ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೨೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೫೪೪ ಶ್ರೀಮದ್ರಾಮಾಯಣವು [ಸರ್ಗ ೩೪, ( ರಾಮನು ಹೇಳಿಕಳುಹಿಸಿದ ಮಾತನ್ನು ಲಕ್ಷಣನು ) *( ಸುಗ್ರೀವನಿಗೆ ತಿಳಸಿದುದು ಹೀಗೆ ತಡೆಯಿಲ್ಲದೆ ಅಂತಃಪುರಕ್ಕೆ ಬಂದು ಕೋಪದಿಂದ ನಿಂತಿದ್ದ ಲ ಕ್ಷಣವನ್ನು ಕಂಡೊಡನೆ, ಸುಗ್ರೀವನ ಮನಸ್ಸು ಭಯದಿಂದ ತತ್ತಳಿಸಿತು ಅ ಜ್ಞನ ವ್ಯಸನಕ್ಕಾಗಿ ಮನಸ್ಸಿನಲ್ಲಿ ಕೊರಗುತ್ತ, ಕೋಪದಿಂದ ನಿಟ್ಟುಸಿರುಬಿ ಡುತ್ತಿರುವ, ಆತನನ್ನು ಕಂಡೊಡನೆ ಸುಗ್ರೀವನು ಥಟ್ಟನೆ ತಾನು ಕುಳಿತಿದ್ದ ಸ್ವರ್ಣಪೀರದಿಂದೆದ್ದು ಬಂದು ಉತ್ಸವಾರವಾಗಿ ಅಲಂಕರಿಸಿ ನಿಲ್ಲಿಸಿವ್ಯ ಇಂ ಪ್ರಧ್ವಜದಂತೆ ಸ್ತಬ್ಬ ನಾಗಿ ನಿಂತಿದ್ದನು ಆಕಾಶದಲ್ಲಿ ಪೂರ್ಣಚಂದ್ರನು ಉ ದಯಿಸಿದೊಡನೆ ಅವನನ್ನು ಹಿಂಬಾಲಿಸಿ ಬರುವ ನಕ್ಷತ್ರಗಳಂತೆ,ರುಮೆಮೊದ ಲಾದ ವಾನರಸೀಯರೂ ಆ ಸುಗ್ರೀವನೊಡನೆ ಧಿಗ್ಗನೆ ಎದ್ದು ನಿಂತರು. ಪಾನಮದದಿಂದ ಕೆಂಪೇರಿದ ಕಣ್ಣುಳ್ಳ ಆ ಸುಗ್ರಿವನು, ಲಕ್ಷನಿಗಿದಿರಾಗಿ ಬಂದು ದೊಡ್ಡ ಕಲ್ಪವೃಕ್ಷದಂತೆ ಅವನಮುಂದೆ ಕೈಮುಗಿಯುತ್ತ ನಿಂತಿದ್ದನು ನಕ್ಷತ್ರಗಳನಡುವೆ ಶೋಭಿಸುವ ಚಂದ್ರನಂತೆ ಅನೇಕಸೀಯರ ಮಧ್ಯದಲ್ಲಿ ರುಮೆಯೊಡಗೂಡಿ ಬಂದುನಿಂತಿದ್ದ ಸುಗ್ರೀವನನ್ನು ನೋಡಿ ಲಕ್ಷಣನು, ಅತಿಕೋಪದಿಂದ (ಎಲೆ ಸುಗ್ರೀವಾ' ಲೋಕದಲ್ಲಿ ಬಲವಂತನಾಗಿಯೂ, ಕುಲೀನನಾಗಿಯೂ, ದಯಾಳುವಾಗಿಯೂ, ಜಿತೇಂದ್ರಿಯನಾಗಿಯೂ, ಕೃ ತಜ್ಞನಾಗಿಯೂ,ಸತ್ಯಸಂಧನಾಗಿಯೂ ಇರುವ ರಾಜನೇ ಎಲ್ಲರಿಂದಲೂಗೌ ರವಿಸಲ್ಪಡುವನೇ ಹೊರತು, ಯಾವರಾಜನು ಆಧರನಿರತನಾಗಿ,ತನಗೆ ಮೊ ದಲು ಉಪಕಾರಮಾಡಿದ ಮಿತ್ರರಿಗೆ ಕೊಟ್ಟ ಮಾತನ್ನು ತಪ್ಪಿನಡೆಯುವ ನೋ, ಅವನಿಗಿಂತಲೂ ಪರಮಭುತುಕನಾವನುಂಟು?ಒಂದು ಕುದುರೆಯ ವಿಷಯವಾಗಿ ಸುಳ್ಳಾಡಿದರೆ ನೂರುಕುದುರೆಗಳನ್ನು ಕೊಂದದೋಷವು ಬ ರುವುದು ಒಂದು ಗೋವಿನವಿಷಯವಾಗಿ ಸುಳ್ಳಾಡಿದವನಿಗೆ ಸಾವಿರಗೋ ವುಗಳನ್ನು ಕೊಂದ ಪಾಪವು ಬರುವುದು ಒಬ್ಬ ಪುರುಷನ ವಿಷಯವಾಗಿ ಸುಳ್ಳಾಡಿದವನು, ಆತ್ಮಹತ್ಯೆಯಿಂದಲೂ, ಸ್ವಜನಹತ್ಯೆಯಿಂದಲೂ ಉಂ ಟಾಗುವ ಮಹಾದೋಷಕ್ಕೆ ಭಾಗಿಯಾಗುವನು. ಇನ್ನು ಮಹಾಪುರುಷನಾ ದ ರಾಮನವಿಷಯದಲ್ಲಿಯೇ ಸುಳ್ಳಾಡಿದಮೇಲೆ ಕೇಳಬೇಕೆ ? ಮಿತ್ರನಿಂದ