ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೨೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೫೪ ಸರ್ಗ ೩೫ ] ಕಿಷಿಂಧಾಕಾಂಡವು. ದ ಲಾಭಗಳನ್ನೂ ಅಷ್ಟೆಂದು ಹೇಳಲಸಾಧ್ಯವು ಆತನ ಅನುಗ್ರಹದಿಂದ ಲೇ ಇವನಿಗೆ ಶಾಶ್ವತವಾದ ಕೀರ್ತಿಯ ಲಭಿಸಿತು ಸ್ಥಿರವಾದ ವಾನರರಾಜ್ಯ ವೂ ಕೈಸೇರಿತು ಅಗಲಿ ಹೋದ ತನ್ನ ಪತ್ನಿ ಯಾದ ರುಮೆಯನ್ನೂ ಪಡೆದನು ಬಹುಕಾಲದಿಂದ ಕಣ್ಣಿಟ್ಟಿದ್ದ ನನ್ನನ್ನೂ ಕೈಸೇರಿಸಿಕೊಂಡನು ಇವನುಮೋದ ಲು ಬಹುಕಾಲದವರೆಗೆ ಕಷ್ಟಪಡುತಿದ್ದವನಾದುದರಿಂದ, ಈಗ ಈ ಮಹಾ ಸುಖವನ್ನು ಹೊಂದಿ ಮೈ ಮರೆತಿರುವನು ಮೇನಕೆಯಲ್ಲಿ ಮೋಹಗೊಂಡ ವಿಶ್ವಾಮಿತ್ರನಂತ ಕಳೆದುಹೋದ ಕಾಲವನ್ನೂ ತಿಳಿಯದಿರುವನು ಲಕ್ಷ ಣಾ' ಪೂರದಲ್ಲಿ ಧಾತ್ಮನಾದ ವಿಶ್ವಾಮಿತ್ರನು ಮೇನಕೆಯೊಡನೆ ಮನ್ಮಥಸುಖದಲ್ಲಿ ಬಿದ್ದು ಹತ್ತು ವರುಷಗಳನ್ನು ಒಂದುಹಗಲಿನಂತೆ ಎಣಿ ಸಿದನಲ್ಲವ? ತೇಜಸ್ವಿಯಾದ ವಿಶ್ವಾಮಿತ್ರನು ಕಾಲಜ್ಞರಲ್ಲಿ ತಾನೇ ಮೇ ಲೆನಿಸಿಕೊಂಡಿದ್ದರೂ, ಕಾಮಪರವಶನಾಗಿದ್ದ ಕಾಲದಲ್ಲಿ ಕಾಲಪರಿಮಾಣ ವನ್ನೇ ತಿಳಿಯದೆ ಹೋದನು ಯೋಗಿಗಳೇ ಈ ಸ್ಥಿತಿಯಲ್ಲಿರುವಾಗ ಬೇರೆಯ ವರ ಸಂಗತಿಯನ್ನು ಹೇಳಬೇಕಾದುದೇನು?ಬಹುಕಾಲದಿಂದ ಕಷ್ಟದಲ್ಲಿ ಸಿಕ್ಕಿ ಕಂದಿಕುಂದಿದ ಈತನು, ಪ್ರಾಣಿಸಾಮಾನ್ಯಕ್ಕೆ ಶರೀರಜನ್ಯವಾದ ಮನ್ಮಥ ವ್ಯಾಪಾರದಲ್ಲಿ ಈಗಲೇ ಬಿದ್ದಿರುವನು ಇಷ್ಟರಲ್ಲಿ ಈತನಿಗೆ ತೃಪ್ತಿಯುಂಟಾ ಗುವುದೆಂದರೇನು?ಸ್ವಭಾವದಿಂದಲೇ ಚಪಲನಾದ ಈ ವಾನರನನ್ನು ನೀನು ಮನ್ತಿ ಸಬೇಕು ಲಕ್ಷಣಾ! ಸುಗ್ರೀವನ ನಿಜವಾದ ಅಭಿಪ್ರಾಯವೇನೆಂಬು ದನೂ ತಿಳಿಯದೆ, ಹಿಂಯ ಮುಂದುನೋಡದೆ,ಪ್ರಾಕೃತನಂತೆ ನೀನು ಹೀಗೆ ತಟ್ಟನೆ ಕೋಪವಶನಾಗುವುದು ಯುಕ್ತವಲ್ಲ ಕಾಶ್ಯಸಾಧಕರಾದ ನಿನ್ನಂತ ಹ ಮಹಾಪುರುಷರು ಯುಕ್ತಾಯುಕ್ತವನ್ನರಿಯದೆ ಹೀಗೆ ಕೋಪಕ್ಕೆ ಅವ ಕಾಲಕೊಡಬಾರದು ನೀನು ಸಮಸ್ತಧಗಳನ್ನೂ ಬಲ್ಲವನು ಸುಗ್ರೀವನಿ ಗಾಗಿ ನಾನೇ ನಿನ್ನ ಮನ್ನಣೆಯನ್ನು ಬೇಡುತ್ತಿರುವೆನು ಅತ್ಯಾಕ್ರೋಶದಿಂ ದುಂಟಾದ ಈ ಕಳವಳವನ್ನು ಬಿಟ್ಟುಬಿಡು ಪ್ರಸನ್ನ ನಾಗು, ಇನ್ನು ಸ್ವಲ್ಪ ಕಾಲದೊಳಗಾಗಿ ಈ ಸುಗ್ರೀವನು ರಾಮನ ಕಾಮ್ಯಾರ್ಥವಾಗಿ, ತನ್ನ ಪ್ರಿಯ ಪತ್ನಿ ಯಾದ ರುಮೆಯನ್ನೂ, ನನ್ನನ್ನೂ, ತನ್ನ ರಾಜ್ಯವನ್ನೂ ಧನಧಾನ್ಯರತ್ನಗ ಇನ್ನೂ ಇತರಭೋಗಗಳನ್ನೂ ಬಿಟ್ಟು ಅವನೊಡನೆ ಹೊರಟುಬಿಡುವನೆಂದೇ