನಾದ ಆ ಲಕ್ಷಣವು ಹೀಗೆ ಕುಪಿತನಾಗಿ ಬರುವುದಕ್ಕೆ ನೀನು ಎಣಿಸಿರುವ ಕಾರಣವೇನು? ಲಕ್ಷಣನು ಸಾಮಾನ್ಯನಲ್ಲಿ ಪುರುಷಸತ್ತ ಮನು' ಎಂದಿಗೂ ಆತನು ನಿಷ್ಕಾರಣವಾಗಿ ಕೂಪಿಸುವನಲ್ಲ ನಾವೇನಾದರೂ ಈ ಲಕ್ಷಣ ನಿಗೆ ಆಪ್ರಿಯವನ್ನು ಮಾಡಿದುದಾಗಿ ನಿನಗೆ ಜ್ಞಪ್ತಿಯುಂಟೆ? ಚೆನ್ನಾಗಿ ನಿನ್ನ ಮನಸ್ಸಿನಲ್ಲಿ ಪಾಲೋಚಿಸಿ, ನಿನ್ನ ಬುದ್ಧಿಚಾತುರದಿಂದ ನಿನಗೆ ತೋರಿದು ದನ್ನು ಹೇಳು ಅದಕ್ಕಿಂತಲೂ ಈಗ ನೀನೇ ಆ ಲಕ್ಷ ಇನಬಳಿಗೆ ಹೋಗಿ ಆತ ನನ್ನು ನೋಡಿಬರುವುದು ಯುಕ್ತವಾಗಿರುವುದು ನೀನೇ ಮೊದಲು ಆತನನ್ನು ನೋಡಿ ಸಾಮವಾಕ್ಯದಿಂದ ಪ್ರಸನ್ನ ನಾಗಿ ಮಾಡಿರುವುದೇ ಉತ್ತಮವು. ಡೊಡ್ಡವರು ಯಾವಾಗಲೂ ಸ್ತ್ರೀಯರಲ್ಲಿ ಅಷ್ಟು ತೀವ್ರವಾಗಿ ನಡೆಯಲಾ ರರು ಆದುದರಿಂದ ನಿನ್ನನ್ನು ನೋಡಿದೊಡನೆ ಲಕ್ಷಣನ ಮನಸ್ಸು ಪ್ರಸ ವ್ಯವಾಗಬಹುದು ಆತನ ಕೋಪವೂ ಅಡಗಿಹೋಗುವುದು ಮೊದಲು ನೀನು ಹೋಗಿ ಆ ಲಕ್ಷಣನಿಗೆ ಸಾಂತ್ವವಾಕ್ಯಗಳನ್ನು ಹೇಳಿ ಇದರಿಂದ ಅವನ ಮನಸ್ಸು ಪ್ರಸನ್ನ ವಾದರೆ, ಆಮೇಲೆ ನಾನು ಹೋಗಿ ನೋಡುವೆನು”ಎಂದನು ಈ ಉಪಾಯವೇ ತಾರೆಗೂ ಉಚಿತವೆಂದು ತೋರಿತು ಆಗಲೇ ಅವಳು ಆ ಕ್ಲಿಂದ ಹೊರಟಳು ರಾತ್ರಿಯೆಲ್ಲವೂ ಸುಗ್ರೀವನೊಡನೆ ರತಿಕ್ರೀಡೆ ಯಿಂದುಂ ಟಾದ ಆಯಾಸದಿಂದ ಬೇಗ ನಡೆಯಲಾರದೆ ತಪ್ಪಹೆಜ್ಜೆಯನ್ನಿಡುತ್ತ, ಪಾನ ಮದದಿಂದ ತೊಳಲುವ ಕಣ್ಣಾಲೆಯುಳ್ಳವಳಾಗಿ, ಸ್ವಲ್ಪವಾಗಿ ಸಡಿಲಿಗೆ ಒಡ್ಯಾಣದಿಂದಲೂ,ಎದೆಕಟ್ಟಿನಿಂದಲೂ ಕೂಡಿದವಳಾಗಿ, ಬಗ್ಗಿ ದಮೈಯ್ಯು